ಜಿನ್ನಾ ನಿವಾಸ ಕೆಡವಲು ಒತ್ತಾಯ
Team Udayavani, Mar 28, 2017, 11:36 AM IST
ಮುಂಬಯಿ: ಆ ಸ್ಥಳದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 2,602 ಕೋಟಿ ರೂ. ಜಾಗದ ವಿಸ್ತೀರ್ಣ 2.5 ಎಕರೆ. ಈ ಸ್ಥಳ ಇರುವುದು ದಕ್ಷಿಣ ಮುಂಬೈನಲ್ಲಿ. ಇಲ್ಲಿರುವುದು ಪಾಕಿಸ್ಥಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅವರ ‘ಜಿನ್ನಾ ಹೌಸ್’ ಬಹಳ ಸಂಕ್ಷಿಪ್ತ ವಿವರಣೆ. ಐತಿಹಾಸಿಕ ಮಹತ್ವ ಇರುವ ಈ ಸ್ಥಳದಲ್ಲಿರುವ ಕಟ್ಟಡ ಕೆಡವಿ, ಅಲ್ಲೊಂದು ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಬೇಕು ಎಂದು ಮುಂಬೈನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ, ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಂಗಲೆಯ ನಿರ್ವಹಣೆಗಾಗಿ ವೃಥಾ ವೆಚ್ಚ ಮಾಡಲಾಗುತ್ತಿದೆ. 1930ರಲ್ಲಿ ನಿರ್ಮಿಸಲಾಗಿರುವ ಈ ಬಂಗಲೆಯಲ್ಲಿ ದೇಶ ವಿಭಜನೆಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಹೀಗಾಗಿ ಅದನ್ನು ಕೆಡವಿ ಹಾಕಬೇಕು’ ಎಂದು ವಾದಿಸಿದ್ದಾರೆ. ಇಟಲಿಯ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಬಂಗಲೆ ದಶಕಗಳ ಕಾಲ ಬ್ರಿಟನ್‌ನ ಡೆಪ್ಯುಟಿ ಹೈಕಮಿಷನರ್ ಅವರ ನಿವಾಸವೂ ಆಗಿತ್ತು. 1982ರಲ್ಲಿ ಅದನ್ನು ತೆರವುಗೊಳಿಸಿದ ಬಳಿಕ ಆ ಹಳೆಯ ಅದ್ಧೂರಿ ನಿವಾಸ ಪಾಳು ಬೀಳಲು ಆರಂಭಿಸಿತ್ತು. ಪಾಕಿಸ್ಥಾನ ಸರಕಾರ ಕೂಡ ದ್ವಿಪಕ್ಷೀಯ ಮಾತುಕತೆ ವೇಳೆ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುತ್ತಲೇ ಬಂದಿತ್ತು. 2007ರಲ್ಲಿ ನ್ಯೂಯಾರ್ಕ್‌ನಲ್ಲಿರುವ ಜಿನ್ನಾರ ಪುತ್ರಿ ಡಿನಾ ವಾಡಿಯಾ ಬಂಗಲೆಯ ಒಡೆತನ ನೀಡಬೇಕೆಂದು ಬಾಂಬೆ ಹೈಕೋ ರ್ಟಿಗೆ ಮನವಿ ಮಾಡಿದ್ದರು. ಇತ್ತೀಚೆಗೆ ಸಂಸತ್‌ನಲ್ಲಿ ಶತ್ರು ರಾಷ್ಟ್ರ ಆಸ್ತಿ ಕಾಯ್ದೆ ಅಂಗೀಕಾರಗೊಂಡಿರುವುದರಿಂದ ಜಿನ್ನಾ ಹೌಸ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದಿದ್ದಾರೆ ಲೋಧಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.