“ಫಸ್ಟ್ಡೇ, ಫಸ್ಟ್ ಶೋ’ ಆತಂಕ
ಜಿಯೋ ಬ್ರಾಡ್ಬ್ಯಾಂಡ್ ಬಗ್ಗೆ ಪಿವಿಆರ್, ಐನಾಕ್ಸ್ ಕಳವಳ
Team Udayavani, Aug 14, 2019, 5:04 AM IST
ಹೊಸದಿಲ್ಲಿ: ರಿಲಯನ್ಸ್ ಜಿಯೋ ಸಂಸ್ಥೆಯಿಂದ ಮುಂದಿನ ತಿಂಗಳು ಆರಂಭ ಗೊಳ್ಳ ಲಿರುವ ಬ್ರಾಡ್ಬ್ಯಾಂಡ್ ಸೇವೆಯಡಿ, ಮುಂದಿನ ವರ್ಷದ ಮಧ್ಯದಿಂದ ಜಾರಿಗೆ ಬರಲಿರುವ ಫಸ್ಟ್ ಡೇ ಫಸ್ಟ್ ಶೋ ಸೌಲಭ್ಯದ ಬಗ್ಗೆ ದೇಶದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ದೈತ್ಯ ಸಂಸ್ಥೆಗಳಾದ ಪಿವಿಆರ್ ಹಾಗೂ ಐನಾಕ್ಸ್ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.
ಫಸ್ಟ್ ಡೇ, ಫಸ್ಟ್ ಶೋ ಸೌಲಭ್ಯವು, ತಲೆ ತಲಾಂತರದಿಂದ ಬಂದಿರುವ ಸಿನಿಮಾ ನೋಡುವ ಸಾಂಪ್ರದಾಯಿಕ ಪರಂಪರೆ ಯನ್ನೇ ನಾಶ ಮಾಡುತ್ತದೆ. ಜತೆಗೆ, ಮನೆ ಯಲ್ಲಿ ಕುಳಿತು ಸಿನಿಮಾ ನೋಡುವುದಕ್ಕೂ, ಚಿತ್ರ ಮಂದಿರಗಳಲ್ಲಿ ನೋಡುವುದಕ್ಕೂ ವ್ಯತ್ಯಾಸ ಗಳಿವೆ ಎಂದಿವೆ. ಜತೆಗೆ ಈಗ ಜಾರಿಯಲ್ಲಿ ರುವಂತೆ, ಚಿತ್ರ ಬಿಡುಗಡೆಯಾದ 8 ವಾರ ಗ ಳವರೆಗೆ ಇತರ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡದ ನಿಯ ಮವನ್ನು ನಿರ್ಮಾಪಕರು ಮುಂದುವರಿಸ ಬೇಕೆಂದು ಚಿತ್ರ ನಿರ್ಮಾಪಕರನ್ನು ಕೋರಿದೆ.
ಷೇರು ಮೌಲ್ಯ ಏರಿಕೆ: ಜಿಯೋ ಬ್ರಾಡ್ಬ್ಯಾಂಡ್ನ ಸೇವೆಯ ಬಗ್ಗೆ ಘೋಷಣೆಯಾದ ಮರುದಿನವೇ ಅಂದರೆ, ಮಂಗಳವಾರ ರಿಲಯನ್ಸ್ ಕಂಪೆನಿಯ ಷೇರುಗಳ ಮೌಲ್ಯ ಶೇ.10ರಷ್ಟು ಏರಿಕೆಯಾಗಿದೆ. ಇದು, 2009ರ ನಂತರ ರಿಲಯನ್ಸ್ ಷೇರುಗಳ ಮೌಲ್ಯದಲ್ಲಿ ಆದ ಅತಿ ದೊಡ್ಡ ಏರಿಕೆ ಎನ್ನಲಾಗಿದೆ. ವೊಡಾ ಫೋನ್, ಭಾರ್ತಿ ಏರ್ಟೆಲ್ ಷೇರುಗಳ ಮೌಲ್ಯ ಕ್ರಮವಾಗಿ ಶೇ. 5 ಮತ್ತು ಶೇ. 4ರಷ್ಟು ಕುಸಿದಿವೆ ಎನ್ನಲಾಗಿದೆ. ಇದೇ ವೇಳೆ, ವ್ಯಾಪಾರ ಸಮರ, ಹಾಂಕಾಂಗ್ ಪ್ರತಿಭಟನೆ ಮತ್ತಿತರ ಬೆಳವಣಿಗೆಗಳಿಂದಾಗಿ ಹೂಡಿಕೆ ದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿ ಸದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ 624 ಅಂಕ ಕುಸಿದು, 37,958ರಲ್ಲಿ ಅಂತ್ಯಗೊಂಡಿದೆ. ನಿಫ್ಟಿ 184 ಅಂಕ ಕುಸಿತ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.