ದೀಪಾವಳಿಗೆ ರಿಲಯನ್ಸ್ 5ಜಿ ಗಿಫ್ಟ್; 2 ತಿಂಗಳಲ್ಲಿ ನಾಲ್ಕು ನಗರಕ್ಕೆ ಕಾಲಿಡಲಿದೆ 5ಜಿ
ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಘೋಷಣೆ
Team Udayavani, Aug 30, 2022, 6:55 AM IST
ಮುಂಬೈ: ಬಹುನಿರೀಕ್ಷಿತ 5ಜಿ ನೆಟ್‌ವರ್ಕ್ ಇನ್ನೆರೆಡು ತಿಂಗಳಲ್ಲಿ ಸಿಗಲಿದೆ. ದೀಪಾವಳಿ ವೇಳೆಗೆ ಜಿಯೋ 5ಜಿ ಸೌಲಭ್ಯವನ್ನು ಜಾರಿಗೆ ತರುವುದಾಗಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಸೋಮವಾರ ಘೋಷಿಸಿದ್ದಾರೆ.
ರಿಲಯನ್ಸ್‌ನ 45ನೇ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಮೊದಲಿಗೆ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಜಿಯೋ 5ಜಿ ಜಾರಿಗೆ ಬರಲಿದೆ. 2023ರ ವೇಳೆಗೆ ದೇಶದ ಮೂಲೆ ಮೂಲೆಯಲ್ಲೂ 5ಜಿ ಲಭ್ಯವಿರಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಈ ಸೇವೆಗಾಗಿ ರಿಲಯನ್ಸ್ 2.75 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿದೆ.
“ನಮ್ಮ 5ಜಿ ಸೇವೆಯು 4ಜಿ ಮೇಲೆ ಅವಲಂಬಿತವಾಗಿರದ ಅತ್ಯಾಧುನಿಕ ಸ್ಟಾಂಡ್ ಅಲೋನ್ 5ಜಿ ತಂತ್ರಜ್ಞಾನದಲ್ಲಿರುತ್ತದೆ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಅತ್ಯಾಧುನಿಕ 5ಜಿ ನೆಟ್‌ವರ್ಕ್ ಆಗಿರಲಿದೆ. 2000 ಇಂಜಿನಿಯರ್‌ಗಳು ಈ ನೆಟ್‌ವರ್ಕ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಗೂಗಲ್‌ನೊಂದಿಗೆ ಸೇರಿಕೊಂಡು ಜಿಯೋ 5ಜಿ ಫೋನನ್ನೂ ತರಲು ಯತ್ನಿಸಲಾಗುತ್ತಿದೆ’ ಎಂದಿದ್ದಾರೆ ಮುಕೇಶ್ ಅಂಬಾನಿ.
ಮಕ್ಕಳಿಗೆ ಜವಾಬ್ದಾರಿ ಹಂಚಿಕೆ:
ಇದೇ ಸಭೆಯಲ್ಲಿ ಮುಕೇಶ್ ತಮ್ಮ ಪುತ್ರಿ ಇಶಾ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿರುವ ರಿಲಯನ್ಸ್ ರಿಟೇಲ್‌ಗೆ ಮುಖ್ಯಸ್ಥೆಯನ್ನಾಗಿ ಘೋಷಿಸಿದ್ದಾರೆ. ಹಾಗೆಯೇ ಪುತ್ರ ಅನಂತ್‌ರನ್ನು ಎನರ್ಜಿ ಬ್ಯುಸಿನೆಸ್‌ನ ಹೊಸ ನಾಯಕ ಎಂದು ಕರೆದಿದ್ದಾರೆ.
ಮುಕೇಶ್ ಪ್ರಮುಖ ಘೋಷಣೆಗಳು:
– ಪೆಟ್ರೋಕೆಮಿಕಲ್ ಸಾಮರ್ಥ್ಯ ವಿಸ್ತರಣೆಗೆ 5 ವರ್ಷಗಳಲ್ಲಿ 75,000 ಕೋಟಿ ರೂ. ಹೂಡಿಕೆ.
– ಜಿಯೋ ಮಾರ್ಟ್ ಸಹಭಾಗಿತ್ವದಲ್ಲಿ ವಾಟ್ಸ್‌ಆ್ಯಪ್‌ನಿಂದ ಇನ್-ಆ್ಯಪ್ ಶಾಪಿಂಗ್ ಸೌಲಭ್ಯ. ವಾಟ್ಸ್‌ಆ್ಯಪ್ ಚಾಟ್ ಮೂಲಕ ಜಿಯೋಮಾರ್ಟ್‌ನಿಂದ ಉತ್ಪನ್ನಗಳನ್ನು ಖರೀದಿಸಿ, ವಾಟ್ಸ್‌ಆ್ಯಪ್ ಪೇ ಮೂಲಕ ಹಣ ಪಾವತಿಗೆ ಅವಕಾಶ.
– ಸೌರಫಲಕ, ಎಲೆಕ್ಟ್ರೋಲೈಸರ್‌ಗಳು, ಇಂಧನ ಕೋಶ ಮತ್ತಿತರ ಪವರ್ ಎಲೆಕ್ಟ್ರಾನಿಕ್ಸ್‌ಗಳಿಗೆ ಸಂಬಂಧಿಸಿದ 5ನೇ ಗಿಗಾ ಫ್ಯಾಕ್ಟರಿ ಸ್ಥಾಪನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.