ಜಮ್ಮು ಕಾಶ್ಮೀರ : ಪಾಕ್ ಪಡೆಗಳ ಗುಂಡಿನ ದಾಳಿಗೆ ಮಹಿಳೆ ಬಲಿ
Team Udayavani, Aug 12, 2017, 11:30 AM IST
ಕುಪ್ವಾರಾ : ಇಂದು ಶನಿವಾರ ನಸುಕಿನ 5.30ರ ವೇಳೆಗೆ ಜಮ್ಮು ಕಾಶ್ಮೀರದ ಮೇಂಧಾರ್ ವಲಯದಲ್ಲಿ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ 45ರ ಹರೆಯದ ಮಹಿಳೆಯೊಬ್ಬರು ಅಸುನೀಗಿದರು.
ಮೃತ ಮಹಿಳೆಯನ್ನು ರಕಿಯಾ ಬೇಗಂ ಎಂದು ಗುರುತಿಸಲಾಗಿದೆ. ಈಕೆ ಮೇಂಧಾರ್ನ ಗೋಲಾತ್ ಮೇಲ್ಭಾಗದ ನಿವಾಸಿಯಾಗಿದ್ದಾರೆ ಎಂದು ಮೇಂಧಾರ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಿಯಾಜ್ ತಾಂತ್ರೇ ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಾಲಾರೂಸ್ ಅರಣ್ಯ ಪ್ರದೇಶದಲ್ಲಿನ 42ನೇ ರಾಷ್ಟ್ರೀಯ ರೈಫಲ್ಸ್ ಪಡೆಯ ಮುಖ್ಯ ಕಾರ್ಯಾಲಯವನ್ನು ಗುರಿ ಇರಿಸಿಕೊಂಡು ಪಾಕ್ ಪಡೆಗಳು ಶುಕ್ರವಾರ ತಡರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದವು.
ಈ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಗಾಯಗೊಂಡಿದ್ದು ಆತನನ್ನು ದ್ರಗ್ಮೂಲಾ ಮಿಲಿಟರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಈ ವಲಯದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.