ಜಮ್ಮು ಕಾಶ್ಮೀರ ಸರಕಾರದಿಂದ ಜಿಎಸ್‌ಟಿ ಪಾಸ್; ವಿಪಕ್ಷಗಳ ಪ್ರತಿಭಟನೆ
Team Udayavani, Jul 5, 2017, 6:48 PM IST
ಹೊಸದಿಲ್ಲಿ : ಕಳೆದ ಜೂನ್ 30ರ ಗಡುವಿನೊಳಗೆ ಐತಿಹಾಸಿಕ ಜಿಎಸ್‌ಟಿ ಪರೋಕ್ಷ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ವಿಫಲವಾಗಿರುವ ದೇಶದ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ ಇಂದು ಬುಧವಾರ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಜಿಎಸ್‌ಟಿ ಜಾರಿಗೆ ತರುವ ಠರಾವನ್ನು ಪಾಸು ಮಾಡಿತು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಕಳೆದ ಸೋಮವಾರ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಪತ್ರ ಬರೆದು “ಜಿಎಸ್‌ಟಿ ಜಾರಿಗೆ ತರದಿದ್ದಲ್ಲಿ ರಾಜ್ಯದಲ್ಲಿ ಬೆಲೆ ಏರಿಕೆ ಮತ್ತು ಕೈಗಾರಿಕೆಗಳಿಗೆ ಅನನುಕೂಲವಾಗುವ ದುಷ್ಪರಿಣಾಮಗಳು ಕಂಡುಬರುವುವು’ ಎಂಬ ಎಚ್ಚರಿಕೆಯನ್ನು ನೀಡಿದ್ದರು.
ರಾಜ್ಯದಲ್ಲಿನ ವಿವಿಧ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುವ ಕಾರಣ ರಾಜ್ಯ ಸರಕಾರವು ಜಿಎಸ್‌ಟಿ ಕುರಿತಾದ ಸಮಾನ ಅಭಿಮತವನ್ನು ರೂಪಿಸುವ ಸಲುವಾಗಿ ಸರ್ವ ಪಕ್ಷ ಸಲಹಾ ಸಮೂಹವೊಂದನ್ನು ರಚಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.