ಶೇ.75 ಕಡ್ಡಾಯ ಹಾಜರಾತಿ: JNU ವಿದ್ಯಾರ್ಥಿಗಳ ಪ್ರಬಲ ಪ್ರತಿಭಟನೆ
Team Udayavani, Feb 16, 2018, 11:11 AM IST
ಹೊಸದಿಲ್ಲಿ : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಮತ್ತೆ ಸುದ್ದಿಯಲ್ಲಿದೆ – ಆದರೆ ತಪ್ಪು ಕಾರಣಕ್ಕೆ !
ವಿವಿ ವಿದ್ಯಾರ್ಥಿಗಳಿಗೆ 75 ಶೇ. ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿರುವುದಕ್ಕೆ ಕೋಪೋದ್ರಿಕ್ತರಾಗಿರುವ ವಿದ್ಯಾರ್ಥಿಗಳು ವೈಸ್ ಚಾನ್ಸಲರ್ ಎ, ಜಗದೀಶ್ ಕುಮಾರ್ ಅವರನ್ನು ಘೇರಾವ್ ಮಾಡುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಶೇ.75ರ ಕಡ್ಡಾಯ ಹಾಜರಾತಿ ಕ್ರಮವು ವಿದ್ಯಾರ್ಥಿಗಳನ್ನು ಕಾನೂನು ಬಾಹಿರವಾಗಿ ಕೂಡಿ ಹಾಕುವ ಕ್ರಮವಾಗಿದೆ ಎಂದು ಜೆಎನ್‌ಯು ಪ್ರೊಫೆಸರ್‌ಗಳು ಹೇಳಿದ್ದಾರೆ.
ಇದೇ ವೇಳೆ ಪ್ರತಿಭಟನೆ ನಿರತ ಕೋಪೋದ್ರಿಕ್ತ ವಿದ್ಯಾರ್ಥಿಗಳು, ವಿವಿಯ ರೆಕ್ಟರ್ ಚಿಂತಾಮಣಿ ಮಹಾಪಾತ್ರ ಮತ್ತು ರಾಣಾ ಪ್ರತಾಪ್ ಸಿಂಗ್ ಮತ್ತು ಇತರ ಸಿಬಂದಿಗಳು ಕಟ್ಟಡದಿಂದ ಹೊರ ಹೋಗದಂತೆ ತಡೆದು ಸುತ್ತುವರಿದಿದ್ದಾರೆ.
ವಿವಿ ಕಟ್ಟಡವನ್ನು ಸುತ್ತುವರಿಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೈ ಕೈ ಜೋಡಿಸಿ ಮಾನವ ಸರಪಳಿಯನ್ನು ರಚಿಸಿದ್ದಾರೆ. ವಿವಿ ಆ ಆಡಳಿತ ಬ್ಲಾಕ್‌ನ ಮುಖ್ಯ ದ್ವಾರಕ್ಕೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳು ವಿವಿ ಕಟ್ಟಡ ಪ್ರವೇಶಿಸದಂತೆ ಸೆಕ್ಯುರಿಟಿ ಗಾರ್ಡ್‌ಗಳ ಮೂಲಕ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್ ಪಡೆಯಲು ಶೇ.75ರ ಹಾಜರಾತಿಯನ್ನು ಕಡ್ಡಾಯ ಮಾಡಿರುವ ಕ್ರಮವನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಶೇ.75 ಕಡ್ಡಾಯ ಹಾಜರಾತಿ, ಜೆಎನ್‌ಯು ವಿದ್ಯಾರ್ಥಿಗಳು, ಪ್ರಬಲ ಪ್ರತಿಭಟನೆ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.