ಜೆಎನ್‌ಯು ಹಿಂಸೆ: 11 ದೂರು ದಾಖಲು : “ಕೊಲೆ ಯತ್ನ’ ದೂರು ನೀಡಿದ ಐಷೆ
Team Udayavani, Jan 9, 2020, 12:09 AM IST
ಹೊಸದಿಲ್ಲಿ: ಜೆಎನ್‌ಯು ಹಿಂಸಾ ಚಾರಕ್ಕೆ ಸಂಬಂಧಿಸಿ ಒಟ್ಟು 11 ದೂರುಗಳು ದಾಖಲಾಗಿರುವುದಾಗಿ ದಿಲ್ಲಿ ಪೊಲೀಸರು ಬುಧವಾರ ಹೇಳಿದ್ದಾರೆ. ಈ ಪೈಕಿ ಒಂದು ದೂರು ವಿವಿಯ ಪ್ರೊಫೆಸರ್ ಸಲ್ಲಿಸಿದ್ದು, 7 ದೂರುಗಳು ಎಡಪಂಥೀಯ ಮತ್ತು 3 ದೂರುಗಳು ಬಲಪಂಥೀಯ ವಿದ್ಯಾರ್ಥಿಗಳು ಸಲ್ಲಿಸಿದವು ಆಗಿವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಘಟನೆ ಸಂಬಂಧ ಯಾರನ್ನೂ ಈವರೆಗೂ ಬಂಧಿಸಿಲ್ಲ ಎಂದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಒಕ್ಕೂಟದ ನಾಯಕಿ ಐಷೆ ಘೋಷ್ ತಮ್ಮ ವಿರುದ್ಧ ಕೊಲೆ ಯತ್ನ ನಡೆದಿರುವುದಾಗಿ ದೂರು ನೀಡಿದ್ದು, ಅದರ ಆಧಾರದಲ್ಲಿ ಎಫ್ಐಆರ್ ದಾಖಲಿ ಸುವಂತೆ ಕೋರಿದ್ದಾರೆ.
ಇನ್ನೊಂದೆಡೆ, ಸುಪ್ರೀಂ ಮೇಲ್ವಿಚಾರಣೆಯಲ್ಲಿ ಪ್ರಕರಣದ ಕುರಿತು ತನಿಖೆಯಾಗುವುದಿದ್ದರೆ ನಾವು ಅದಕ್ಕೆ ಸಿದ್ಧರಾಗಿದ್ದೇವೆ ಎಂದು ಎಬಿವಿಪಿ ರಾಜ್ಯಾಧ್ಯಕ್ಷ ಸಪ್ತರ್ಷಿ ಸರ್ಕಾರ್ ಹೇಳಿದ್ದಾರೆ.
ಇದೇ ವೇಳೆ, ವಿದ್ಯಾರ್ಥಿ ನಾಯಕಿ ಐಷೆ ಘೋಷ್ ನಿಜಕ್ಕೂ ಗಾಯಗೊಂಡಿದ್ದರೇ ಅಥವಾ ಮುಖಕ್ಕೆ ಕೆಂಪು ಬಣ್ಣದ ಪೈಂಟ್ ಹಚ್ಚಿಕೊಂಡು ರಕ್ತ ಬಂದವರಂತೆ ನಾಟಕ ಆಡಿದರೇ ಎಂಬ ಬಗ್ಗೆಯೂ ತನಿಖೆ ಆಗ ಬೇಕು ಎಂದು ಪ.ಬಂಗಾಲ ಬಿಜೆಪಿ ರಾಜ್ಯಾ ಧ್ಯಕ್ಷ ದಿಲೀಪ್ ಘೋಷ್ ಆಗ್ರಹಿಸಿದ್ದಾರೆ.
ಮುಚ್ಚುವ ಸಲಹೆ ಕೊಟ್ಟಿಲ್ಲ: ಈ ನಡುವೆ, ವಿವಿಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ನಾನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲಹೆ ನೀಡಿಲ್ಲ ಎಂದು ಕುಲಪತಿ ಎಂ. ಜಗದೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ಕುಲಪತಿಯೊಂದಿಗೆ ಸಚಿವಾಲಯ ಮಾತು ಕತೆ ನಡೆಸಿದ್ದು, “ಜೆಎನ್‌ಯು ಎನ್ನುವುದು ಹೆಸರುವಾಸಿ ವಿವಿಯಾಗಿದ್ದು, ಅದನ್ನು ಹಾಗೆಯೇ ನಿರ್ವಹಿಸಿ. ವಿದ್ಯಾರ್ಥಿಗಳೊಂ ದಿಗೆ ಮಾತುಕತೆ ನಡೆಸಿ, ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ’ ಎಂದು ಸೂಚಿಸಿದೆ.
ನಾಳೆ ನಿಮ್ಮ ಮಗಳು: ಜೆಎನ್‌ಯು ಘಟನೆ ಖಂಡಿಸಿ ಪ.ಬಂಗಾಲದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಐಷ್ ಘೋಷ್ ತಾಯಿ ಶರ್ಮಿಷ್ಠಾ ಘೋಷ್, ಜೆಎನ್‌ಯು ಕುಲಪತಿಗಳ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮುಸು ಕುಧಾರಿ ಗ್ಯಾಂಗ್ ಬಂದು ಹಿಂಸಾಚಾರ ಎಸಗುವಾಗ ನಮ್ಮ ಮಕ್ಕಳನ್ನು ರಕ್ಷಿಸುವಲ್ಲಿ ಕುಲಪತಿಗಳು ವಿಫಲರಾಗಿದ್ದಾರೆ. ಇಂದು ನನ್ನ ಮಗಳು, ನಾಳೆ ಮತ್ತೂಬ್ಬರ ಮಗಳು ಬಲಿಪಶುವಾಗಬಹುದು. ವಿದ್ಯಾರ್ಥಿಗಳಿಗೆ ಸುರಕ್ಷತೆ ನೀಡಲಾಗದ ಕುಲಪತಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ದೀಪಿಕಾ ನಡೆಯನ್ನು ಆಕ್ಷೇಪಿಸುವಂತಿಲ್ಲ: ಜಾಬ್ಡೇಕರ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ಅವರ “ಛಪಕ್’ ಸಿನೆಮಾ ಬಹಿಷ್ಕರಿಸುವಂತೆ ಬಿಜೆಪಿಯ ಕೆಲವು ನಾಯಕರೇ ಕರೆ ನೀಡಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್, “ಕೇವಲ ಕಲಾವಿದರು ಮಾತ್ರವಲ್ಲ, ಸಾಮಾನ್ಯ ವ್ಯಕ್ತಿಗೂ ತನ್ನಿಚ್ಛೆ ಬಂದಲ್ಲಿಗೆ ಹೋಗುವ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಅದನ್ನು ಯಾರೂ ಆಕ್ಷೇಪಿಸುವಂತಿಲ್ಲ’ ಎಂದಿದ್ದಾರೆ.
ಮತ್ತೂಂದೆಡೆ, ದಿಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ತುಕೆxà ತುಕೆxà ಗ್ಯಾಂಗ್‌ಗೆ ಬೆಂಬಲ ಸೂಚಿಸಿರುವ ದೀಪಿಕಾರ ಛಪಕ್ ಸಿನೆಮಾವನ್ನು ಬಹಿಷ್ಕರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಏತನ್ಮಧ್ಯೆ, ದೀಪಿಕಾ ಜೆಎನ್‌ಯು ಭೇಟಿ ಬೆಂಬಲಿಸಿ ಬುಧವಾರ ಪಾಕ್ ಸೇನೆಯ ವಕ್ತಾರ ಮೇ| ಜ| ಆಸಿಫ್ ಗಫೂರ್ ಟ್ವೀಟ್ ಮಾಡಿ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.