ನೀವು ನಕ್ಸಲ್ ಸೇರಿ, ನಾವು ಶೂಟ್ ಮಾಡ್ತೇವೆ: ಸಚಿವ ಆಹಿರ್ ವಿವಾದ
Team Udayavani, Dec 26, 2017, 11:26 AM IST
ಮುಂಬಯಿ : ಮಹಾರಾಷ್ಟ್ರದಲ್ಲಿ ತಾನು ಭಾಗವಹಿಸಿದ ವೈದ್ಯಕೀಯ ಕಾರ್ಯಕ್ರಮವೊಂದರಲ್ಲಿ ಹಿರಿಯ ವೈದ್ಯರು ಗೈರಾಗಿರುವುದನ್ನು ಕಂಡ ಆಕ್ರೋಶಿತರಾದ ಕೇಂದ್ರ ಸಚಿವ ಹಂಸರಾಜ್ ಆಹಿರ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿ ಮಾಡಿದ್ದಾರೆ.
“ನಿಮಗೆ (ವೈದ್ಯರಿಗೆ) ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲವೆಂದಾದರೆ ನೀವು ಮಾವೋವಾದಿ ಉಗ್ರ ಸಂಘಟನೆಗೆ ಸೇರಬಹುದು; ಆಗ ನಾವು ನಿಮ್ಮನ್ನು ಶೂಟ್ ಮಾಡುತ್ತೇವೆ’ ಎಂದು ಸಚಿವ ಆಹಿರ್ ಹೇಳಿರುವುದು ವೈದ್ಯರನ್ನು ತೀವ್ರವಾಗಿ ಕೆರಳಿಸಿದೆ.
ಸಚಿವ ಆಹಿರ್ ಅವರು ತಾನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ದಿನ 24 ತಾಸು ಔಷಧಿ ಸಿಗುವ ಸ್ಟೋರ್ ಒಂದನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಹಿರಿಯ ವೈದ್ಯರ ಗೈರಿನಿಂದ ಕೋಪಗೊಂಡು ಈ ಮಾತುಗಳನ್ನು ಆಡಿದ್ದರು.
“ಈ ಕಾರ್ಯಕ್ರಮಕ್ಕೆ ಮೇಯರ್ ಬಂದ್ರು, ಉಪ ಮೇಯರ್ ಬಂದ್ರು; ವೈದ್ಯರಿಗೆ ಬರಲು ಏನು ಧಾಡಿ ?’ ಎಂದು ಸಚಿವ ಆಹಿರ್ ಖಾರವಾಗಿ ಪ್ರಶ್ನಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ “ಉತ್ತಮ ಆಡಳಿತೆ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದ್ದು ಅದರಡಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಸಿವಿಲ್ ಸರ್ಜನ್ ಉಉದಯ್ ನವಾಡೆ ಮತ್ತು ಮೆಡಿಕಲ್ ಕಾಲೇಜಿನ ಡೀನ್ ಕೂಡ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು.
”ನಕ್ಸಲರಿಗೆ ಬೇಕಾಗಿರುವುದು ಏನು ? ಅವರಿಗೆ ಪ್ರಜಾಸತ್ತೆ ಬೇಡ; ಹಾಗೆಯೇ ಇವತ್ತು ಇಲ್ಲಿ ಗೈರಾಗಿರುವ ವೈದ್ಯರಿಗೆ ಕೂಡ ಪ್ರಜಾಸತ್ತೆ ಬೇಕಾಗಿಲ್ಲ. ಹಾಗಿರುವಾಗ ಅವರು ನಕ್ಸಲ್‌ಗೆ ಸೇರುವುದೇ ಲೇಸು; ಅಂತಿರುವಾಗ ನೀವಿನ್ನೂ ಏಕೆ ಇಲ್ಲಿದ್ದೀರಿ ? ಹೋಗಿ ನಕ್ಸಲ್ ಪಡೆ ಸೇರಿಕೊಳ್ಳಿ; ನಾವು ನಿಮ್ಮ ಮೇಲೆ ಗುಂಡನ್ನು ಎಸೆಯುತ್ತೇವೆ; ಸಚಿವನಾಗಿ ನಾನಿಲ್ಲಿಗೆ ಬಂದಿರುವಾಗ ಹಿರಿಯ ವೈದ್ಯ ರಜೆಯಲ್ಲಿದ್ದಾರೆ. ಇದಕ್ಕೆ ನಾನು ಏನು ಹೇಳಬೇಕು” ಎಂದು ಸಚಿವ ಆಹಿರ್ ಮರಾಠಿಯಲ್ಲಿ ಮಾತನಾಡುತ್ತಾ ಗುಡುಗಿದರು.
ಮಹಾರಾಷ್ಟ್ರದ ನಕ್ಸಲ್ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ಚಂದ್ರಾಪುರವೂ ಒಂದಾಗಿದೆ. ಕೇಂದ್ರ ಸರಕಾರ ಇದನ್ನು ಮಾವೋ ಹಿಂಸಾಗ್ರಸ್ತ ಜಿಲ್ಲೆ ಎಂದು ಗುರುತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.