ಜೋಶಿಮಠದಲ್ಲಿ ಮತ್ತೆರೆಡು ಹೊಟೇಲ್ ಗಳು ಕುಸಿಯುವ ಭೀತಿಯಲ್ಲಿ
Team Udayavani, Jan 16, 2023, 8:40 AM IST
ಡೆಹ್ರಾಡೂನ್: ಈಗಾಗಲೇ ಅತಂತ್ರ ಸ್ಥಿತಿಯಲ್ಲಿರುವ ಜೋಶಿಮಠದಲ್ಲಿ ಮತ್ತೆರಡು ಹೊಟೇಲ್ ಕಟ್ಟಡಗಳು ಬಾಗಿದ್ದು, ಕುಸಿದು ಬೀಳುವ ಹಂತ ತಲುಪಿದೆ. ಜತೆಗೆ ಔಲಿ ರೋಪ್‌ವೇ ಹಾಗೂ ಇನ್ನಿತರ ಪ್ರದೇಶಗಳಲ್ಲೂ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಜೋಶಿಮಠದಲ್ಲಿ ಈಗಾಗಲೇ 826 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು,
ಈ ಪೈಕಿ 165 ಮನೆಗಳು ಅಸುರಕ್ಷಿತ ವಲಯದಲ್ಲಿವೆ. ಇದರ ಜತೆಗೆ ಅಪಾಯವೆಂದಿದ್ದ 2 ಹೊಟೇಲ್‌ಗಳನ್ನು ನೆಲಸಮಗೊಳಿಸುತ್ತಿದ್ದು, ಇನ್ನೂ ಕಾರ್ಯ ಪ್ರಗತಿಯಲ್ಲಿರುವಾಗಲೇ, ಕೆ.ಪಿ ಕಾಲನಿಯ ಮತ್ತೆರೆಡು ಹೊಟೇಲ್‌ಗಳು ವಾಲಿರುವುದು ಪತ್ತೆಯಾಗಿದೆ. 4 ಅಡಿ ಅಂತರವನ್ನು ಹೊಂದಿದ್ದ ಹೊಟೇಲ್‌ಗಳ ನಡುವೆ ಈಗ ಕೆಲವೇ ಇಂಚುಗಳ ಅಂತರವಷ್ಟೇ ಇದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಏಷ್ಯಾದಲ್ಲೇ ಅತ್ಯಂತ ಉದ್ದದ ರೋಪ್ ವೇ ಎಂದು ಪರಿಗಣಿಸಲಾಗಿರವ ಔಲಿ ರೋಪ್ ವೇ ಬಳಿಯೂ 4 ಇಂಚು ಅಗಲ ಹಾಗೂ 20 ಅಡಿ ಉದ್ದದ ಬಿರುಕುಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಜೋಶಿಮಠ ಪ್ರಕರಣ ಸಂಬಂಧದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.