ಮೊಬೈಲ್ ಕದ್ದ ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿದ ಮಹಿಳಾ ಪತ್ರಕರ್ತೆ
Team Udayavani, Sep 14, 2020, 2:45 PM IST
ಹೊಸದಿಲ್ಲಿ: ತನ್ನ ಮೊಬೈಲ್ ಕದ್ದ ಕಳ್ಳರನ್ನು ಬೆನ್ನತ್ತಿದ ಮಹಿಳಾ ಪತ್ರಕರ್ತೆಯೊಬ್ಬರು, ಮೊಬೈಲ್ ಮಾತ್ರವಲ್ಲದೇ ಕಳ್ಳರನ್ನೂ ಹಿಡಿದ ಘಟನೆ ರಾಷ್ಟ್ರರಾಜಧಾನಿ ಹೊಸದಿಲ್ಲಿಯಲ್ಲಿ ನಡೆದಿದೆ.
ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಮಹಿಳಾ ಪತ್ರಕರ್ತೆಯನ್ನು ಅಭಿನಂದಿಸಿದ್ದಾರೆ.
ದೂರದರ್ಶನ ವಾಹಿನಿಯ ಪತ್ರಕರ್ತೆ ಇವರಾಗಿದ್ದು, ದಕ್ಷಿಣ ದಿಲ್ಲಿಯ ಮಾಲ್ವಿಯಾ ನಗರದಲ್ಲಿ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ಕಳ್ಳರು ಬೈಕ್ ನಲ್ಲಿ ಆಗಮಿಸಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಕೂಡಲೇ ಜಾಗೃತರಾದ ಪತ್ರಕರ್ತೆ ಕಳ್ಳರನ್ನು ಬೆನ್ನಟ್ಟಿದ್ದು, ಅವರುಗಳ ಬೈಕ್ ಪೊಲೀಸ್ ಬ್ಯಾರಿಕೇಡ್ ಗೆ ತಾಗಿ ನೆಲಕ್ಕುರುಳಿದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಕಳಂಕ ತರಲು ಕೆಲವರು ಸಂಚು ರೂಪಿಸಿದ್ದಾರೆ: ಉದ್ಧವ್ ಠಾಕ್ರೆ
ಕೂಡಲೇ ಮಹಿಳೆ ಮತ್ತು ಆಟೋ ರಿಕ್ಷಾ ಚಾಲಕ ಕಳ್ಳರನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಬ್ಬರು ದಿಲ್ಲಿಯ ತುಘಲಕ್ ಬಾದ್ ಪ್ರದೇಶದವರೆಂದು ಗುರುತಿಸಲಾಗಿದೆ. ಮಾದಕ ವಸ್ತು ಸೇವನೆಗೆ ಹಣ ಹೊಂದಿಸುವ ಸಲುವಾಗಿ ತಾವು ಈ ಕೃತ್ಯ ನಡೆಸಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.