ಕಾರ್ಯನಿರತ ಪತ್ರಕರ್ತರ ಹತ್ಯೆ ಕುರಿತು ವರದಿ ನೀಡಿದ IFJ
Team Udayavani, Mar 14, 2021, 3:53 PM IST
ನವದೆಹಲಿ: ಕಳೆದ 2020ರಲ್ಲಿ ವಿಶ್ವದಾದ್ಯಂತ ಬರೊಬ್ಬರಿ 65 ಕಾರ್ಯ ನಿರತ ಪತ್ರಕರ್ತರನ್ನು ಹೀನಾಯವಾಗಿ ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ ಬೆಳಕಿಗೆ ತಂದಿದೆ.
ಈ ಕುರಿತು ವರದಿ ಸಲ್ಲಿಸಿರುವ ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ ಸಂಸ್ಥೆ, ಕಳೆದ 2019 ಕ್ಕೆ ಹೋಲಿಸಿದರೆ 2020 ರಲ್ಲಿ ದುಷ್ಕರ್ಮಿಗಳು 17 ಜನ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದಿದ್ದು, ಜೊತೆ ಜೊತೆಗೆ ತಮ್ಮ ಕೆಲಸದ ಕಾರಣದಿಂದಾಗಿ 200 ಕ್ಕೂ ಅಧಿಕ ಪತ್ರಕರ್ತರು ಜೈಲುವಾಸದಲ್ಲಿದ್ದಾರೆ ಎಂದು ತಿಳಿಸಿದೆ.
ಆಯ್ದ 16 ಪ್ರಮುಖ ದೇಶಗಳ ಮಾಹಿತಿ ಪ್ರಕಾರ ಬಾಂಬ್ ದಾಳಿ ಹಾಗೂ ಗುಂಡೇಟುಗಳ ಮೂಲಕ ಉದ್ದೇಶಪೂರ್ವಕವಾಗಿ ಹಲವಾರು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.
IFJ ಈ ಕುರಿತಾದ ಮಾಹಿತಿಗಳನ್ನು ಕಳೆದ 1990 ರಿಂದ ಈಚೆಗೆ ಕಲೆಹಾಕಲು ಆರಂಭಿಸಿದ್ದು, ಆ ಬಳಿಕ ಬರೊಬ್ಬರಿ 2,680 ಜನ ಪತ್ರಕರ್ತರು ಹತ್ಯೆಗೀಡಾಗಿದ್ದಾರೆ ಎನ್ನುವ ಅಂಶವನ್ನೂ ಕೂಡಾ ಇದು ಪ್ರಸ್ತುತಪಡಿಸಿದೆ.
ಈ ಕುರಿತಾಗಿ ಮಾಹಿತಿಯನ್ನು ನೀಡಿರುವ IFJ ನ ಪ್ರಧಾನ ಕಾರ್ಯದರ್ಶಿ ಆಂಥೋನಿ ಬೆಲ್ಲಾಂಜರ್, ಮೆಕ್ಸಿಕೊದಲ್ಲಿ ಪತ್ರಕರ್ತರ ಹತ್ಯೆಯ ಪ್ರಮಾಣ ಅಧಿಕವಾಗಿದ್ದು, ಜೊತೆ ಜೊತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಸೊಮಾಲಿಯಾದಲ್ಲಿಯೂ ಈ ಪ್ರಮಾಣ ಅಧಿಕವಾಗಿದೆ. ಇನ್ನು ಭಾರತದಲ್ಲಿಯೂ ಕೂಡಾ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಅಡೆತಡೆಗಳಿವೆ ಎಂದಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಗಡಿ ವಿಚಾರದಲ್ಲಿ ಪ್ರಚೋದನಾತ್ಮಕ ಪೋಸ್ಟ್: ಎಫ್ ಬಿ, ವಾಟ್ಸಪ್ ಅಡ್ಮಿನ್ ಗಳ ಮೇಲೆ FIR
ವಿಶ್ವದಲ್ಲಿ ಪತ್ರಕರ್ತರ ಮೇಲೆ ಹಿಂಸಾಚಾರ ನಡೆದಿರುವ ವಿಷಯದಲ್ಲಿ ಮೆಕ್ಸಿಕೊ ಮೊದಲ ಸ್ಥಾನದಲ್ಲಿದ್ದು, 2020 ರಲ್ಲಿ ಒಟ್ಟು 14 ಜನ ಪತ್ರಕರ್ತರನ್ನು ಇಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ಇದನ್ನು ಹೊರತುಪಡಿಸಿ ಪಾಕಿಸ್ತಾನ. ಅಫ್ಘಾನಿಸ್ತಾನ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡೆದಿದೆ ಎಂದು ವರದಿಯಾಗಿದೆ.
ಕೇವಲ ವೃತ್ತಿ ನಿರತ ಪತ್ರಕರ್ತರನ್ನು ಹತ್ಯೆ ಮಾಡಿರುವ ಮಾಹಿತಿ ಮಾತ್ರವಲ್ಲದೆ IFJ ಸಂಸ್ಥೆ ತಮ್ಮ ಕೆಲಸದ ಕಾರಣ ಮಾರ್ಚ್ 2021ರ ವರೆಗೆ ಸುಮಾರು 299 ಜನ ಪತ್ರಕರ್ತರು ಜೈಲುವಾಸದಲ್ಲಿದ್ದಾರೆ ಎಂಬ ಮಾಹಿತಿಯನ್ನೂ ಕೂಡಾ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.