ಜರ್ನಿ ಫಾರ್ ಟೈಗರ್ ಅಭಿಯಾನಕ್ಕಾಗಿ 28 ರಾಜ್ಯ ಸುತ್ತಿದ ಜೋಡಿ
Team Udayavani, Oct 30, 2019, 4:58 PM IST
ಅರಣ್ಯ ಪರಿಸರ ಸರಪಳಿಯಲ್ಲಿ ಹುಲಿಯ ಪಾತ್ರ ಪ್ರಮುಖವಾಗಿದೆ. ಆದರೆ ಇತ್ತೀಚೆಗೆ ವಿಶ್ವಾದ್ಯಂತ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಅವುಗಳ ಸಂತತಿ ರಕ್ಷಣೆ ಅಗತ್ಯದ್ದಾಗಿದೆ. ಈ ಉದ್ದೇಶವನ್ನಿಟ್ಟುಕೊಂಡು ಇಲ್ಲೊಂದು ಜೋಡಿ ಭಾರತದ ರಾಜ್ಯಗಳ ಮೂಲೆ ಮೂಲೆ ತಿರುಗಿದ್ದು, “ಜರ್ನಿ ಫಾರ್ ಟೈಗರ್’ ಎಂಬ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
28 ರಾಜ್ಯಗಳ ಪರ್ಯಟನೆ
ಕೋಲ್ಕತಾದ ರತೀಂದ್ರ ದಾಸ್ ಮತ್ತು ಗೀತಾಂಜಲಿ ಜೋಡಿ ಫೆಬ್ರವರಿ 15 ರಂದು ಪಶ್ಚಿಮ ಬಂಗಾಳದಿಂದ ಮೋಟಾರ್ ಸೈಕಲ್ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು, ಇದುವರೆಗೆ ಒಡಿಶಾ ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 28 ರಾಜ್ಯಗಳಿಗೆ ಭೇಟಿ ನೀಡಿ¨ªಾರೆ.
35 ಸಾವಿರ ಕಿ.ಮೀ. ಸುದೀರ್ಘ ಪ್ರಯಾಣ
ಅಸ್ಸಾಂ, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ…, ಚಂಡೀಗಢ, ದೆಹಲಿ, ರಾಜಸ್ಥಾನ, ಗುಜರಾತ್ ಸೇರಿದಂತೆ ಭಾರತದ ಅನೇಕ ರಾಜ್ಯಗಳಿಗೆ ಭೇಟಿ ನೀಡಿರುವ ರತೀಂದ್ರ ದಾಸ್ ದಂಪತಿ 35 ಸಾವಿರ ಕಿ.ಮೀ. ಪ್ರಯಾಣ ನಡೆಸಿದ್ದು 26,000 ಜನರಿಗೆ ಅರಿವು ಮೂಡಿಸಿದ್ದಾರೆ.
ಹುಲಿಗಳ ಪ್ರಾಮುಖ್ಯ ತಿಳಿಸುವ ಉದ್ದೇಶ
ಪರಿಸರದಲ್ಲಿ ಹುಲಿಗಳ ನಿಜವಾದ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನಿಟ್ಟುಕೊಂಡು ತಮ್ಮ ಪ್ರಯಾಣ ಆರಂಭಿಸಿರುವ ಈ ಜೋಡಿ ಮುಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ರಾಜ್ಯಗಳ ಹುಲಿ ಮೀಸಲು ಕೇಂದ್ರಗಳನ್ನೂ ಸಂಪರ್ಕಿಸುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
124 ಹುಲಿಗಳ ಕೊಲೆ
ಕಾಡು ಪ್ರಾಣಿ ಹಾಗೂ ಸಸ್ಯಗಳ ವ್ಯಾಪಾರದ ಬಗ್ಗೆ ನಿಗಾ ವಹಿಸುವ ಅಂ.ರಾ. ಮಟ್ಟದ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2000 ಮತ್ತು 2018 ರ ನಡುವೆ ಪ್ರತಿವರ್ಷ ಸರಾಸರಿ 124 ಹುಲಿಗಳು ಕೊಲ್ಲಲ್ಪಟ್ಟಿವೆ.
1,142 ಪ್ರಕರಣಗಳು
ವಿಶ್ವಾದ್ಯಂತ ಒಟ್ಟು 1,142 ಜಪ್ತಿ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಏಷ್ಯಾದ ಅತಿ ಹೆಚ್ಚು ಹುಲಿ ಸಂತತಿ ಇರುವ 13 ದೇಶಗಳಲ್ಲಿ ಶೇಕಡಾ 95.1 (1,086) ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.