ಎಸ್‌ಐಟಿ ಲೋಯಾ ಸಾವಿನ ತನಿಖೆ ನಡೆಸಲಿ: ಪ್ರತಿಪಕ್ಷಗಳು
Team Udayavani, Feb 10, 2018, 11:43 AM IST
ನವದೆಹಲಿ: ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವು ಪ್ರಕರಣವನ್ನು ಕೋರ್ಟ್ ನಿರ್ದೇಶಿತ ಎಸ್‌ಐಟಿ ತನಿಖೆಗೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಮನವಿ ಮಾಡಿದ್ದಾರೆ. ಸಿಬಿಐ ಅಥವಾ ಎನ್‌ಐಎ ಮೇಲೆ ಯಾವುದೇ ವಿಶ್ವಾಸವಿಲ್ಲ.
ಸುಪ್ರೀಂಕೋರ್ಟ್ ನೇತೃತ್ವದಲ್ಲಿ ಆಯ್ದ ಅಧಿಕಾರಿಗಳಿಂದ ಸ್ವತಂತ್ರ ತನಿಖೆ ನಡೆಸಬೇಕಿದೆ. ಈ ಬಗ್ಗೆ ರಾಷ್ಟ್ರಪತಿ
ಮಧ್ಯಪ್ರವೇಶಿಸಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ. ನಂತರ ಮಾತನಾಡಿದ ರಾಹುಲ್ ಗಾಂಧಿ, ಈ ಪ್ರಕರಣ
ಅನುಮಾನಾಸ್ಪದವಾಗಿದೆ ಎಂದು ಬಹುತೇಕ ಸಂಸದರು ಅಭಿಪ್ರಾಯಪಟ್ಟಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ವಿವಿಧ ಪಕ್ಷದ ಸಂಸದರು ಈ ವೇಳೆ ಹಾಜರಿದ್ದರು. ತನಿಖೆಯನ್ನು ಸಿಬಿಐ
ಅಥವಾ ಎನ್‌ಐಎ ಮೂಲಕ ಮಾಡಬಾರದು. ಈ ಸಂಸ್ಥೆಗಳು ಸರ್ಕಾರದ ಅಧೀನ ಸಂಸ್ಥೆಗಳಂತೆ ಕೆಲಸ ಮಾಡುತ್ತಿವೆ.
ನ್ಯಾಯಾಂಗ ನೇತೃತ್ವದ ಸಮಿತಿಯ ತನಿಖೆಯೊಂದೇ ಈ ಪ್ರಕರಣಕ್ಕೆ ನ್ಯಾಯ ಒದಗಿಸಬಲ್ಲದು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.