ಸಿಜೆಐ ಸಣ್ಣ ವಿವಾದ; ಬಹಿರಂಗ ಮಾಡಬಾರದಿತ್ತು: ಬಾರ್ ಕೌನ್ಸಿಲ್
Team Udayavani, Jan 13, 2018, 4:24 PM IST
ಹೊಸದಿಲ್ಲಿ : ಭಾರತದ ಸರ್ವೋಚ್ಚ ನ್ಯಾಯಾಲಯದ ಶ್ರೇಷ್ಠ ನ್ಯಾಯಮೂರ್ತಿಯವರ ಕಾರ್ಯ ವೈಖರಿಯನ್ನು ಪ್ರಶ್ನಿಸಿರುವ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ತಮ್ಮ ಭಿನ್ನಮತವನ್ನು ತಮ್ಮೊಳಗೇ ಮಾತುಕತೆಯ ಮೂಲಕ ಪರಹರಿಸಿಕೊಳ್ಳಬಹುದಿತ್ತು; ಅದನ್ನು ಬಹಿರಂಗಕ್ಕೆ ತರುವ ಅಗತ್ಯಇರಲಿಲ್ಲ ಏಕೆಂದರೆ ಅದೊಂದು ಸಣ್ಣ ವಿಷಯವಾಗಿತ್ತು ಎಂದು ಭಾರತದ ಬಾರ್ ಕೌನ್ಸಿಲ್ ಹೇಳಿದೆ.
ಬಾರ್ ಕೌನ್ಸಿಲ್ ಅಧ್ಯಕ್ಷರಾಗಿರುವ ಮನನ್ ಕುಮಾರ್ ಮಿಶ್ರಾ ಅವರು, “ಕೇಸುಗಳನ್ನು ಹಂಚಿ ಹಾಕುವ ವಿವಾದವು ಸಣ್ಣ ವಿಷಯವಾಗಿತ್ತು.ಅದನ್ನು ಮಾಧ್ಯಮದ ಮುಂದೆ ತಂದು ಬಹಿರಂಗ ಮಾಡಬೇಕಿರಲಿಲ್ಲ; ಒಂದೊಮ್ಮೆ ಸಿಜೆಐ ಜತೆಗೆ ಸಹಮತ ಏರ್ಪಡದಿದ್ದಲ್ಲಿ ಇತರ ನ್ಯಾಯಾಧೀಶರನ್ನು ಅಥವಾ ಬಾರ್ ಕೌನ್ಸಿಲ್ ಸದಸ್ಯರನ್ನು ಒಳಗೊಳಿಸಬಹುದಿತ್ತು; ಅದನ್ನು ಬಿಟ್ಟು ಇಷ್ಟೊಂದು ಸಣ್ಣ ವಿವಾದವನ್ನು ಬಹಿರಂಗಕ್ಕೆ ತಂದದ್ದು ತೀರ ನಿರಾಶಾದಾಯಕ; ದುಃಖಕರ’ ಎಂದು ಹೇಳಿದರು.
ಬಾರ್ ಕೌನ್ಸಿಲ್ ಸದಸ್ಯರು ಈ ಬಗ್ಗೆ ಸಭೆಯೊಂದನ್ನು ನಡೆಸಿ ನಿಯೋಗವೊಂದನ್ನು ಸಿದ್ಧಪಡಿಸಿ ಸಿಜೆಐ ದೀಪಕ್ ಮಿಶ್ರಾ ಅವರನ್ನು ಕಾಣಲಿದ್ದಾರೆ ಮತ್ತು ಈ ಬಗೆಯ ಸನ್ನಿವೇಶಗಳು ಇನ್ನು ಭವಿಷ್ಯದಲ್ಲಿ ಎಂದೂ ತಲೆ ಎತ್ತದಂತೆ ಮಾಡುವ ಮಾರ್ಗೋಪಾಯಗಳನ್ನು ಚರ್ಚಿಸಲಿದ್ದಾರೆ ಎಂದು ಮನನ್ ಮಿಶ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.