ಆಧಾರ್-ಪಾನ್ ಜೋಡಣೆಗೆ ಜು. 1 ಅಂತಿಮ ಗಡುವಲ್ಲ
Team Udayavani, Jun 30, 2017, 3:50 AM IST
ಹೊಸದಿಲ್ಲಿ: ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಆಧಾರ್-ಪಾನ್ ಜೋಡಣೆಗೆ ಜು. 1 ಕೊನೆಯ ದಿನಾಂಕ ಎಂದು ಧಾವಂತ ಬೇಕಿಲ್ಲ. ಜು. 1ರಿಂದ ಆಧಾರ್-ಪಾನ್ ಜೋಡಣೆ ಮಾಡಬೇಕೆಂದಿದೆಯೇ ಹೊರತು, ಆಧಾರ್-ಪಾನ್ ಜೋಡಣೆ ಮಾಡಲು ಜು. 1 ಕೊನೆಯ ದಿನಾಂಕವಲ್ಲ. ಅನಂತರವೂ ಜೋಡಣೆ ಮಾಡಬಹುದಾಗಿದೆ.
ಜು. 1 ಅನಂತರ ಆಧಾರ್ ಜೋಡಣೆ ಮಾಡದಿದ್ದರೆ ಪಾನ್ ಅಮಾನ್ಯಗೊಳ್ಳುತ್ತದೆ ಎಂಬ ಭೀತಿ ಹಿನ್ನೆಲೆಯಲ್ಲಿ ವರದಿ ಪ್ರಕಟಿಸಿರುವ ‘ದಿ ಎಕನಾಮಿಕ್ ಟೈಮ್ಸ್’, ಜು. 1ರ ಅನಂತರವೂ ಜೋಡಣೆ ಮಾಡಬಹುದಾಗಿದೆ ಎಂದು ಹೇಳಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ಅನ್ನು ಉಲ್ಲೇಖೀಸಿ ಈ ವಿಚಾರವನ್ನು ದೃಢಪಡಿಸಲಾಗಿದೆ. ಕಾಯ್ದೆಯನ್ವಯ, ಸರಕಾರವು ಆಧಾರ್-ಪಾನ್ ಜೋಡಣೆಗೆ ಗಡುವು ವಿಧಿಸಿ ಒಂದು ದಿನಾಂಕವನ್ನು ಘೋಷಿಸುತ್ತದೆ. ಆ ದಿನಾಂಕದ ಒಳಗೆ ಎಲ್ಲರೂ ಜೋಡಣೆ ಕಾರ್ಯ ಮುಗಿಸಬೇಕು. ಆದರೆ, ಸದ್ಯಕ್ಕೆ ಸರಕಾರ ಅಂಥ ಯಾವುದೇ ದಿನಾಂಕವನ್ನು ಘೋಷಿಸಿಲ್ಲ ಎಂದು ವರದಿ ಹೇಳಿದೆ.
ಆಧಾರ್ – ಪ್ಯಾನ್ ಲಿಂಕ್ ಮಾಡೋದು ಹೇಗೆ?: ಆದಾಯ ತೆರಿಗೆ ಇಲಾಖೆಯ https://incometaxindiaefiling.gov.in/ ವೆಬ್‌ಸೈಟನ್ನು ತೆರೆಯಿರಿ. ಅಲ್ಲಿ ಪ್ರೊಫೈಲ್ ಯೂಸರ್ ಐಡಿ, ಲಾಗಿನ್ ಪಾಸ್‌ವರ್ಡ್ ಹಾಕಿ ನಿಮ್ಮ ಪ್ರೊಫೈಲನ್ನು ತೆರೆ ಯಿರಿ. ಪ್ರೊಫೈಲ್ ಪೇಜ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್ಸ್’ಗೆ ಹೋಗಿ, ‘ಲಿಂಕ್ ಆಧಾರ್’ ಒತ್ತಿ. ಈಗ ಆಧಾರ್ ಜೋಡಣೆಗೆ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಿದ ಮಾಹಿತಿ ನಮೂದಿಸಿ. ಕೊನೆಗೆ ‘ಲಿಂಕ್’ ಬಟನ್ ಒತ್ತಿ. ಈಗ ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆಯಾದ ಬಗ್ಗೆ ಸಂದೇಶ ಕಾಣಿಸಿ ಕೊಳ್ಳುತ್ತದೆ. ಒಂದು ವೇಳೆ ಹೆಸರು ವ್ಯತ್ಯಾಸ, ಇನ್ನಿತರ ಕಾರಣದಿಂದ ಜೋಡಣೆಯಾಗದೆ ಇದ್ದಲ್ಲಿ, ಹೆಸರನ್ನು ಸರಿಪಡಿಸುವುದು ಅಥವಾ ಆಧಾರ್‌ನಲ್ಲಿ ನೀಡಿದ ಮೊಬೈಲ್ ನಂಬರ್‌ಗೆ ಒಟಿಪಿ ಮೂಲಕ ಜೋಡಣೆ ಮಾಡಬಹುದು. ಅಲ್ಲದೆ ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಆಧಾರ್ ಮೂಲಕ “ಇ ವೆರಿಫಿ ಕೇಶನ್’ಗೆ ಅವಕಾಶವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.