ಸಾವಿನ ಬಗ್ಗೆ ಶಂಕೆ ಇಲ್ಲ: ನ್ಯಾ| ಲೋಯಾ ಪುತ್ರ
Team Udayavani, Jan 15, 2018, 6:25 AM IST
ಮುಂಬಯಿ: “ಅಪ್ಪನ ನಿಧನದ ಬಗ್ಗೆ ನನಗೆ ಮೊದಲು ಸ್ವಲ್ಪ ಅನುಮಾನವಿತ್ತು. ಆದರೆ, ಈಗ ಯಾವುದೇ ಅನುಮಾನವಿಲ್ಲ,’ ಎಂದು ಅನುಮಾನಾಸ್ಪದವಾಗಿ ನಿಧನರಾದ ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಪುತ್ರ ಅನೂಜ್ ಲೋಯಾ(21) ಹೇಳಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ದಯವಿಟ್ಟು ಯಾರೂ ರಾಜಕೀಯ ಮಾಡಬೇಡಿ. ನಮಗೆ ಕಿರುಕುಳ ಕೊಡಬೇಡಿ ಎಂದೂ ಮನವಿ ಮಾಡಿಕೊಂಡಿದ್ದಾರೆ.
ನ್ಯಾ| ಲೋಯಾ ಅವರ ನಿಗೂಢ ಸಾವು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಅನೂಜ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಈ ಮಾತುಗಳ ನ್ನಾಡಿದ್ದಾರೆ. ಈಗಾಗಲೇ ಅವರ ಸಾವಿನ ಕುರಿತು ತನಿಖೆಯಾಗಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಮಹಾರಾಷ್ಟ್ರ ಸರಕಾರದಿಂದ ವರದಿಯನ್ನೂ ಕೇಳಿದೆ. ಆದರೆ, ಅನೂಜ್ ಅವರು ರವಿವಾರ ಮಾತನಾಡಿ, “ಆರಂಭದಲ್ಲಿ ನನಗೆ ಕೆಲವು ಅನುಮಾನ ಮೂಡಿತ್ತು. ನನ್ನ ಅಜ್ಜ ಹಾಗೂ ಚಿಕ್ಕಮ್ಮನಿಗೂ ಶಂಕೆಯಿತ್ತು. ಆದರೆ, ಈಗ ಅದೆಲ್ಲ ನಿವಾರಣೆಯಾಗಿದೆ,’ ಎಂದಿದ್ದಾರೆ.
ಕೆಲವು ರಾಜಕಾರಣಿಗಳು ಮತ್ತು ಎನ್ಜಿಒಗಳು ನಮ್ಮ ಮೇಲೆ ಒತ್ತಡ ತರುತ್ತಿವೆ. ದಯವಿಟ್ಟು ನಮಗೆ ತೊಂದರೆ ಕೊಡಬೇಡಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಕುಟುಂಬವು ಯಾರ ವಿರುದ್ಧವೂ ಆರೋಪ ಹೊರಿಸುವುದಿಲ್ಲ. ಅಪ್ಪನ ಸಾವಿನ ಕುರಿತು ನಮ್ಮನ್ನು ಪ್ರಶ್ನಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದೂ ಅನೂಜ್ ಹೇಳಿದ್ದಾರೆ. ಕಳೆದ ವರ್ಷ ನಿಯತ ಕಾಲಿಕೆಯೊಂದು ಪ್ರಕಟಿಸಿದ್ದ ವರದಿಯಲ್ಲಿ, ನ್ಯಾ.ಲೋಯಾ ಸಾವಿನ ಕುರಿತು ಎದ್ದಿರುವ ಅನುಮಾನಗಳ ಬಗ್ಗೆ ಅವರ ಅಪ್ಪ ಹರಿಕೃಷ್ಣ ಲೋಯಾ, ಸಹೋದರಿ ಅನುರಾಧಾ ಬಿಯಾನಿ, ಸವಿತಾ ಮಂಧನೆ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.