ಜ್ಯೋತಿರಾದಿತ್ಯ ರಾಜೀನಾಮೆ ಪಕ್ಷಕ್ಕೆ ದೊಡ್ಡ ಆಘಾತ: ಪೃಥ್ವಿರಾಜ್ ಚವಾಣ್
Team Udayavani, Mar 10, 2020, 6:36 PM IST
ಮುಂಬಯಿ:ಯುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಶಿಂಧೆ ರಾಜೀನಾಮೆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಅದು ಪಕ್ಷಕ್ಕೆ ಆಘಾತದ ಸಂಗಂತಿ. ಇದನ್ನು ಹೇಗೆ ತಡೆಯಬಹುದು ಎಂದು ನನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.
ಲೋಕಸಭೆಯಲ್ಲಿಯ ಸೋಲು, ಮುಖ್ಯಮಂತ್ರಿ ಹು¨ªೆಯಿಂದ ವಂಚನೆ ಮತ್ತು ಪಕ್ಷದ ವತಿಯಿಂದ ಯಾವುದೇ ದೊಡ್ಡ ಜವಾಬ್ದಾರಿ ನೀಡದ ಕಾರಣ ಜ್ಯೋತಿರಾದಿತ್ಯ ಶಿಂಧೆ ಕಳೆದ ಹಲವು ದಿನಗಳಿಂದ ನಿರಾಶೆಗೊಂಡಿದ್ದರು. ಈ ಮಧ್ಯೆ, ಅವರು ತಮ್ಮ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಚಿಹ್ನೆಯನ್ನು ತೆಗೆದುಹಾಕಿ ಅಸಮಾಧಾನದ ಸಂಕೇತವನ್ನು ನೀಡಿದರು ಅನಂತರ ಯಾವುದೇ ಪ್ರಯೋಜನವಾಗದ ಕಾರಣ ಸೋಮವಾರ ಶಿಂಧೆ ಅವರು, ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿದರು. ಶಿಂಧೆ ಅವರಂತ ನಾಯಕರು ಪಕ್ಷವನ್ನು ತೊರೆದಿದ್ದು, ಕಾಂಗ್ರೆಸ್‌ನಲ್ಲಿ ಚಿಂತೆಯ ವಾತಾವರಣ ಸೃಷ್ಟಿಯಾಗಿದೆ.
ಪೃಥ್ವಿರಾಜ್ ಚವಾಣ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಿಂಧೆ ಅವರ ರಾಜೀನಾಮೆಗೆ ಕಳವಳ ವ್ಯಕ್ತಪಡಿಸಿದರು. ‘ಶಿಂಧೆ ಅವರ ಮನದಲ್ಲಿ ಕಳೆದ ಹಲವಾರು ದಿನಗಳಿಂದ ಅಸಮಾಧಾನದ ವಾತಾವರಣ ನಿರ್ಮಾಣವಾಗುತ್ತಿದೆ. ಅವರು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಲು ಬಯಸಿದ್ದರು. ಆದರೆ, ಅವರಿಗೆ ಆ ಅವಕಾಶ ಸಿಗಲಿಲ್ಲ. ಲೋಕಸಭೆಯಲ್ಲಿನ ಸೋಲಿನಿಂದ ಅವರು ತೀವ್ರ ನಿರಾಶೆಗೊಂಡರು. ಅವರ ದಿಲ್ಲಿಯೊಂದಿಗಿನ ಸಂಬಂಧ ಮುರಿಯಿತು. ಅವರು ರಾಜ್ಯಸಭೆಗೆ ಹೋಗಲು ಬಯಸಿದ್ದರು. ಆದರೆ, ಅದೂ ಪೂರ್ಣಗೊಂಡಿಲ್ಲ. ಆದ್ದರಿಂದ ಅವರು ಬೇರೆ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಶೋಕ್ ಚವಾಣ್ ಹೇಳಿದ್ದಾರೆ.
ಶಿಂಧೆ ಅವರ ಸಂಪೂರ್ಣ ಕುಟುಂಬ ಬಿಜೆಪಿಯಲ್ಲಿದ್ದರೂ, ಅವರ ತಂದೆ ಮಾಧವರಾವ್ ಮತ್ತು ಜ್ಯೋತಿರಾದಿತ್ಯ ಸ್ವತಃ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅವರು ಬದ್ಧ ನಾಯಕ.ಪಕ್ಷವು ಅವರಿಗೆ ಯಾವುದೇ ಮಹತ್ವದ ನೀಡದಿದ್ದಾಗ ಅಸಮಾದಾನಗೊಂಡಿರುವುದರಲ್ಲಿ ಸಂದೇಹವಿಲ್ಲ ಎಂದು ಚವಾಣ್ ಹೇಳಿದ್ದಾರೆ.
ಜ್ಯೋತಿರಾದಿತ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ದೊರೆಯಲಿಲ್ಲ. ಅವರಲ್ಲದೆ ಹೆಚ್ಚಿನವರಿಗೆ ಪಕ್ಷದ ಸಂಘಟನೆಯಲ್ಲಿ ಯಾವುದೇ ಜವಾಬ್ದಾರಿ ದೊರೆಯಲಿಲ್ಲ. ಶಿಂಧೆ ಅವರ ಬೆಂಬಲವಿಲ್ಲದೆ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮುಖ್ಯಮಂತ್ರಿಯಾಗಿರುವುದು ಸುಲಭವಾಗಿಲ್ಲ. ಇದನ್ನು ಪರಿಗಣಿಸಿ ಅವರು ಬಿಜೆಪಿಗೆ ಸೇರಲು ನಿರ್ಧರಿಸಿರಬಹುದು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರು ಶಿಂಧೆ ಅವರಿಗೆ ಯಾವ ಭರವಸೆ ನೀಡುತ್ತಾರೆ, ಅದು ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ಚವಾಣ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.