ತಮಿಳುನಾಡು ರಾಜಕಾರಣ ಬದಲಾಗಬಲ್ಲುದು: ಕಮಲಹಾಸನ್ ವಿಶ್ವಾಸ
Team Udayavani, Sep 15, 2017, 11:32 AM IST
ಚೆನ್ನೈ : “ತಮಿಳುನಾಡು ರಾಜಕಾರಣ ಬದಲಾಗಲು ಸಾಧ್ಯವಿದೆ ಮತ್ತು ನಾನು ಆ ಬದಲಾವಣೆಯನ್ನು ತರಲು ಬಯಸಿದ್ದೇನೆ’ ಎಂದು ತಮಿಳು ಚಿತ್ರರಂಗದ ಮೆಗಾ ಸ್ಟಾರ್ ಕಮಲಹಾಸನ್ ಹೇಳಿದ್ದಾರೆ.
ಹೊಸ ರಾಜಕೀಯ ಪಕ್ಷವನ್ನು ತಾನು ಶೀಘ್ರವೇ ಆರಂಭಿಸುವುದಾಗಿ ಈಚೆಗಷ್ಟೇ ಭಾರೀ ದೊಡ್ಡ ಬಾಂಬ್ ಸಿಡಿಸಿದ್ದ 62ರ ಹರೆಯದ ನಟ ಕಮಲಹಾಸನ್, ತಮಿಳು ನಾಡಿನ ಎಲ್ಲ ಸಮಸ್ಯೆಗಳಿಗೆ ತನ್ನಿಂದ ತತ್‌ಕ್ಷಣದ ಪರಿಹಾರವೇನೂ ಸಿಗದು; ಆದರೂ ತಾನು ರಾಜ್ಯ ರಾಜಕಾರಣದಲ್ಲಿ, ಆಡಳಿತೆಯಲ್ಲಿ ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಲು ಬಯಸಿದ್ದೇನೆ ಎಂದು “ದ ಕ್ವಿಂಟ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ತನ್ನ ರಾಜಕೀಯ ಮಹತ್ವಾಕಾಂಕ್ಷೆಯ ಬಗ್ಗೆ ಸ್ಪಷ್ಟ ಉತ್ತರ ನೀಡಲು ಇಷ್ಟಪಡದ ಕಮಲಹಾಸನ್, “ನನಗೆ ನೀವು ಓಟ್ ಹಾಕಿ ಬಳಿಕ ನನ್ನನ್ನು ಕಿತ್ತೂಗೆಯಲು ಐದು ವರ್ಷ ತೆಗೆದುಕೊಳ್ಳಬೇಡಿ; ನಾನು ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ತತ್‌ಕ್ಷಣವೇ ನನ್ನನ್ನು ಕಿತ್ತೆಸೆಯಿರಿ’ ಎಂದು ಹೇಳಿದರು.
ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನನ್ನ ಮುಖ್ಯ ಗುರಿಯಾಗಿದೆ; ಒಂದೋ ನಾನು ರಾಜಕಾರಣದಿಂದ ತೊಲಗಬೇಕು; ಇಲ್ಲವೇ ಭ್ರಷ್ಟಾಚಾರದ ಪಿಡುಗು ರಾಜಕಾರಣದಿಂದ ತೊಲಗಬೇಕು’ ಎಂದು ಕಮಲಹಾಸನ್ ನಿಷ್ಠುರವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.