ಕಂಚಿ ಶ್ರೀ ಬ್ರಹ್ಮೀಭೂತ


Team Udayavani, Mar 1, 2018, 12:28 AM IST

s-28.jpg

ಕಾಂಚಿಪುರಂ: ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲೊಂದೆಂಬ ಹೆಗ್ಗಳಿಕೆ ಪಡೆದಿರುವ ಕಂಚಿ ಕಾಮಕೋಟಿ ಪೀಠದ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂನ 69ನೇ ಪೀಠಾಧ್ಯಕ್ಷರಾಗಿದ್ದ ಜಯೇಂದ್ರ ಸರಸ್ವತಿ (82), ಹೃದಯ ಸ್ತಂಭನದಿಂದಾಗಿ ನಿಧನ ಹೊಂದಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ಶ್ರೀಗಳ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದ್ದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಬೆಳಗ್ಗೆ 9 ಗಂಟೆ ಸುಮಾರಿಗೆ ದೈವಾಧೀನರಾಗಿದ್ದಾರೆ.

ಮಠದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಮಧ್ಯಾಹ್ನದಿಂದಲೇ ಅನುವು ಮಾಡಿಕೊಡ ಲಾಯಿತು. ಪಾರ್ಥಿವ ಶರೀರವನ್ನು ಕುರ್ಚಿ ಮೇಲೆ ಕೂರಿಸಿ, ಹಣೆಗೆ ವಿಭೂತಿ ಹಾಗೂ ಕುಂಕುಮ ಹಚ್ಚಲಾಗಿತ್ತು. ಕೊರಳಿಗೆ ಭಕ್ತರು ಅರ್ಪಿಸಿದ ಹೂಮಾಲೆಗಳನ್ನು ಹಾಕಲಾಯಿತು. 

ಗುರುವಾರ ಬೆಳಗ್ಗೆ 8 ಗಂಟೆಯಿಂದ ಜಯೇಂದ್ರ ಸರಸ್ವತಿಯವರ ಬೃಂದಾವನ ಪ್ರವೇಶ ಕಾರ್ಯಕ್ರಮ (ಹಿಂದೂ ಮಠಾಧಿ ಪತಿಗಳಿಗಾಗಿ ನೆರವೇರಿಸಲಾಗುವ ಅಂತ್ಯ ಸಂಸ್ಕಾರ ಪ್ರಕ್ರಿಯೆ) ಶುರುವಾಗಲಿದೆ. 

2520 ವರ್ಷಗಳ ಹಿಂದೆ ಶಂಕರಾಚಾರ್ಯ ರಿಂದ ಸ್ಥಾಪನೆಗೊಂಡಿರುವ ಕಂಚಿ ಮಠದ 
70ನೇ ಸ್ವಾಮೀಜಿಯಾಗಿ ಕಿರಿಯ ಸ್ವಾಮಿ ವಿಜಯೇಂದ್ರ ಸರಸ್ವತಿ ಸದ್ಯದಲ್ಲೇ ಪೀಠಾ ರೋಹಣ ನಡೆಸಲಿದ್ದಾರೆ.  
ಶ್ರೀಗಳ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಶ್ರೀಗಳ ಪೂರ್ವಾಪರ: ತಮಿಳುನಾಡಿನ ತಂಜಾವೂರಿನ ಇರುಲೆ°àಕಿಯಲ್ಲಿ 1935ರ ಜುಲೈ 18ರಂದು ಜನಿಸಿದ್ದ ಶ್ರೀಗಳ ಮೊದಲ ಹೆಸರು ಎಂ. ಸುಬ್ರಹ್ಮಣ್ಯ ಅಯ್ಯರ್‌. ಚಿಕ್ಕಂದಿನಿಂದಲೇ ಸನ್ಯಾಸ ಜೀವನದತ್ತ ಆಕರ್ಷಿತರಾದ ಅವರು, 1994ರಲ್ಲಿ ಕಂಚಿ ಕಾಮಕೋಟಿ ಪೀಠಾಧ್ಯಕ್ಷರಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಶ್ರೀಗಳ ನಿಧನದ ಅನಂತರ, ಪೀಠಾಧ್ಯಕ್ಷರಾದರು. ಆಗ, ಅವರಿಗೆ 58 ವರ್ಷ. ಅಲ್ಲಿಂದ 2018ರ ವರೆಗೆ ಸುಮಾರು 24 ವರ್ಷಗಳ ಕಾಲ ಅವರು ಪೀಠಾಧ್ಯಕ್ಷರಾಗಿದ್ದು, ಜಗದ್ಗುರು ಗೌರವ ಪಡೆದಿದ್ದರು. 
ಏಕಾಏಕಿ ನಾಪತ್ತೆಯಾಗಿದ್ದರು: ಮಠದ ಕಿರಿಯ ಸ್ವಾಮಿಯಾಗಿದ್ದಾಗಲೆ, 1987ರಲ್ಲಿ ಜಯೇಂದ್ರ ಸರಸ್ವತಿ ಶ್ರೀಗಳು ಏಕಾಏಕಿ ನಾಪತ್ತೆಯಾಗಿದ್ದರು. ಮಠದಲ್ಲಿನ ತಮ್ಮ ಕೊಠಡಿಯಲ್ಲಿ ಅವರ ಜನಿವಾರ, ಪೂಜಾ ಸಾಮಗ್ರಿಗಳನ್ನು ಬಿಟ್ಟುಹೋಗಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮೂರು ದಿನಗಳ ಸತತ ಹುಡುಕಾಟದ ಅನಂತರ, ಕರ್ನಾಟಕದ ತಲಕಾವೇರಿಯಲ್ಲಿ ಅವರು ಪತ್ತೆಯಾಗಿದ್ದರು. ಅನಂತರ, ಅವರನ್ನು ಮಠಕ್ಕೆ ಕರೆದೊಯ್ಯಲಾಗಿತ್ತು. 

ಶಂಕರ ರಾಮನ್‌ ಪ್ರಕರಣ: 2004ರ ಸೆ. 3 ರಂದು ನಡೆದಿದ್ದ ಶ್ರೀ ವರದರಾಜ ಪೆರುಮಾಳ್‌ ದೇಗುಲದ ಮ್ಯಾನೇಜರ್‌ ಶಂಕರ ರಾಮನ್‌ ಹತ್ಯೆ ಪ್ರಕರಣ ಕಂಚಿ ಶ್ರೀಗಳಿಗೆ ಸುತ್ತಿಕೊಂಡಿತ್ತು. ಈ ಹಿಂದೆ, ಕಂಚಿ ಮಠದಲ್ಲೇ ಮ್ಯಾನೇಜರ್‌ ಆಗಿದ್ದಾಗ, ಶಂಕರ ರಾಮನ್‌ ಅವರು ಕಂಚಿ ಶ್ರೀಗಳು ಹಾಗೂ ಮಠದ ಕಿರಿಯ ಸ್ವಾಮಿಯಾದ ವಿಜಯೇಂದ್ರ ಸರಸ್ವತಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರ ಆರೋಪ ಮಾಡಿದ್ದೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ಅವರನ್ನು ಬಂಧಿಸಲಾಗಿತ್ತು.  ಇದಾಗಿ, ಒಂದು ತಿಂಗಳ ಅನಂತರ, ಮದ್ರಾಸ್‌ ಹೈಕೋರ್ಟ್‌ನಿಂದ  ಜಾಮೀನು ಪಡೆದಿದ್ದರು. 2013ರ ನವೆಂಬರ್‌ನಲ್ಲಿ ಪಾಂಡಿಚೇರಿ ಸೆಷನ್ಸ್‌ ನ್ಯಾಯಾಲಯ ಶ್ರೀ ಜಯೇಂದ್ರ ಸರಸ್ವತಿ, ಕಿರಿಯ ಸ್ವಾಮೀಜಿ ಶ್ರೀ ವಿಜಯೇಂದ್ರ ಸರಸ್ವತಿ ಅವರು ಸಹಿತ ಪ್ರಕರಣದಲ್ಲಿ ಆರೋಪಿಗಳಾಗಿದ್ದ 21 ಮಂದಿಯನ್ನು ಖುಲಾಸೆಗೊಳಿಸಿತು.

ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ 
ಶ್ರೀಗಳ ನಿಧನದಿಂದ ನಮ್ಮ ದೇಶ ಒಬ್ಬ ಮಹಾ ಧಾರ್ಮಿಕ ಮುಖಂಡ ಹಾಗೂ ಸಮಾಜ ಸುಧಾರಕರನ್ನು ಕಳೆದುಕೊಂಡಿದೆ. ಅವರ ಕೋಟ್ಯಂತರ ಭಕ್ತರಿಗೆ ದುಃಖ ಭರಿಸುವ ಶಕ್ತಿ ಬರಲಿ.
– ರಾಮನಾಥ ಕೋವಿಂದ್‌, ರಾಷ್ಟ್ರಪತಿ

ಸಮುದಾಯ ಸೇವೆಗಳಲ್ಲಿ  ಸದಾ 
ಮುಂದಿರುತ್ತಿದ್ದ ಜಗದ್ಗುರು ಜಯೇಂದ್ರ ಸರಸ್ವತಿ ಶ್ರೀಗಳು, ಬಡವರ ಹಾಗೂ ನಿರ್ಗತಿಕರ ಬದುಕನ್ನು ಹಸನಾಗಿಸಲು ಯತ್ನಿಸುವ ಸಂಸ್ಥೆಗಳನ್ನು ಅವರು ಕಟ್ಟಿದರು. 
- ನರೇಂದ್ರ ಮೋದಿ, ಪ್ರಧಾನಿ

ಪೂಜ್ಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿ 
ಸ್ವಾಮಿಗಳ ನಿಧನ ವಾರ್ತೆ ಬೇಸರ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

n    24 ವರ್ಷಗಳ ಕಾಲ 
ಮಠದ 69ನೇ ಪೀಠಾಧ್ಯಕ್ಷ ರಾಗಿದ್ದ ಜಯೇಂದ್ರ ಸರಸ್ವತಿ
 n    ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ
n    ಗುರುವಾರ ಬೆಳಗ್ಗೆ 8 ಗಂಟೆಯಿಂದ ಬೃಂದಾವನ ಪ್ರವೇಶ ಪ್ರಕ್ರಿಯೆ ಶುರು

ಟಾಪ್ ನ್ಯೂಸ್

1-love

Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ

1-oll

ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

Government has taken the microfinance harassment case seriously: Jarakiholi

ಮೈಕ್ರೋ ಫೈನಾನ್ಸ್‌ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ

1-sudha

Maha Kumbh; ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್: ಸುಧಾ ಮೂರ್ತಿ

Recipe: ಬಟರ್‌ ಗಾರ್ಲಿಕ್‌ ಮಶ್ರೂಮ್‌ ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ… ರುಚಿ ಅದ್ಭುತ…

Recipe: ಬಟರ್‌ ಗಾರ್ಲಿಕ್‌ ಮಶ್ರೂಮ್‌ ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ… ರುಚಿ ಅದ್ಭುತ…

Maha Kumbh Mela: ಜ.24ರಂದು ಕುಂಭಮೇಳದಲ್ಲಿ ನಟಿ ಮಮತಾ ಕುಲಕರ್ಣಿ ಸನ್ಯಾಸ ಸ್ವೀಕಾರ!

Maha Kumbh Mela: ಜ.24ರಂದು ಕುಂಭಮೇಳದಲ್ಲಿ ನಟಿ ಮಮತಾ ಕುಲಕರ್ಣಿ ಸನ್ಯಾಸ ಸ್ವೀಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaropi

Saif Ali Khan ಇರಿತ ಕೇಸ್; ಸಿಸಿಟಿವಿಯಲ್ಲಿ ಇರುವ ವ್ಯಕ್ತಿಯೇ ಬೇರೆ ಎಂದ ಬಂಧಿತನ ತಂದೆ

ನಾನು ಜೈಲಿನಲ್ಲಿದ್ದಾಗ ಬಿಜೆಪಿ ನನಗೆ ದೆಹಲಿ ಸಿಎಂ ಹುದ್ದೆ ಆಮಿಷವೊಡ್ಡಿತ್ತು: ಸಿಸೋಡಿಯಾ

ನಾನು ಜೈಲಿನಲ್ಲಿದ್ದಾಗ ಬಿಜೆಪಿ ನನಗೆ ದೆಹಲಿ ಸಿಎಂ ಹುದ್ದೆ ಆಮಿಷವೊಡ್ಡಿತ್ತು: ಸಿಸೋಡಿಯಾ

Maharashtra: ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಸ್ಫೋಟ.. ಕುಸಿದ ಮೇಲ್ಛಾವಣಿ, ಓರ್ವ ಮೃತ್ಯು

Maharashtra: ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಸ್ಫೋಟ.. 8 ಮಂದಿ ಮೃತ್ಯು, 7 ಮಂದಿ ಗಂಭೀರ

Showroom: ತಡರಾತ್ರಿ ಕಾಣಿಸಿಕೊಂಡ ಬೆಂಕಿ… ಶೋರೂಂನಲ್ಲಿದ್ದ ಹೊಸ ಕಾರುಗಳು ಸುಟ್ಟು ಕರಕಲು

Showroom: ತಡರಾತ್ರಿ ಕಾಣಿಸಿಕೊಂಡ ಬೆಂಕಿ… ಶೋರೂಂನಲ್ಲಿದ್ದ ಹೊಸ ಕಾರುಗಳು ಸುಟ್ಟು ಕರಕಲು

Bhopal: ಅಪಘಾತದಲ್ಲಿ ಪತಿ ಮೃತಪಟ್ಟ ಒಂದೇ ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ

Bhopal: ಅಪಘಾತದಲ್ಲಿ ಪತಿ ಮೃತಪಟ್ಟ ಒಂದೇ ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

1-love

Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ

1-po-aa

Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ

1-oll

ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ

1-metre

ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.