ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಖ್ಯಾತ ಪಾಪ್ ತಾರೆ ರಿಹಾನಾ v/s ಕಂಗನಾ ?
ರಿಹಾನಾಗೆ ನೀನು ಸುಮ್ಮನಿರು ಮೂರ್ಖಿ ಎಂದು ಜರಿದ ಕಂಗನಾ
Team Udayavani, Feb 3, 2021, 6:39 PM IST
ನವ ದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಉಗ್ರರು ಎಂದು ಬಾಲಿವುಡ್ ನಟಿ ಕಂಗನಾ ಹೇಳಿದ್ದರು.
ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ, ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ರಿಹಾನವರನ್ನು ಮೂರ್ಖಿ ಎಂದು ಕರೆದಿದ್ದರು.
ರೈತರ ಪ್ರತಿಭಟನೆಯ ಬಗ್ಗೆ ಸಿ ಎನ್ ಎನ್ ವರದಿಯನ್ನು ಉಲ್ಲೇಖಿಸಿ, ಇದರ ಬಗ್ಗೆ ನಾವು ಏಕೆ ತುಟಿ ಬಿಚ್ಚುವುದಿಲ್ಲ ಎಂದು ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದರು.
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ಓದಿ : ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ನೀಡಲು ಮಾರ್ಗಸೂಚಿ
ಆ ಬಗ್ಗೆ ಯಾರೂ ಮಾತಾಡುವುದಿಲ್ಲ ಏಕೆಂದರೇ, ಪ್ರತಿಭಟಿಸುತ್ತಿರುವವರು ರೈತರಲ್ಲ, ದೇಶವನ್ನು ವಿಭಜಿಸಲು ಪ್ರಯತ್ನ ಪಡುತ್ತಿರುವ ಭಯೋತ್ಪಾದಕರು. ನೀನು ಸುಮ್ಮನಿರು ಮೂರ್ಖಿ .. ನಾವು ನಿಮ್ಮಂತೆ ಕೈಗೊಂಬೆಗಳ ರೀತಿ ಮಾರಾಟ ಮಾಡುತ್ತಿಲ್ಲ ಎಂದು ಜರೆದಿದ್ದರು.
ಈಗ ಕಂಗನಾ ಮತ್ತೆ ಟ್ವೀಟ್ ನಲ್ಲಿ ಜರೆಯುವುದನ್ನು ಮುಂದುವರೆಸಿದ್ದಾರೆ. ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರನ್ನು ರೈತರ ಪ್ರತಿಭಟನೆಯ ಪರವಾಗಿ ಟ್ವೀಟ್ ಮಾಡಿದ್ದಕ್ಕಾಗಿ ಮೂಕ ಮತ್ತು ಸ್ಪಾಯ್ಟ್ ಬ್ರಾಟ್ ಎಂದು ಕರೆದಿದ್ದಾರೆ.
“ನಾವು ಭಾರತದ #ಫಾರ್ಮರ್ಸ್ ಪ್ರೊಟೆಸ್ಟ್ ಜೊತೆಗೆ ಇರುತ್ತೇವೆ” ಎಂದು ಗ್ರೇಟಾ ಬುಧವಾರ ಟ್ವೀಟ್ ಮಾಡಿದ ಬೆನ್ನಲ್ಲೇ ಈ ರೀತಿಯಾಗಿ ಪ್ರತಿಕ್ರಯಿಸಿದ್ದಾರೆ.
We stand in solidarity with the #FarmersProtest in India.
https://t.co/tqvR0oHgo0— Greta Thunberg (@GretaThunberg) February 2, 2021
“ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವುದರಿಂದ ಭಾರತವು ನವದೆಹಲಿಯ ಸುತ್ತ ಅಂತರ್ಜಾಲವನ್ನು ಕಡಿತಗೊಳಿಸುತ್ತದೆ” ಎಂದು ಗ್ರೇಟಾ ಸಿ ಎನ್ ಎನ್ ವೆಬ್ ಸೈಟ್ ನಲ್ಲಿನ ಸುದ್ದಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದರು.
ಓದಿ :ನಾನು ಇರುವವರೆಗೂ ಜಿ.ಟಿ.ಡಿ ಯನ್ನು ವಾಪಸ್ ಜೆಡಿಎಸ್‌ಗೆ ಸೇರಿಸಿಕೊಳ್ಳುವುದಿಲ್ಲ: HDK ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.