ಕಾನ್ಪುರ ರೈಲು ದುರಂತ: ಪಾಕಿಸ್ಥಾನದ ಕೈವಾಡ ?
Team Udayavani, Jan 18, 2017, 3:45 AM IST
ಪಟ್ನಾ /ಕಾನ್ಪುರ: ಇದುವರೆಗೆ ಬಾಂಬ್ ಇಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಪಾಕಿಸ್ಥಾನದ ಐಎಸ್‌ಐ ಈಗ ಬೇರೊಂದು ಮಾರ್ಗ ತುಳಿದಿದೆಯೇ? ಹೌದು ಎನ್ನುತ್ತಿವೆ ಮೂಲಗಳು. ಕಳೆದ ವರ್ಷದ ನವೆಂಬರ್ 21ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ 150 ಮಂದಿಯನ್ನು ಬಲಿ ತೆಗೆದುಕೊಂಡ ಇಂದೋರ್-ಪಟ್ನಾ ರೈಲು ದುರಂತಕ್ಕೆ ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಕಾರಣವೆಂಬ ಬಲವಾದ ಶಂಕೆ ಈಗ ಉಂಟಾಗಿದೆ.
ಕಳೆದ ವರ್ಷ ಅ. 1ರಂದು ಬಿಹಾರದ ರಕೌಲ್-ಸೀತಾಮಢಿ ರೈಲು ಮಾರ್ಗದಲ್ಲಿ ಸುಧಾರಿತ ಸ್ಫೋಟಕ (ಐಇಡಿ) ದೊರೆತಿತ್ತು. ಈ ಸಂಬಂಧ ಮೋತಿ ಪಾಸ್ವಾನ್ ಸಹಿತ ಮೂವರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಪೊಲೀಸ್ ತನಿಖೆ ವೇಳೆ, “ನೇಪಾಲ ಮೂಲದವನಾದ ದುಬಾೖ ವಾಸಿ ಉದ್ಯಮಿ ಶಂಸುಲ್ ಹೋಡಾ ಎಂಬಾತ ಈ ಕೃತ್ಯ ಎಸಗಲು ತನಗೆ ಹಣ ನೀಡಿದ್ದ ಎಂದು ಆರೋಪಿಯೊಬ್ಬ ತಪ್ಪೊಪ್ಪಿ ಕೊಂಡಿದ್ದಾನೆ. ಈ ಉದ್ಯಮಿಗೆ ಐಎಸ್‌ಐ ಕುಮ್ಮಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ಇಂದೋರ್-ಪಟ್ನಾ ರೈಲು ದುರಂತ ಹಾಗೂ ಸಿಯಾಲ್‌ದಹಾ-ಅಜೆರ್ ರೈಲು ದುರಂತದ ಹಿಂದೆಯೂ ಇದೇ ಜಾಲದ ಕೈವಾಡ ಇರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ’ ಎಂದು ಬಿಹಾರದ ಪೂರ್ವ ಚಂಪಾರಣ್ಯದ ಎಸ್‌ಪಿ ತಿಳಿಸಿದ್ದಾರೆ.
ಇಂದೋರ್- ಪಟ್ನಾ ನಡುವಿನ ಎಕ್ಸ್‌ಪ್ರೆಸ್ ರೈಲಿನ 14 ಬೋಗಿಗಳು ಕಾನ್ಪುರದಲ್ಲಿ ಹಳಿ ತಪ್ಪಿ 150 ಮಂದಿ ಸಾವಿಗೀಡಾಗಿದ್ದರು. ಈ ಅಪಘಾತಕ್ಕೆ ಹಳಿ ಬಿರುಕು ಬಿಟ್ಟದ್ದೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ ಐಎಸ್‌ಐ ಕುಮ್ಮಕ್ಕಿನಿಂದ ಐಇಡಿ ಇಟ್ಟು ಸ್ಫೋಟಿಸಿರುವ ಅನುಮಾನ ಈಗ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.