ಚೀನಕ್ಕೂ ಕಾರ್ಗಿಲ್ ಪಾಠ; ಮನ್ ಕಿ ಬಾತ್‌ನಲ್ಲಿ ಕಾರ್ಗಿಲ್ ದಿಗ್ವಿಜಯದ ನೆನಪು
Team Udayavani, Jul 27, 2020, 8:34 AM IST
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಗಿಲ್ ವಿಜಯ ದಿವಸ ಅಂಗವಾಗಿ ರಾಜಧಾನಿಯ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ಗೌರವ ಸಲ್ಲಿಸಿದರು.
ಹೊಸದಿಲ್ಲಿ: ಕಾರ್ಗಿಲ್ ದಿಗ್ವಿಜಯ ಕೇವಲ ಇತಿಹಾಸದ ನೆನಪಲ್ಲ, ಬ್ರಹ್ಮಾಸ್ತ್ರ! ಪ್ರಧಾನಿ ಮೋದಿ ಅವರ ರವಿವಾರದ ರೇಡಿಯೋ ಭಾಷಣದುದ್ದಕ್ಕೂ ಚಿಮ್ಮಿದ್ದು ಅದೇ ಬ್ರಹ್ಮಾಸ್ತ್ರ. ಕಾರ್ಗಿಲ್ ಪರಾಕ್ರಮದ ನೆನಪುಗಳನ್ನೆಲ್ಲ ಬತ್ತಳಿಕೆಯಿಂದ ತೆಗೆದು ಹರಿತಗೊಳಿಸಿದಂತಿತ್ತು 67ನೇ “ಮನ್ ಕಿ ಬಾತ್’. ಲಡಾಖ್ ನಲ್ಲಿ ಹದ್ದುಮೀರಿದರೆ ಚೀನಕ್ಕೂ ಪಾಕ್ ಗತಿಯೇ ಆಗಲಿದೆ ಎಂಬ ಪರೋಕ್ಷ ಎಚ್ಚರಿಕೆ ಭಾಷಣದಲ್ಲಿತ್ತು.
21 ವರ್ಷಗಳ ಹಿಂದೆ ನಮ್ಮ ವೀರ ಯೋಧರು ಕಾರ್ಗಿಲ್ ಯುದ್ಧವನ್ನು ಗೆದ್ದರು. ಆಗ ಭಾರತವು ಪಾಕ್‌ನೊಂದಿಗೆ ಸೌಹಾರ್ದ ಸಂಬಂಧ ಹೊಂದಲು ಯತ್ನಿಸು ತ್ತಿತ್ತಾದರೂ ಪಾಕ್ ಬೆನ್ನಿಗೆ ಚೂರಿ ಹಾಕಿತು. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ಬರುವುದು ದುಷ್ಟರ ಸ್ವಭಾವ. ಇಂಥವರು ಒಳಿತು ಮಾಡಲೆತ್ನಿಸುವವರಿಗೂ ಕೆಡುಕನ್ನೇ ಬಯಸುತ್ತಾರೆ ಎಂದು ಪಾಕ್‌ನ ಮುಖವಾಡ ಕಳಚುತ್ತಲೇ ಮೋದಿಯವರು ಪರೋಕ್ಷವಾಗಿ ಚೀನಕ್ಕೂ ಚುರುಕು ಮುಟ್ಟಿಸಿದರು.
ಕಾರ್ಗಿಲ್ ಪರಾಕ್ರಮ ಆಂತರಿಕ ಗಲಭೆ, ಅಶಾಂತಿ ಯಿಂದ ನಲುಗಿದ್ದ ಪಾಕ್ ತನ್ನ ಪ್ರಜೆ ಗಳ ಗಮನವನ್ನು ಬೇರೆಡೆ ತಿರು ಗಿ ಸುವುದಕ್ಕಾಗಿ ಕಾರ್ಗಿಲ್ ಯುದ್ಧ ನಡೆಸಿತ್ತು.
ಶತ್ರುಗಳು ಪರ್ವತದ ನೆತ್ತಿಯ ಮೇಲಿನಿಂದ ದಾಳಿಗೈದರೆ ನಮ್ಮ ಯೋಧರು ಕೆಳಗಿನ ನೆಲೆಗಳಿಂದ ಸಮರ್ಥವಾಗಿ ಹೋರಾಡಿದ್ದರು. ಕೊನೆಗೂ ನಮ್ಮ ಪಡೆಗಳ ಸ್ಥೈರ್ಯ ಪರ್ವತಗಳನ್ನು ಮಣಿಸಿತ್ತು. ನಮ್ಮ ಸಶಸ್ತ್ರ ಪಡೆಗಳ ಧೈರ್ಯಕ್ಕೆ ಅನಂತ ಧನ್ಯವಾದಗಳು. ಅಂದು ಕಾರ್ಗಿಲ್‌ನಲ್ಲಿ ಭಾರತ ಅಪ್ರತಿಮ ಶಕ್ತಿ ಪ್ರಕಟಿಸಿ ವಿಶ್ವವನ್ನೇ ನಿಬ್ಬೆರಗಾಗಿಸಿತ್ತು ಎಂದು ಮೋದಿ ಸ್ಮರಿಸಿದರು.
ಆಂತರಿಕ ಶತ್ರುಗಳಿಗೆ ಟಾಂಗ್
ಕಠಿನ ಪರಿಸ್ಥಿತಿಗಳಲ್ಲಿ ದೇಶದ ಗಡಿ ಗಳಲ್ಲಿ ಕೆಚ್ಚೆದೆಯಿಂದ ಹೋರಾ ಡುವ ಯೋಧರನ್ನು ನಾವು ನೆನ ಪಿರಿಸಿ ಕೊಳ್ಳಬೇಕು. ಅವರನ್ನು ಗೌರವಿಸುವ, ಅವರ ಸ್ಥೈರ್ಯಕ್ಕೆ ಉತ್ತೇಜನ ತುಂಬುವಂಥ ವರ್ತನೆ ನಮ್ಮದಾಗಿರಬೇಕು. ಇಂದು ಕೇವಲ ಗಡಿಯಾಚೆಗಿನ ಶತ್ರುಗಳ ವಿರುದ್ಧ ಮಾತ್ರವೇ ನಾವು ಹೋರಾಡುತ್ತಿಲ್ಲ. ಒಳಗಿನ ಶತ್ರುಗಳನ್ನೂ ದಿಟ್ಟವಾಗಿ ಎದುರಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ ನಿಲುವು ಗಳನ್ನು ಎಂದಿಗೂ ಪ್ರೋತ್ಸಾ ಹಿಸಬಾರದು ಎಂದು ಜನತೆಗೆ ಕರೆ ನೀಡಿರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.