ಧೀರರಿಗೆ ಸಲಾಂ
ಕಾರ್ಗಿಲ್ ವಿಜಯ 20 ವರ್ಷ
Team Udayavani, Jul 26, 2019, 6:00 AM IST
ಭಾರತದ ಅವಿಚ್ಛಿನ್ನ ನೆಲದ ಮೇಲೆ ಕೃತ್ರಿಮತೆಯಿಂದ ಕಾಲಿಟ್ಟ ಪಾಕಿಸ್ಥಾನವನ್ನು ಅಟ್ಟಾಡಿಸಿ ಓಡಿಸಿದ ಭಾರತ ವಿಜಯ ದುಂದುಭಿ ಹಾರಿಸಿ ಇಂದಿಗೆ 20 ವರ್ಷ. ಜೀವವನ್ನು ಮುಡುಪಿಟ್ಟ ಧೀರ ಯೋಧರಿಗೆ ಗೌರವ ನಮನಗಳು.
ವಿಜಯೋತ್ಸವ
ಹೊಸದಿಲ್ಲಿಯಿಂದ ಹೊರಟ ಕಾರ್ಗಿಲ್ ಜ್ಯೋತಿ ದ್ರಾಸ್ ತಲುಪುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರೂ ಸೇನೆಗಳ ಮುಖ್ಯಸ್ಥರಿಂದ ಜ್ಯೋತಿ ಸ್ವೀಕಾರ
ದ್ರಾಸ್‌ನಲ್ಲಿ ರುಚಿಕರ ಖೀರು ಸಿದ್ಧಗೊಳ್ಳಲಿದೆ. ದೇಶದ ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಮತ್ತು ತಂಡ “ತಿರಂಗಾ ಖೀರು’ ಸಿದ್ಧಪಡಿಸಲಿದೆ. ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಸೇರಿ ಒಟ್ಟು 500 ಮಂದಿ ಇರಲಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ರಾಜ್ಯ ಸರಕಾರದ ವತಿಯಿಂದ ಕಾರ್ಗಿಲ್
ವಿಜಯ್ ದಿವಸ್
ಮೂರೂ ಸೇನೆಗಳ ಸರ್ವೋಚ್ಚ ದಂಡನಾಯಕ, ರಾಷ್ಟ್ರಪತಿ ರಾಮನಾಥ ಕೋವಿಂದ್ ಜು.26ಕ್ಕೆ ದ್ರಾಸ್‌ಗೆ ಭೇಟಿ ನೀಡುವ ಸಾಧ್ಯತೆ.
ವಾರದ ಕಾರ್ಯಕ್ರಮ
ಬಿಎಸ್‌ಎಫ್ ವಾರ ಕಾಲ ಕಾರ್ಯಕ್ರಮ ಆಯೋಜಿಸುತ್ತಿದೆ. ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶಗಳಿಗೆ ಪ್ರವಾಸ. ಅದರ ಮೂಲಕ ನಿಮ್ಮ ಸೇನಾ ಪಡೆ ಅರಿಯಿರಿ ಎಂಬ ಕಾರ್ಯಕ್ರಮ.
ಗಡಿ ಪ್ರದೇಶದ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ
ಫೋಟೋಗಳ ಮತ್ತು ವಿಶೇಷ ಸಿನಿಮಾಗಳ ಪ್ರದರ್ಶನ.
ಇನ್ನೊಮ್ಮೆ ದುಸ್ಸಾಹಸ ಬೇಡ: ಪಾಕಿಸ್ಥಾನಕ್ಕೆ ರಾವತ್ ಎಚ್ಚರಿಕೆ
ಪಾಕಿಸ್ಥಾನ ಸೇನೆ 1999ರಲ್ಲಿ ನಡೆಸಿದಂಥ ದುಸ್ಸಾಹಸವನ್ನು ಮತ್ತೆ ಮಾಡಬಾರದು; ಹಾಗೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ. ದ್ರಾಸ್‌ನಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ ಮತ್ತು ಸೇನಾ ವ್ಯವಸ್ಥೆ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಆಗ ಪಾಕ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದವು. ಪಾಕ್ ಸೇನೆ ಎಷ್ಟೇ ಎತ್ತರದ ಪ್ರದೇಶಕ್ಕೆ ಬಂದು ಅತಿಕ್ರಮಣ ಮಾಡಿ ದರೂ ಅವರನ್ನು ಹೊಡೆ ದಟ್ಟುವುದು ಖಾತರಿ ಎಂದು ಹೇಳಿದ್ದಾರೆ.
ಜುಲೈ 26, 1999 ಪಾಕ್‌ನ ವಿದ್ರೋಹಿಗಳನ್ನು ಹಿಮ್ಮೆಟ್ಟಿಸಿ ವಿಜಯ ಘೋಷಿಸಿದ ದಿನ
ಕದನ ನಡೆದ ಕಾಲ 2 ತಿಂಗಳು 3 ವಾರ 2 ದಿನ
ಹುತಾತ್ಮರಾದ ಭಾರತೀಯ ಯೋಧರು 527
ಕರ್ನಾಟಕದ ಯೋಧರು 13
ದಯವಿಟ್ಟು ರಾಜ ಕೀಯವನ್ನು ಮರೆತು ಕಾರ್ಗಿಲ್ ವಿಜಯೋತ್ಸವ ದಲ್ಲಿ ಭಾಗವಹಿಸಿ. ಇದು ಬರೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅಲ್ಲ. ಎಲ್ಲ ರಾಜ್ಯಗಳಲ್ಲೂ ನಡೆಯಬೇಕು.
– ರಾಜ್‌ನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.