ಗುರುದ್ವಾರದಲ್ಲಿ ಭಿಂದ್ರನ್ ವಾಲೆ ಫೋಟೋ: ಭೇಟಿ ನೀಡದ ಸಿಎಂ ಖಟ್ಟರ್
Team Udayavani, Sep 29, 2018, 4:44 PM IST
ಕರ್ನಾಲ್ : ತಮ್ಮ ವಿಧಾನಸಭಾ ಕ್ಷೇತ್ರದ 13 ತೀರ್ಥಸ್ಥಳಗಳಿಗೆ ಭೇಟಿಕೊಡುವ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಡಚಾರ್‌ನ ಗುರುದ್ವಾರಕ್ಕೆ ನೀಡಲಿದ್ದ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಪಡಿಸಿರುವುದು ಸ್ಥಳೀಯ ಸಿಕ್ಖ ಸಮುದಾಯದವರಲ್ಲಿ ನಿರಾಶೆ ಉಂಟು ಮಾಡಿದ್ದು ಇಡಿಯ ಪ್ರಹಸನ ಈಗ ವಿವಾದಕ್ಕೆ ಕಾರಣವಾಗಿದೆ ಮತ್ತು ಪ್ರತಿಭಟನೆಯನ್ನೂ ಹುಟ್ಟು ಹಾಕಿದೆ ಎಂದು ವರದಿಗಳು ತಿಳಿಸಿವೆ.
ಡಚಾರ್‌ನಲ್ಲಿನ ಗುರುದ್ವಾರದಲ್ಲಿ ತೂಗು ಹಾಕಲಾಗಿದ್ದ ಖಾಲಿಸ್ಥಾನ ಪ್ರತಿಪಾದಕ, ಉಗ್ರ, ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಫೋಟೋವನ್ನು ತೆರವು ಗೊಳಿಸಬೇಕೆಂದು ಗುರುದ್ವಾರದ ನಿರ್ವಾಹಕರಿಗೆ ತಿಳಿಸಲಾಗಿತ್ತು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ; ಫೋಟೋ ತೆಗೆದರೆ ಸ್ಥಳೀಯ ಸಿಕ್ಖ ಸಮುದಾಯದವರಲ್ಲಿ ಉದ್ವಿಗ್ನತೆ ತಲೆದೋರುವುದೆಂದು ಅವರು ಕಾರಣ ನೀಡಿದ್ದರು.
1984ರ ಜೂನ್ 1ರಿಂದ 8ರ ತನಕದ ಅವಧಿಯಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ, ಪಂಜಾಬಿನ ವಿಶ್ವವಿಖ್ಯಾತ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆದಿದ್ದ ಆಪರೇಶನ್ ಬ್ಲೂ ಸ್ಟಾರ್ ನಲ್ಲಿ ಖಾಲಿಸ್ಥಾನ್ ಪ್ರತಿಪಾದಕ ಉಗ್ರ ನಾಯಕ ಭಿಂದ್ರನ್‌ವಾಲೆ ಹತನಾಗಿದ್ದ.
ಫೋಟೋ ತೆರವುಗೊಳಿಸದ ಕಾರಣಕ್ಕೆ ಸಿಎಂ ಗುರುದ್ವಾರಕ್ಕೆ ನೀಡಲಿದ್ದ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಪಡಿಸಿದರು. ಗುರುದ್ವಾರ ಭೇಟಿಗೆ ಮೊದಲು ಸಮೀಪದಲ್ಲೇ ಇದ್ದ ದೇವಳಕ್ಕೆ ಸಿಎಂ ಭೇಟಿ ನೀಡಿ ಅಲ್ಲಿಂದಲೇ ವಾಪಾಸಾಗಿದ್ದರು. ಇದರಿಂದ ಗುರುದ್ವಾರದ ಸಿಕ್ಖ ಸಮುದಾಯದವರಿಗೆ ನಿರಾಶೆ, ಕೋಪ ಉಂಟು ಮಾಡಿತ್ತು. ಹಾಗಾಗಿ ಅವರು ಪ್ರತಿಭಟನೆ ನಡೆಸಿದರು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನಕಾರರು ಅಗ್ನಿ ಶಾಮಕ ವಾಹನವನ್ನು ಧ್ವಂಸಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿದರುವ ಸಿಎಂ ಖಟ್ಟರ್ “ಕಾನೂನನ್ನು ಕೈಗೆ ತೆಗೆದುಕೊಂಡವರಿಗೆ ತಕ್ಕ ಶಿಕ್ಷೆಯಾಗಲಿದೆ’ ಎಂದು ಹೇಳಿದರು.
ಸಿಎಂ ಖಟ್ಟರ್ ಮೂರು ದಿನಗಳ ತಮ್ಮ ಭೇಟಿಯಲ್ಲಿ ಕರ್ನಾಲ್ ಕ್ಷೇತ್ರದಲ್ಲಿ 18.39 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ..ಮೀನುಗಾರಿಕಾ ದೋಣಿಯಲ್ಲಿದ್ದ 6 ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.