ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ಗೆ ಸಂಕಷ್ಟ
Team Udayavani, Oct 12, 2017, 6:05 AM IST
ತಿರುವನಂತಪುರ: ಕರ್ನಾ ಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಹಿತ ಕೇರಳದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಬಹುಕೋಟಿ ರೂ. ಗಳ ಸೋಲಾರ್ ಪ್ಯಾನಲ್ ಹಗರಣದ ಬಿಸಿ ತಗುಲಿದೆ.
ಬುಧವಾರ ನಡೆದ ಕೇರಳ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿಗಳ ವಿರುದ್ಧ ಕ್ರಿಮಿನಲ್, ವಿಜಿ ಲೆನ್ಸ್ ಪ್ರಕರಣ ದಾಖಲಿಸಲು ನಿರ್ಧ ರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ್ದ ನ್ಯಾ| ಜಿ. ಶಿವರಾಜನ್ ಆಯೋಗದ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಿಣರಾಯಿ ವಿಜಯನ್ ಅವರು ಕೇಸು ದಾಖಲಿಸುವ ನಿರ್ಧಾರ ಪ್ರಕ ಟಿಸುತ್ತಿದ್ದಂತೆ, ಎಡ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಶುರುವಾಗಿದೆ. ರಾಜಕೀಯ ದ್ವೇಷಕ್ಕಾಗಿ ಕೇರಳ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜತೆಗೆ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರು ಮಾತನಾಡಿ, ಇಂಥ ಎಷ್ಟು ಕೇಸು ಹಾಕಿದರೂ ಎದೆಗುಂದಲ್ಲ, ಇನ್ನೂ ಬೆಳೆಯುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್, 2013ರಲ್ಲಿ ಜೈಲಿ ನಿಂದಲೇ ಬರೆದಿದ್ದ ಪತ್ರವನ್ನು ಆಧರಿಸಿ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕರ್ನಾಟಕ ಕಾಂಗ್ರೆಸ್ ಉಸ್ತು ವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಚಿವರಾದ ಆರ್ಯಡನ್ ಮೊಹ ಮ್ಮದ್, ತಿರುವಾಂಕೂರ್ ರಾಧಾಕೃಷ್ಣನ್, ಶಾಸಕರಾದ ತಂಪನೂರ್ ರವಿ, ಬೆನ್ನಿ ಬೆನ್ಹಾನನ್ ಮತ್ತಿತರರ ವಿರುದ್ಧ ವಿಜಿಲೆನ್ಸ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತದೆ.
ವಿಶೇಷವೆಂದರೆ, ಮೂರು ದಿನಗಳ ಹಿಂದಷ್ಟೇ ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮ್ಮನ್ ಚಾಂಡಿ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು.
ಆಯೋಗದ ವರದಿ ಅನ್ವಯ ಕ್ರಮ: ತಮ್ಮ ನಡೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಪಿಣರಾಯಿ “ಹಗರಣದ ರೂವಾರಿ
ಗಳೆನಿಸಿರುವ ಸೋಲಾರ್ ಪ್ಯಾನಲ್ ಸಂಸ್ಥೆಯ ಮುಖ್ಯಸ್ಥರಾದ ಸರಿತಾ ನಾಯರ್ ಹಾಗೂ ಬಿಜು ರಾಧಾ ಕೃಷ್ಣನ್‌ಗೆ ಈ ಬಹುಕೋಟಿ ರೂ. ಹಗರಣ ನಡೆಸಲು ಚಾಂಡಿ, ಅವರ ಸಂಪುಟದ ಸಚಿವರು,ಚಾಂಡಿ ಆಪ್ತರಾದ ಟೆನ್ನಿ ಜೊಪ್ಪೆನ್, ಜಿಕ್ಕುಮನ್ ಜೋಸೆಫ್, ಚಾಂಡಿ ಗನ್ ಮ್ಯಾನ್ ಸಲೀಮ್ ರಾಜ್, ದಿಲ್ಲಿಯ ಒಬ್ಬ ಸಹಾಯಕ ಕುರುವಿಲ್ಲಾ ನೆರವು ನೀಡಿದ್ದರು. ಖುದ್ದು ಚಾಂಡಿ, ಅವರ ಸಂಪುಟ ಸದಸ್ಯರು ಭಾರೀ ಪ್ರಮಾಣದಲ್ಲಿ ಲಂಚವನ್ನೂ ಸ್ವೀಕರಿಸಿದ್ದಾರೆಂದು ಆಯೋಗದ ವರದಿಯಲ್ಲಿ ಹೇಳಲಾಗಿದೆ. ಇದರನ್ವಯ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ವಿರುದ್ಧ ಮೊದಲು ಕ್ರಿಮಿನಲ್ ಪ್ರಕರಣ ದಾಖಲಿಸಿ ಅನಂತರ ತನಿಖೆ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಹೊಸ ಎಸ್‌ಐಟಿಯಿಂದ ತನಿಖೆ: ಈ ಹಿಂದೆ ಈ ಹಗರಣ ಬಯಲುಗೊಂಡಿದ್ದಾಗ ಆಗ ಅಧಿಕಾರದಲ್ಲಿದ್ದ ಚಾಂಡಿ ಸರಕಾರ ಎಸ್‌ಐಟಿ ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಣರಾಯ್, ಹಿಂದಿನ ಎಸ್‌ಐಟಿ ನಡೆಸಿರುವ ತನಿಖೆಯಲ್ಲಿ ಆಗಿರಬಹುದಾದ ಲೋಪ ಪತ್ತೆ ಹಚ್ಚಿ ಇದೇ ಪ್ರಕರಣದಲ್ಲಿ ಮತ್ತೂಮ್ಮೆ ಕೂಲಂಕಷ ತನಿಖೆ ನಡೆಸಲು ಡಿಜಿಪಿ ರಾಜೇಶ್ ದೇವನ್ ನೇತೃತ್ವದಲ್ಲಿ ಹೊಸ ಎಸ್‌ಐಟಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಎಸ್‌ಐಟಿ ತಂಡದಲ್ಲಿದ್ದ ಐಜಿಪಿ ಕೆ. ಪದ್ಮಕುಮಾರ್ ಹಾಗೂ ಡಿವೈಎಸ್‌ಪಿ ಕೆ. ಹರಿಕೃಷ್ಣನ್ ಅವರು ಹಲವಾರು ಸಾûಾÂಧಾರಗಳನ್ನು ನಾಶ ಮಾಡಿರುವ ಆರೋಪಗಳೂ ಕೇಳಿಬಂದಿರುವುದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪಿಣರಾಯಿ ತಿಳಿಸಿದ್ದಾರೆ.
ವೇಣುಗೋಪಾಲ್ ವಿರುದ್ಧ ಕಿರುಕುಳ ಆರೋಪ
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಇತರರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರಿತಾ ಅವರು ನ್ಯಾ| ಶಿವರಾಜನ್ ಆಯೋಗಕ್ಕೆ ದೂರು ನೀಡಿದ್ದು ಆ ಪ್ರಕರಣದ ತನಿಖೆಯನ್ನೂ ಹೊಸ ಎಸ್‌ಐಟಿಗೆ ವಹಿಸುವುದಾಗಿ ಪಿಣರಾಯಿ ತಿಳಿಸಿ ದ್ದಾರೆ. ಕಾಂಗ್ರೆಸ್ ನಾಯಕರಾದ ಎ.ಪಿ. ಅನಿಲ್ ಕುಮಾರ್, ಜೋಸ್ ಕೆ. ಮಣಿ, ಅಡೂರ್ ಪ್ರಕಾಶ್, ಪಳನಿ ಮಾಣಿಕ್ಯಂ, ಕೆಪಿಸಿಸಿ ಮಹಾ ಕಾರ್ಯ ದರ್ಶಿ ಎನ್. ಸುಬ್ರಹ್ಮಣ್ಯನ್, ಹಿಬಿ ಹೆಡಿನ್ ಹೆಸರುಗಳನ್ನು ದೂರಿನಲ್ಲಿ ಸರಿತಾ ಉಲ್ಲೇಖೀಸಿದ್ದಾರೆಂದು ಪಿಣರಾಯಿ ತಿಳಿಸಿದ್ದಾರೆ.
ಸೋಲಾರ್ ಪ್ಯಾನಲ್ ಹಗರಣದ ತನಿಖೆ ನಡೆಸಿದ ಆಯೋಗವು ನನ್ನ ಮೇಲಾಗಿರುವ ಅನ್ಯಾಯಗಳ ಬಗ್ಗೆ ಕೊಟ್ಟಿರುವ ದೂರನ್ನು ಪರಿಗಣಿಸಿದೆ. ಆ ದೂರಿನನ್ವಯ ಹಾಲಿ ಸಿಎಂ ತನಿಖೆಗೆ ಆದೇಶಿಸಿರುವುದು ನನಗೆ ನ್ಯಾಯ ದೊರಕಿದಂತಾಗಿದೆ.
– ಸರಿತಾ ನಾಯರ್, ಹಗರಣದ ಆರೋಪಿ
ನಾನು ಯಾವುದೇ ತಪ್ಪು ಮಾಡಿಲ್ಲ. ಸೋಲಾರ್ ಪ್ಯಾನಲ್ ಹಗರಣದಲ್ಲಿ ನನ್ನ ಹಾಗೂ ನನ್ನ ಸರಕಾರದ ಪಾತ್ರವಿರಲಿಲ್ಲ. ನಾನು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ.
– ಉಮ್ಮನ್ ಚಾಂಡಿ, ಕೇರಳದ ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.