ಕೇಂದ್ರ ಕಮಲ ನಾಯಕರಿಗೆ ಯಡಿಯೂರಪ್ಪ 1800 ಕೋಟಿ ರೂ. ಕಪ್ಪ


Team Udayavani, Mar 22, 2019, 10:48 AM IST

yeddyurappa-b-s-2-700.jpg

ನವದೆಹಲಿ: ಯಡಿಯೂರಪ್ಪನವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರ ಬಿ.ಜೆ.ಪಿ. ನಾಯಕರಿಗೆ ಸುಮಾರು 1800 ಕೋಟಿ ರೂಪಾಯಿಗಳ ಬೃಹತ್‌ ಮೊತ್ತ ಸಂದಾಯ ಮಾಡಿದ್ದಾರೆಂಬ ಗಂಭೀರ ಆರೋಪವನ್ನು ಕಾಂಗ್ರೆಸ್‌ ಪಕ್ಷವು ಇಂದು ಮಾಡಿದೆ. ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ ಅವರು ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಬಹಿರಂಗಪಡಿಸಿದರು. ಮಾತ್ರವಲ್ಲದೇ ಯಡಿಯೂರಪ್ಪ ಅವರು ಪಕ್ಷದ ಕೇಂದ್ರ ಸಮಿತಿ, ನ್ಯಾಯಾಧೀಶರಿಗೆ ಹಾಗೂ ನ್ಯಾಯವಾದಿಗಳಿಗೂ ಹಣ ಸಂದಾಯ ಮಾಡಿದ್ದಾರೆ ಎಂಬ ಆರೋಪವನ್ನೂ ಸುರ್ಜೆವಾಲ ಇದೇ ಸಂದರ್ಭದಲ್ಲಿ ಮಾಡಿದರು.

ಖಾಸಗಿ ಸುದ್ದಿ ವೆಬ್‌ ಸೈಟ್‌ ನಲ್ಲಿ ಪ್ರಕಟಗೊಂಡಿರುವ ತನಿಖಾ ವರದಿಯೊಂದರ ಮೂಲಕ ಯಾವ್ಯಾವ ಬಿ.ಜೆ.ಪಿ. ನಾಯಕರಿಗೆ ಎಷ್ಟೆಷ್ಟು ಹಣ ಸಂದಾಯವಾಗಿದೆ ಎಂಬ ವಿಚಾರವನ್ನು ಅಂದು ಯಡಿಯೂರಪ್ಪನವರು ಡೈರಿಯಲ್ಲಿ ಬರೆದಿಟ್ಟಿದ್ದು ಡೈರಿಯ ಪುಟಗಳಲ್ಲಿ ಯಡಿಯೂರಪ್ಪನವರದ್ದು ಎನ್ನಲಾದ ಸಹಿಯೂ ಇದೆ. ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಈ ಡೈರಿಯ ಕೆಲವು ಪುಟಗಳ ಪ್ರತಿಗಳನ್ನು ಸುರ್ಜೆವಾಲ ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಈ ಡೈರಿಯಲ್ಲಿ ಅರುಣ್‌ ಜೇಟ್ಲಿ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಸೇರಿದಂತೆ ಇನ್ನು ಕೆಲವು ಬಿಜೆಪಿ ನಾಯಕರ ಹೆಸರಿದೆ ಮತ್ತು ಅವರಿಗೆಲ್ಲಾ ಎಷ್ಟೆಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿಯಿದೆ ಎನ್ನಲಾಗುತ್ತಿದೆ.

ತನ್ನ ಪಕ್ಷದ ರಾಷ್ಟ್ರೀಯ ನಾಯಕರಿಗೆ, ಕೇಂದ್ರ ಕಮಿಟಿಗೆ ಹಾಗೂ ನ್ಯಾಯಾಧೀಶರಿಗೆ ಸಂದಾಯ ಮಾಡಿರುವ ಒಟ್ಟು 1800 ಕೋಟಿ ರೂಪಾಯಿಗಳ ಮೊತ್ತದ ಲೆಕ್ಕವನ್ನು 2009ರ ಕರ್ನಾಟಕ ರಾಜ್ಯ ವಿಧಾನಮಂಡಲ ಶಾಸಕರ ಡೈರಿಯಲ್ಲಿ ಯಡಿಯೂರಪ್ಪನವರು ತಮ್ಮ ಕೈ ಬರಹದಲ್ಲಿಯೇ ಬರೆದಿಟ್ಟಿದ್ದಾರೆ ಎನ್ನಲಾಗಿರುವ ‘ಯಡಿಯೂರಪ್ಪ ಡೈರಿ’ಯ ಈ ಪುಟಗಳು 2017ರಿಂದ ಇದೀಗ ಆದಾಯ ತೆರಿಗೆ ಇಲಾಖೆಯ ವಶದಲ್ಲಿದೆ ಎಂಬ ಮಾಹಿತಿಯನ್ನು ಖಾಸಗಿ ಸುದ್ದಿ ವೆಬ್‌ ಸೈಟ್‌ ತನ್ನ ತನಿಖೆಯಿಂದ ಬಹಿರಂಗಗೊಳಿಸಿದೆ. ಈ ಡೈರಿಯಲ್ಲಿ ದಾಖಲಾಗಿರುವಂತೆ ಯಡಿಯೂರಪ್ಪನವರು ಕೇಂದ್ರ ಬಿಜೆಪಿ ಕಮಿಟಿಗೆ 1000 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ; ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮತ್ತು ನಿತಿನ್‌ ಗಡ್ಕರಿ ಅವರಿಗೆ ತಲಾ 150 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೋರ್ವ ಪ್ರಭಾವಿ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ 100 ಕೋಟಿ ರೂ. ಸಂದಾಯವಾಗಿದೆ. ಇನ್ನು ಪಕ್ಷದ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಮತ್ತು ಮಾಜೀ ಸಚಿವ ಮುರಳಿ ಮನೋಹರ ಜೋಷಿ ಅವರಿಗೆ ತಲಾ 50 ಕೋಟಿ ರೂಪಾಯಿಗಳನ್ನು ನೀಡಿರುವ ಕುರಿತಾಗಿ ಬರೆದಿಡಲಾಗಿದೆ. ಇನ್ನು ಗಡ್ಕರಿ ಅವರ ಪುತ್ರನ ವಿವಾಹಕ್ಕೆ ಯಡಿಯೂರಪ್ಪನವರ ಕಡೆಯಿಂದ 10 ಕೋಟಿ ರೂಪಾಯಿ ಸಂದಾಯ ಮಾಡಿರುವ ನಮೂದು ಡೈರಿಯ ಈ ಪುಟಗಳಲ್ಲಿದೆ. ಇನ್ನು ನ್ಯಾಯಾಧೀಶರಿಗೆ 250 ಕೋಟಿ ರೂಪಾಯಿಗಳು ಮತ್ತು ವಕೀಲರಿಗೆ 50 ಕೋಟಿ ರೂಪಾಯಿಗಳನ್ನು ಸಲ್ಲಿಸಿರುವ ಕುರಿತಾಗಿ ಮಾಹಿತಿ ಇದೆಯಾದರೂ ಯಾರ ಹೆಸರನ್ನೂ ಇಲ್ಲಿ ಯಡಿಯೂರಪ್ಪನವರು ನಮೂದಿಸಿಲ್ಲದಿರುವುದು ವಿಶೇಷವಾಗಿದೆ.

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.