ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು
ರಾಜ್ಯದಲ್ಲಿದ್ದಾರೆ 10,023 ವಿದೇಶಿ ಶಿಕ್ಷಣಾರ್ಥಿಗಳು
Team Udayavani, Sep 25, 2019, 5:39 AM IST
ಹೊಸದಿಲ್ಲಿ: ಉನ್ನತ ವಿದ್ಯಾಭ್ಯಾಸ ಪಡೆಯಲು ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಹೆಮ್ಮೆಯ ಸಂಗತಿ ಎಂದರೆ ಈ ಶಿಕ್ಷಣಾರ್ಥಿಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು ಅಂತೆ!
ಹೀಗೆಂದು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶವೇ ತಿಳಿಸಿದೆ. ಭಾರತದಲ್ಲಿ ಸದ್ಯ 37,275 ವಿದೇಶಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಇಲ್ಲಿ 10,023 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಅನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (5,003)ವಿದೆ.
ನೇಪಾಲದಿಂದ ಅತೀ ಹೆಚ್ಚು
ಉನ್ನತ ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬರುವ ವಿದೇಶಿಯರ ಪೈಕಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನೇಪಾಲದವರು ಎಂದೂ ಈ ವರದಿ ತಿಳಿಸಿದೆ. ನೇಪಾಲ ಬಿಟ್ಟರೆ ಎರಡನೇ ಸ್ಥಾನದಲ್ಲಿ ಅಫ್ಘಾನಿಸ್ಥಾನವಿದೆ. ವಿದೇಶದಿಂದ ಬರುವ ವಿದ್ಯಾರ್ಥಿಗಳಲ್ಲಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ನೇಪಾಲ, ಅಫ್ಘಾನ್, ಬಾಂಗ್ಲಾದೇಶ, ಸೂಡಾನ್, ಭೂತಾನ್, ನೈಜೀರಿಯ ಸಹಿತ ಸುಮಾರು 164 ದೇಶಗಳಿಂದ ಭಾರತಕ್ಕೆ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಆಗಮಿಸುತ್ತಾರೆ ಎಂದಿದೆ ವರದಿ.
ಬಿ.ಟೆಕ್‌ಗೆ ಬೇಡಿಕೆ
ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಆಯ್ಕೆ ಮಾಡುವ ಕೋರ್ಸ್‌ಗಳಲ್ಲಿ ಬಿ.ಟೆಕ್‌ಗೆ ಹೆಚ್ಚಿನ ಬೇಡಿಕೆಯಿದೆ. 8,861 ವಿದ್ಯಾರ್ಥಿಗಳು ಈ ಕೋರ್ಸ್ ಮಾಡುತ್ತಿದ್ದು, ಶೇ.85ರಷ್ಟು ಯುವಕರು ಬಿ.ಟೆಕ್ ತಮ್ಮ ಆದ್ಯತೆಯ ಕೋರ್ಸ್ ಎಂದಿದ್ದಾರೆ. ಅನಂತರದ ಸ್ಥಾನವನ್ನು ಬಿಬಿಎ(3,354), ಬಿಎಸ್‌ಸಿ(3,320), ಬಿಎ(2226) ಪಡೆದುಕೊಂಡಿವೆ. ಪದವಿ ಕೋರ್ಸ್‌ಗಳಲ್ಲಿ ಬಿ.ಫಾರ್ಮಾ, ಬಿಸಿಎ, ಎಂಬಿಬಿಎಸ್, ನರ್ಸಿಂಗ್ ಹಾಗೂ ಬಿಡಿಎಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ಆಲ್ ಇಂಡಿಯಾ ಸರ್ವೇ ಆಫ್ ಹೈಯರ್ ಎಜುಕೇಷನ್ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.