![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 10, 2019, 3:09 PM IST
ಮುಂಬಯಿ : ರಾಜ್ಯದ ರೆಬೆಲ್ ಶಾಸಕರು ತಂಗಿರುವ ರಿನೈಸೆನ್ಸ್ ಹೊಟೇಲ್ ಎದುರು ಬುಧವಾರ ಬೆಳಗ್ಗೆ 8.15 ರಿಂದ ಕದಲದೆ ಕುಳಿತಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ಮಧ್ಯಾಹ್ನ 2 ಗಂಟೆಯ ವೇಳೆಗೆ ವಶಕ್ಕೆ ಪಡೆದಿದ್ದಾರೆ.
ಸಚಿವಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ವಶಕ್ಕೆ ಪಡೆದಿದ್ದು, ಜೊತೆಯಲ್ಲಿದ್ದ ಸಚಿವ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರನ್ನು ವಶಕ್ಕೆ ಪಡೆಯಲಿಲ್ಲ.
ಸ್ಥಳಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಆಗಮಿಸಿ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಆ ಬಳಿಕ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಸ್ಥಳದಿಂದ ವಶಕ್ಕೆ ಪಡೆದು ಪಡೆದು ಕಾಲಿನ ವಿಶ್ವವಿದ್ಯಾಲಯದ ರೆಸ್ಟ್ ಹೌಸ್‌ಗೆ ಕರೆದೊಯ್ಯಲಾಗಿದೆ.ಶಿವಕುಮಾರ್ ಅವರೊಂದಿಗೆಕೆಲ ಸ್ಥಳೀಯ ಕಾಂಗ್ರೆಸ್ ನಾಯಕರನ್ನೂ ವಶಕ್ಕೆ ಪಡೆದಿದ್ದಾರೆ.
ಹೊಟೇಲ್‌ನ ಸುತ್ತ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಭದ್ರತೆ ಬಿಗಿ ಗೊಳಿಸಲಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ತಿಂಡಿಯನ್ನೂ ಸೇವಿಸದೆ ತೆರಳಿದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೊಟೇಲ್ ಪ್ರವೇಶಿಸಲು ಪೊಲೀಸರು ತಡೆ ಒಡ್ಡಿದ್ದರು.
ನಾನು ಅತೃಪ್ತ ಶಾಸಕರನ್ನು ಭೇಟಿಯಾಗಿಯೇ ಮರಳುವುದು ಎಂದು ಪಟ್ಟು ಹಿಡಿದು ಕುಳಿತಿದ್ದಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ ಕಾಫಿಯನ್ನು ರಸ್ತೆಯಲ್ಲೇ ಕುಡಿದಿದ್ದರು. 10 ಗಂಟೆಯ ಬಳಿಕ ಹಸಿವಾಗುತ್ತಿದೆ ಎಂದು ಹೇಳಿದಾಗ ಮುಂಬಯಿ ಪೊಲೀಸರು ಇಡ್ಲಿ,ವಡೆ ಮತ್ತು ಟೀ ತಂದು ಕೊಟ್ಟಿದ್ದು ಅದನ್ನೂ ಸೇವಿಸಿದ್ದರು. ಕೆಲ ಹೊತ್ತಿನ ಬಳಿಕ ಕುರ್ಚಿಗಳನ್ನು ತಂದು ಕೊಡಲಾಗಿದ್ದು ಸ್ಥಳದಿಂದ ಕದಲದೆ ಪಟ್ಟು ಹಿಡಿದು ಕುಳಿತಿದ್ದರು.ನಾನು ಯಾವುದುಕ್ಕೂ ಜಗ್ಗುವುದಿಲ್ಲ, ಶಾಸಕರು ನಮ್ಮವರು, ಅವರ ಬಳಿ ಮಾತನಾಡಿಯೇ ತೆರಳುತ್ತೇನೆ. ಇಲ್ಲೆ ಬಿದ್ದು ಹೋದರು ಚಿಂತೆ ಇಲ್ಲ ಎಂದು ಹೇಳಿದ್ದರು.
ಬುಕ್ ಮಾಡಿದ್ದ ರೂಂ ಕ್ಯಾನ್ಸಲ್
ಡಿ.ಕೆ.ಶಿವಕುಮಾರ್ ಅವರು ರಿನೈಸೆನ್ಸ್ ಹೊಟೇಲ್ ಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ರೂಂ ಅನ್ನು ಕ್ಯಾನ್ಸಲ್ ಮಾಡಲಾಗಿದ್ದು, ಈ ಬಗ್ಗೆ ತಾಳ್ಮೆಯಲ್ಮೆ ಉತ್ತರ ನೀಡಿದ್ದಾರೆ. ಅವರು ನನ್ನಂತಹ ಗ್ರಾಹಕನ ಬಗ್ಗೆ ಹೆಮ್ಮೆ ಪಡಬೇಕು. ನಾನು ಮುಂಬಯಿಯನ್ನು ಇಷ್ಟಪಡುತ್ತೇನೆ. ಈ ಹೊಟೇಲನ್ನು ಮೆಚ್ಚುತ್ತೇನೆ. ಅವರು ಕ್ಯಾನ್ಸಲ್ ಮಾಡಿರಬಹುದು. ನನಗೆ ಬೇರೆ ರೂಂಗಳಿವೆ ಎಂದಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.