ಚುನಾವಣಾ ವೇಳಾ ಪಟ್ಟಿ ಸೋರಿಕೆ ತನಿಖೆಗೆ ಸಮಿತಿ; ವಾರದೊಳಗೆ ವರದಿ
Team Udayavani, Mar 27, 2018, 7:38 PM IST
ಹೊಸದಿಲ್ಲಿ : ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾ ಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ಮುನ್ನವೇ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿ ಹೋದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗ ಇಂದು ಮಂಗಳವಾರ ತನ್ನ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.
ವಾರದೊಳಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿರುವುದು ವರದಿಗಳು ತಿಳಿಸಿವೆ.
ಭವಿಷ್ಯದಲ್ಲಿ ಈ ರೀತಿಯ ಸೋರಿಕೆ ಘಟಿಸುವುದನ್ನು ತಪ್ಪಿಸಲು ಮಾರ್ಗೋಪಾಯಗಳನ್ನು ಹಾಗೂ ಎಚ್ಚರಿಕೆಯ ಕ್ರಮಗಳನ್ನು ಸೂಚಿಸುವಂತೆಯೂ ಸಮಿತಿಯನ್ನು ಕೇಳಿಕೊಳ್ಳಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರಿಂದು ಬೆಳಗ್ಗೆ ಸುದ್ದಿ ಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆಯ 2018ರ ಚುನಾವಣಾ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವುದಕ್ಕೆ ಮುನ್ನವೇ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆದುದು ಹೇಗೆ ಮತ್ತು ಯಾರಿಂದ ಎಂಬುದು ಅನಂತರದಲ್ಲಿ ಬಯಲಾಗಿತ್ತು.
ಮೇ 12ರಂದು ಮತದಾನ ನಡೆಯಲಿದೆ ಎಂಬುದನ್ನು ಟ್ವಿಟರ್ ಮೂಲಕ ಮೊದಲಾಗಿ ಬಹಿರಂಗಪಡಿಸಿದವರು ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎನ್ನುವುದು ಗೊತ್ತಾಗಿತ್ತು.
ಅದಾಗಿ ಬೆಳಗ್ಗೆ 11.08ರ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳ ಮೀಡಿಯ ಹೆಡ್ ಇನ್ ಚಾರ್ಜ್ ಶ್ರೀವಾಸ್ತವ ಅವರು ಟ್ವೀಟ್ ಮಾಡಿ ಇದೇ ವಿಷಯವನ್ನು ಬಹಿರಂಗಪಡಿಸಿದ್ದರು.
ಆದರೆ ಇವರಿಬ್ಬರೂ ಮತದಾನದ ದಿನಾಂಕವನ್ನು (ಮೇ 12) ಸರಿಯಾಗಿಯೇ ಹೇಳಿದ್ದರು; ಆದರೆ ಮತ ಎಣಿಕೆ ದಿನಾಂಕವನ್ನು (ಮೇ 15) ತಪ್ಪಾಗಿ ಮೇ 18 ಎಂದು ಟ್ವೀಟ್ ಮಾಡಿದ್ದರು.
ಬಿಜೆಪಿ ಸಚಿವ ಮುಖ್‌ತಾರ್ ಅಬ್ಟಾಸ್ ನಕ್ವಿ ಅವರು “ಅಮಿತ್ ಮಾಳವೀಯ ಟ್ವೀಟ್ ಮಾಡಿರುವುದು ಟಿವಿ ಚ್ಯಾನಲ್ ಮೂಲಗಳ ಆಧಾರದಲ್ಲಿ; ಮುಖ್ಯ ಚುನಾವಣಾ ಆಯುಕ್ತರ ಮಹತ್ವವನ್ನು ತಗ್ಗಿಸುವ ಯಾವುದೇ ಇರಾದೆ ಅವರಿಗೆ ಇರಲಿಲ್ಲ’ ಎಂದು ತಮ್ಮ ಸಹೋದ್ಯೋಗಿಯನ್ನು ಸಮರ್ಥಿಸಿಕೊಂಡಿದ್ದರು.
ಶ್ರೀವಾಸ್ತವ ಕೂಡ ಬಹುತೇಕ ಇದೇ ಬಗೆಯ ಉತ್ತರವನ್ನು ಕೊಟ್ಟು ನುಣುಚಿಕೊಂಡಿದ್ದಾರೆ. ತಮ್ಮ ಟ್ವೀಟ್‌ಗೆ ಟಿವಿ ಚ್ಯಾನಲ್‌ಗಳ ಮೂಲವನ್ನು ದೂರಿದ್ದಾರೆ. ಆದರೆ ಶ್ರೀವಾಸ್ತವ ಅವರು ಟ್ವೀಟ್ ಮಾಡಬಾರದಿತ್ತು ಎಂದು ಕರ್ನಾಟಕ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದರು.
ಚುನಾವಣಾ ದಿನಾಂಕ ಅಧಿಕೃತ ಪ್ರಕಟನೆ ಸುದ್ದಿಗೋಷ್ಠಿಗೆ ಮುನ್ನವೇ ಸೋರಿ ಹೋಗಿರುವ ಬಗ್ಗೆ ಮಾಧ್ಯಮದವರು ಗುಲ್ಲೆಬ್ಬಿಸಿ ಸಿಇಸಿ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಸಿಇಸಿ ನಿರುತ್ತರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.