ವಲಸಿಗರ ಸದಾ ಕೈ ಬೀಸಿ ಕರೆಯುವ ಕರ್ನಾಟಕ

Team Udayavani, Oct 27, 2017, 11:01 AM IST

karnataka-map.jpg

ನವದೆಹಲಿ: ಜಗತ್ತಿನಲ್ಲಿ ವಲಸೆಯ ವರಸೆ ವಿಪರೀತವಾಗಿ ಬಿಟ್ಟಿದೆ. ರಾಷ್ಟ್ರ ರಾಷ್ಟ್ರಗಳ ನಡುವೆ ಮಾತುಗೆಡು ವುದಕ್ಕೂ, ದೇಶವೊಂದರಲ್ಲಿ ಪರ ವಿರೋಧದ ಚರ್ಚೆ ಗಳನ್ನು ಹುಟ್ಟುಹಾಕುವುದಕ್ಕೂ ವಲಸೆ ಕಾರಣವಾಗು ತ್ತಿದೆ. ರಾಷ್ಟ್ರಗಳ ನಡುವಷ್ಟೇ ಅಲ್ಲ, ರಾಜ್ಯಗಳ ನಡುವಿನಲ್ಲಿ ನಡೆಯುವ ವಲಸೆಯೂ ಅಷ್ಟೇ ಪ್ರಮಾಣದಲ್ಲಿ ಪರ-ವಿರೋಧವನ್ನು ಹುಟ್ಟುಹಾಕುತ್ತಿದೆ.

ಗಮನಾರ್ಹ ಅಂಶವೇನೆಂದರೆ ಕರ್ನಾಟಕ, ಆಂಧ್ರಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಿದ್ದು, ಎರಡೂ ರಾಜ್ಯಗಳು ಪ್ರಮುಖವೆನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಭಾರತದ ರಾಜ್ಯಗಳ ನಡುವೆಯೂ ವಲಸೆ ಹೆಚ್ಚುತ್ತಿದೆ ಎನ್ನುತ್ತಿರುವ ವರ್ಲ್ಡ್ ಎಕನಾಮಿಕ್‌ ಫೋರಂನ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿನ ಆಂತರಿಕ ವಲಸೆ ಪ್ರಕ್ರಿಯೆ ವಾರ್ಷಿಕವಾಗಿ 4.5 ಪ್ರತಿಶತದಷ್ಟು ಬೆಳೆಯುತ್ತಾ ಸಾಗುತ್ತಿದೆ.

2001- 2011ರ ಅವಧಿಯಲ್ಲಿನ ಆಂತರಿಕ ವಲಸೆಯ ಪ್ರಮಾಣ ಅದರ ಹಿಂದಿನ ದಶಕಕ್ಕಿಂತ ದ್ವಿಗುಣವಾಗಿದೆ ಎಂದಿದೆ. ಅಂದರೆ ವರ್ಷವೊಂದರಲ್ಲಿ 50ರಿಂದ 60 ಲಕ್ಷ ಜನರು ದೇಶದಲ್ಲಿ ನೆಲೆ ಬದಲಿಸುತ್ತಿದ್ದಾರೆ. ವಲಸೆಗೆ ಆರ್ಥಿಕ, ಸಾಮಾಜಿಕ ಮತ್ತು ಸೃಜನಶೀಲ ಅವಕಾಶಗಳು ಕಾರಣ ಎನ್ನುತ್ತಾರೆ ವರ್ಲ್ಡ್ ಎಕನಾಮಿಕ್‌ ಫೋರಂನ ಅಧಿಕಾರಿ  ಎಲೀಸ್‌ ಚಾರ್ಲ್ಸ್‌.

ವಲಸಿಗರಿಗೆ ಭಾರತದಲ್ಲಿ ಅನ್ವರ್ಥವಾಗಿ ನಿಲ್ಲುವುದು ಬೆಂಗಳೂರು ಸೇರಿದಂತೆ, ದೇಶದ ಇನ್ನಿತರ ಮೆಟ್ರೋ ಸಿಟಿಗಳು. ನಗರದಲ್ಲಿನ ವಲಸೆ ಪ್ರಮಾಣದಲ್ಲಿ 3ನೇ ಒಂದು ಭಾಗ ದಷ್ಟು ವಲಸೆ ಆಂಧ್ರ, ಕರ್ನಾಟಕದಲ್ಲಿ ಇದೆ. ಸಹಜವಾಗಿಯೇ ತಲಾವಾರು ಆದಾಯ ಕಡಿಮೆಯಿರುವ ರಾಜ್ಯಗಳಾದ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಹೊರ ಹೋಗುವವರ ಸಂಖ್ಯೆ ಅಧಿಕವಿದ್ದರೆ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ವಲಸೆ ಬರುವವರ ಪ್ರಮಾಣ ಹೆಚ್ಚು. 

ಅಂತಾರಾಷ್ಟ್ರೀಯ ವರ್ಸಸ್‌ ಅಂತರಾಜ್ಯ: ಅಂತಾರಾಷ್ಟ್ರೀಯ ವಲಸಿಗರಿಗಿಂತ ಅಂತಾರಾಜ್ಯ ವಲಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚು ಎನ್ನುತ್ತದೆ ವಿಶ್ವಸಂಸ್ಥೆ. ಜಾಗತಿಕವಾಗಿ ಇಂದು 24.4 ಕೋಟಿ ವಲಸಿಗರಿದ್ದರೆ ಅದಕ್ಕಿಂತ ಮೂರುಪಟ್ಟು ಹೆಚ್ಚು ವಲಸಿಗರ ವಿನಿಮಯ ರಾಜ್ಯಗಳ ನಡುವೆ ಆಗುತ್ತಿದೆ. ಆದರೆ ಅಂತರ್‌ ರಾಜ್ಯ ವಲಸೆಯ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿಲ್ಲ. 

ರಾಜಕೀಯ ಚರ್ಚೆಗಳಲ್ಲೂ, ನೀತಿ ನಿರೂಪಣೆಯಲ್ಲೂ ಈ ವಿಷಯವನ್ನು ಕಡೆಗಣಿಸಲಾಗುತ್ತಿದೆ. ವಿಶ್ವಸಂಸ್ಥೆಯೂ ಇದೇ ಮಾತನ್ನು ಪುನರುಚ್ಚರಿಸುತ್ತಿದೆ. ರಾಜಕೀಯ ನೀತಿಗಳಲ್ಲಿ ಆಂತರಿಕ ವಲಸಿಗರ ವಿಚಾರವನ್ನು ಕಡೆಗಣಿಸುತ್ತಿರುವುದರಿಂದ ರಾಜ್ಯಗಳ ಜನರ ನಡುವೆ ಬಿಕ್ಕಟ್ಟು ಹೆಚ್ಚುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು. 

ಪುಣೆ ನಂಬರ್‌ 1
ಸದ್ಯ ಏಷ್ಯಾದಲ್ಲಿ ಹೆಚ್ಚು ವಲಸೆ ಎದುರಿಸುತ್ತಿರುವ ನಗರ ಮಹಾರಾಷ್ಟ್ರದ ಪುಣೆ ಮತ್ತು ಗುಜರಾತ್‌ನ ಸೂರತ್‌. ಸಹಜವಾಗಿಯೇ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ವೇಗವಾಗಿ ಸಾಗುತ್ತಿರುವ ಆಂಧ್ರ ಪ್ರದೇಶ ಮತ್ತು ಕರ್ನಾಟಕಕ್ಕೂ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬನ ಆರ್ಥಿಕ ಪರಿಸ್ಥಿತಿಗೂ ವಲಸೆಗೂ ಅವಿನಾಭಾವ ಸಂಬಂಧವಿದೆ ಎನ್ನುವು ದನ್ನು ಸಾರುತ್ತಿದೆ ಈ ವರದಿ.

ಉದಾಹರಣೆಗೆ ಬಿಹಾರದ ತಲಾ ಆದಾಯ ಸೋಮಾಲಿಯಾಕ್ಕೆ ಅಜಮಾಸು ಸಮನಾಗಿದೆ(520 ಡಾಲರ್‌) ಅಲ್ಲದೇ, ಇನ್ನು ಒಬ್ಬ ಮಹಿಳೆಯ ಮಕ್ಕಳ ಜನನ ಪ್ರಮಾಣ 3.4ರಷ್ಟಿದೆ. ಇನ್ನೊಂದೆಡೆ ದಕ್ಷಿಣ ರಾಜ್ಯ ಕೇರಳದ ತಲಾ ಆದಾಯ ಬಿಹಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಮಕ್ಕಳ ಜನನ ಪ್ರಮಾಣ ಒಬ್ಬ ಮಹಿಳೆಗೆ 1.6 ರಷ್ಟಿದೆ ಎನ್ನುತ್ತದೆ ಈ ವರದಿ.  

ಟಾಪ್ ನ್ಯೂಸ್

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.