ಕರ್ತಾರ್ಪುರ ಕಾರಿಡಾರ್ ಅತ್ಯಂತ ಅಪಾಯಕಾರಿ : ಸ್ವಾಮಿ ಎಚ್ಚರಿಕೆ
Team Udayavani, Nov 26, 2018, 4:12 PM IST
ಹೊಸದಿಲ್ಲಿ : ಕರ್ತಾರ್ಪುರ್ ಕಾರಿಡಾರ್ ತೆರೆಯುವ ಉಪಕ್ರಮವು ಅತ್ಯಂತ ಅಪಾಯಕಾರಿಯಾದೀತು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.
“ಕರ್ತಾರ್ಪುರ ಕಾರಿಡಾರ್ ಅಪಾಯಕಾರಿ; ಅಲ್ಲಿ ಸೂಕ್ತ ತಪಾಸಣೆ ಇಲ್ಲದಿರುವುದರಿಂದ ಅದರ ದುರ್ಬಳಕೆ ನಿಶ್ಚಿತ. ಕೇವಲ ಪಾಸ್ ಪೋರ್ಟ್ ತೋರಿಸಿದರೆ ಸಾಲದು; ದಿಲ್ಲಿಯ ಚಾಂದನೀ ಚೌಕ್ ನಲ್ಲಿ ನಿಮಗೆ ಕೇವಲ 250 ರೂ.ಗೆ ಪಾಸ್ ಪೋರ್ಟ್ ಸಿಗುತ್ತದೆ. ನಾವು ಪಾಕಿಸ್ಥಾನೀಯರನ್ನು ದೇಶದೊಳಗೆ ಬರಲು ಬಿಡಬಾರದು’ ಎಂದು ಸ್ವಾಮಿ ಹೇಳಿದ್ದಾರೆ.
ನ.28ರಂದು ನಡೆಯಲಿರುವ ಕರ್ತಾರ್ಪುರ ಕಾರಿಡಾರ್ ಕಾರ್ಯಕ್ರಮಕ್ಕೆ ಯಾರೂ ಪಾಕಿಸ್ಥಾನಕ್ಕೆ ಹೋಗಬಾರದು; ಪಾಕಿಸ್ಥಾನದ ಆಹ್ವಾನವನ್ನು ಯಾವ ಸಚಿವರೂ ಸ್ವೀಕರಿಸಬಾರದು ಎಂದು ಸ್ವಾಮಿ ಗುಡುಗಿದರು.
ನಮ್ಮ ಜನರನ್ನು ನಮ್ಮ ದೂತಾವಾಸದ ಅಧಿಕಾರಿಗಳು ಸೇರಿಕೊಳ್ಳುವುದಕ್ಕೆ ಪಾಕಿಸ್ಥಾನ ಬಿಡುತ್ತಿಲ್ಲ; ಹಾಗಿರುವಾಗ ನಾವೇಕೆ ಪಾಕಿಸ್ಥಾನಕ್ಕೆ ಹೋಗಬೇಕು ಎಂದು ಸ್ವಾಮಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.