ಕರ್ತವ್ಯ ಪಥ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಅನಾವರಣ
Team Udayavani, Sep 8, 2022, 7:45 PM IST
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಅನಾವರಣ ಮಾಡಿ ಪುಷ್ಪ ನಮನ ಸಲ್ಲಿಸಿದರು.
28 ಅಡಿ ಎತ್ತರದ ಪ್ರತಿಮೆ ಕೇಂದ್ರದ 13,450 ಕೋಟಿ ರೂ.ಗಳ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿದೆ, ಇದು ಹೊಸ ಸಂಸತ್ತಿನ ಕಟ್ಟಡ, ಹೊಸ ಕಚೇರಿ ಮತ್ತು ಪ್ರಧಾನ ಮಂತ್ರಿ ಮತ್ತು ಉಪಾಧ್ಯಕ್ಷರ ನಿವಾಸಗಳು ಮತ್ತು ಹೊಸ ಸಚಿವಾಲಯದ ಕಟ್ಟಡಗಳನ್ನು ಹೊಂದಿರುತ್ತದೆ. ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು, ರಾಷ್ಟ್ರಪತಿ ಭವನದ ಸುತ್ತಲಿನ ಸಚಿವಾಲಯದ ಕಟ್ಟಡಗಳನ್ನು ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲಾಗುತ್ತಿದೆ.
ಕಪ್ಪು ಗ್ರಾನೈಟ್ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್‌ನಿಂದ ಕೆತ್ತಲಾಗಿದೆ. ತೆಲಂಗಾಣದಿಂದ ಪ್ರತಿಮೆಗಾಗಿ ಗ್ರಾನೈಟ್‌ನ ಬ್ಲಾಕ್ ಅನ್ನು ದೆಹಲಿಗೆ ಸಾಗಿಸಿ ಎರಡು ತಿಂಗಳಲ್ಲಿ ಪ್ರತಿಮೆಯನ್ನು ಕೆತ್ತಲಾಗಿದೆ.
ಬಿಗಿ ಭದ್ರತೆಯ ನಡುವೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಬಹು ನಿರೀಕ್ಷಿತ, ಪರಿಷ್ಕೃತ ‘ಕರ್ತವ್ಯ ಪಥ’ವನ್ನು ಉದ್ಘಾಟಿಸಲಿದ್ದಾರೆ.. ಪುನರಾಭಿವೃದ್ಧಿಗೊಂಡ ಮಾರ್ಗವು ಕೇಂದ್ರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಯ ಒಂದು ಭಾಗವಾಗಿದೆ.
ಪ್ರತಿಮೆಯ ವಿಶೇಷ ಏನು? :
28 ಅಡಿ- ಇಷ್ಟು ಎತ್ತರ. ಅಂದರೆ ಎರಡು ಮಹಡಿ ಕಟ್ಟಡದ ಎತ್ತರಕ್ಕಿಂತ ಕೊಂಚ ಎತ್ತರವಿದೆ. 600 ಅಡಿ ಎತ್ತರ ಇರುವ ಗುಜರಾತ್‌ನ ಏಕತಾಮೂರ್ತಿಗೆ ಹೋಲಿಕೆ ಮಾಡಿದರೆ ಕಡಿಮೆ.
280 ಟನ್- ಪ್ರತಿಮೆಗೆ ಬಳಕೆ ಮಾಡಲಾಗಿರುವ ಕಪ್ಪು ಗ್ರ್ಯಾನೈಟ್‌ನ ತೂಕ
65,000
ಕೆ.ಜಿ.- ಪ್ರತಿಮೆಯ ತೂಕ
26,000
ಮಾನವ ಗಂಟೆ- ಕೆತ್ತಲು ಬೇಕಾದ ಅವಧಿ
ಎಲ್ಲಿ ಸ್ಥಾಪನೆ? :
ಐದನೇ ಕಿಂಗ್ ಜಾರ್ಜ್ ಇದ್ದ ಪ್ರತಿಮೆ ಸ್ಥಾನದಲ್ಲಿ ನೇತಾಜಿಯವರ ಹಾಲೋಗ್ರಾಂ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ಜ.23ರಂದು ಅನಾವರಣಗೊಳಿಸಿದ್ದರು. ಅದೇ ಜಾಗದಲ್ಲಿ ಹೊಸ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.
ಶಿಲೆ ಎಲ್ಲಿಯದ್ದು? :
ಪ್ರತಿಮೆಗಾಗಿ ತೆಲಂಗಾಣದ ತೆಲಂಗಾಣದ ಕಪ್ಪು ಗ್ರಾನೈಟ್ ಬಳಕೆ ಮಾಡಲಾಗಿದೆ. ಅದನ್ನು ಸಂಪೂರ್ಣ ಕೈಯಿಂದಲೇ ಕೆತ್ತಲಾಗಿದೆ. ಕೆಲಸ ಪೂರ್ತಿಗೊಂಡ ಬಳಿಕ ತೆಲಂಗಾಣದ ಖಮ್ಮಂನಿಂದ 1,665 ಕಿ.ಮೀ. ದೂರ ವಿಶೇಷವಾಗಿರುವ ಟ್ರಕ್ ಮೂಲಕ ನೇತಾಜಿ ಪ್ರತಿಮೆಯನ್ನು ಹೊಸದಿಲ್ಲಿಗೆ ತರಲಾಗಿದೆ. 100 ಅಡಿ ಉದ್ದದ ಟ್ರಕ್ ಮತ್ತು 140 ಟೈರ್‌ಗಳನ್ನು ಅದು ಹೊಂದಿತ್ತು.
ಶಿಲ್ಪಿ ಯಾರು? :
ಕೇದಾರನಾಥದಲ್ಲಿ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಅನಾವರಣಗೊಂಡ 12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್ ಯೋಗಿರಾಜ್ ಅವರೇ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಯ ಕೆತ್ತನೆಯನ್ನು ಮಾಡಿದ್ದಾರೆ.
ಕೆನೋಪಿಯ ಮಹತ್ವವೇನು? :
ಇಂಡಿಯಾ ಗೇಟ್‌ನಿಂದ 150 ಮೀಟರ್ ದೂರದಲ್ಲಿ ಪೂರ್ವಕ್ಕೆ ಇರುವ ಸಿ-ಹೆಕೊÕàಜೆನ್‌ನಲ್ಲಿ 73 ಅಡಿ ಎತ್ತರದ ಕನೋಪಿ ಯನ್ನು ಸ್ಥಾಪಿಸಲಾಗಿದೆ. ಮಹಾಬಲಿಪುರಂನಲ್ಲಿ ಇರುವ ಆರನೇ ಶತಮಾನದ ಕಲಾಕೃತಿಯಿಂದ ಸ್ಫೂರ್ತಿಗೊಂಡು ಎಡ್ವಿನ್ ಲ್ಯೂಟೆನ್ ಅದನ್ನು ವಿನ್ಯಾಸಗೊಳಿಸಿದ್ದ. 1936ರಲ್ಲಿ ಇಂಡಿಯಾ ಗೇಟ್ ಆವರಣಕ್ಕೆ ಅದನ್ನು ಸೇರ್ಪಡೆಗೊಳಿಸಲಾಗಿತ್ತು. ಅದಕ್ಕೆ ಪೂರಕವಾಗಿ ಭಾರತದ ಚಕ್ರವರ್ತಿಯಾಗಿದ್ದ ಐದನೇ ಕಿಂಗ್ ಜಾರ್ಜ್‌ನ 50 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯ ನಂತರ ಪ್ರತಿಮೆಯ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ಅದು ದೇಶದ ಆಡಳಿತದ ನೀತಿ ನಿರೂಪಣೆ ಮಾಡುವ ಸ್ಥಳದ ಕೇಂದ್ರ ಭಾಗದಲ್ಲಿತ್ತು. ಅನಂತರ 1968ರಲ್ಲಿ ಅದನ್ನು ಸ್ಥಳಾಂತರ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farmers Protest: ರೈತ ದಲ್ಲೇವಾಲ್ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್ ಕಿಶೋರ್ ನಿರಶನ
RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ
Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.