Kashmir ಎನ್‌ಕೌಂಟರ್: ಹತ ಉಗ್ರರ ಸಂಖ್ಯೆ 8ಕ್ಕೆ ಏರಿಕೆ ; ಇಬ್ಬರು ಯೋಧರು ಹುತಾತ್ಮ
Team Udayavani, Jul 7, 2024, 10:40 PM IST
ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶನಿವಾರದಿಂದ ನಡೆಸುತ್ತಿರುವ ಉಗ್ರರ ಬೇಟೆ ಮುಂದುವರಿದಿದ್ದು, ಭಾನುವಾರ ಹತ ಉಗ್ರರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರು ಅಡಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಶನಿವಾರವೇ ಭದ್ರತಾ ಪಡೆಗಳು ಅವಳಿ ಎನ್‌ಕೌಂಟರ್ ಆರಂಭಿಸಿದ್ದವು. ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಕಾರ್ಯಾಚರಣೆಯಲ್ಲಿ 8 ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಪೈಕಿ ಮೊಡೆರ್‌ಗಾಮ್‌ನಲ್ಲಿ ಇಬ್ಬರು ಉಗ್ರರ ಶವ, ಚಿನ್ನಿಗಾಮ್‌ನಲ್ಲಿ ನಾಲ್ವರ ಶವ ಸಿಕ್ಕಿ ದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಆರ್‌ಆರ್ ಸ್ವೆ„ನ್ ಹೇಳಿದ್ದಾರೆ.
ಸರಣಿ ಕೃತ್ಯದ ಹಿಂದಿದೆ ಲಷ್ಕರ್ ಉಗ್ರನ ಕೈವಾಡ
ರಿಯಾಸಿ ಬಸ್ ದಾಳಿ ಸೇರಿ ಕಾಶ್ಮೀರ ದಲ್ಲಿ ನಡೆದ ಸರಣಿ ಉಗ್ರ ಕೃತ್ಯಗಳ ಹಿಂದೆ ಲಷ್ಕರ್-ಎ- ತೋಯ್ಬಾದ ಉಪ ಸಂಘಟನೆ ದಿ ರೆಸಿಸ್ಟೆಂಟ್ ಫ್ರಂಟ್‌ನ ಮೋಸ್ಟ್ ವಾಂಟೆಡ್ ಉಗ್ರ ಶೈಫುಲ್ಲಾ ಸಾಜಿದ್ ಜೆಟ್‌ನ ಕೈವಾಡ ಇದೆ ಎನ್‌ಐಎ ತಿಳಿಸಿದೆ. ಈತ ಪಾಕ್‌ನಲ್ಲಿದ್ದು ಕೊಂಡೇ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಪಿತೂರಿ ರೂಪಿಸಿದ್ದಾನೆ. ಉಗ್ರರು ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡುವುದೇ ಈತನ ಕೆಲಸ. ಇವನ ತಲೆಗೆ 10 ಲಕ್ಷ ಬಹುಮಾನ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.