ಲೀಥಿಯಂಗೆ ದಾಳಿ ಭೀತಿ: ಕಾಶ್ಮೀರದಲ್ಲಿನ ನಿಕ್ಷೇಪದ ಮೇಲೆ ಉಗ್ರರಿಂದ ದಾಳಿ ಬೆದರಿಕೆ
Team Udayavani, Feb 14, 2023, 8:10 AM IST
ಹೊಸದಿಲ್ಲಿ: ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪತ್ತೆಯಾದ ಲೀಥಿಯಂ ನಿಕ್ಷೇಪದ ಮೇಲೂ ಉಗ್ರರ ಕಣ್ಣು ಬಿದ್ದಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಬೆಂಬಲಿತ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್(ಪಿಎಎಫ್ಎಫ್) ಈ ನಿಕ್ಷೇಪದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದೆ.
3 ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಇಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪವಿರುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಪತ್ರವೊಂದನ್ನು ಬಿಡುಗಡೆ ಮಾಡಿರುವ ಪಿಎಎಫ್ಎಫ್, ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ವಿರುದ್ಧ ತಿರುಗಿಬೀಳುವಂತೆ ಸ್ಥಳೀಯರನ್ನು ಪ್ರಚೋದಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಿಂದ ಈ ಪತ್ರವನ್ನು ಪೋಸ್ಟ್ ಮಾಡಲಾಗಿದೆ.
“ಜಮ್ಮು-ಕಾಶ್ಮೀರದ ಸಂಪ ನ್ಮೂಲಗಳನ್ನು ಭಾರತದ ಯಾವುದೋ ಒಂದು ಕಂಪೆನಿ ಬಂದು ಲೂಟಿ ಮಾಡಲು ನಾವು ಬಿಡುವುದಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಅದರ ಮೇಲೆ ಡ್ರೋನ್‌ವೊಂದರ ಚಿತ್ರವನ್ನೂ ಹಾಕಲಾಗಿದೆ. ಈ ಮೂಲಕ, ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳ ವಣಿಗೆಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ.
ತಜ್ಞರು ಏನನ್ನುತ್ತಾರೆ?: ಈವರೆಗೆ ಕಣಿವೆಯು ಸೇಬು ಮತ್ತು ಪ್ರವಾ ಸೋದ್ಯಮಕ್ಕೆ ಮಾತ್ರ ಹೆಸರಾಗಿತ್ತು. ಮುಂದೆ ಇದು ದೇಶದ ಲೀಥಿಯಂ ಪೂರೈಕೆದಾರನೆಂಬ ಹಿರಿಮೆ ಗಳಿಸಲಿದೆ. ಗಣಿ ಕೈಗಾರಿಕೆ ಮತ್ತು ಇವಿ ಉತ್ಪಾದನ ಕಂಪೆನಿಗಳು ಸ್ಥಳೀಯ ಯುವಕರಿಗೆ ಭಾರೀ ಉದ್ಯೋಗಾವಕಾಶಗಳನ್ನು ಕಲ್ಪಿಸಲಿವೆ. ಇದು ಪಾಕ್ ಐಎಸ್‌ಐಗೆ ತೀವ್ರ ಹಿನ್ನಡೆ ಉಂಟು ಮಾಡಲಿದೆ ಎಂದು ಸೈಬರ್ ಗುಪ್ತಚರ ವಿಶ್ಲೇಷಕ ನೀಲೇಶ್ ಪುರೋಹಿತ್ ಹೇಳಿದ್ದಾರೆ. ಅಲ್ಲದೇ ಯುವಕರಿಗೆ ಉದ್ಯೋಗ ದೊರೆತಷ್ಟೂ, ಅವರು ಜಿಹಾದಿ ಮತ್ತು ಒಳನುಸುಳುವಿಕೆ ಜಾಲದಿಂದ ದೂರ ವುಳಿಯುತ್ತಾರೆ. ಇದನ್ನು ಅರಗಿಸಿಕೊಳ್ಳಲು ಉಗ್ರ ಸಂಘ ಟನೆ ಗಳಿಗೆ ಸಾಧ್ಯವಾಗುತ್ತಿಲ್ಲ. ಅದರ ಪರಿಣಾಮವೇ ಈ ಬೆದರಿಕೆ ಪತ್ರ ಎಂದು ಇನ್ನೂ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂನಲ್ಲಿ ಅರ್ಜಿ ವಜಾ
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಗಾಗಿ ಆಯೋಗ ರಚಿಸಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಕಾಶ್ಮೀರದ ಇಬ್ಬರು ನಿವಾಸಿಗಳು ಈ ಅರ್ಜಿ ಸಲ್ಲಿಸಿದ್ದರು.
ಪತ್ರದಲ್ಲಿ ಏನಿದೆ?
ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸಂಪನ್ಮೂಲಗಳನ್ನು ಯಾರೋ ಕದ್ದೊಯ್ಯುವುದನ್ನು ನಾವು ಸಹಿಸುವುದಿಲ್ಲ. ಅವರು ಇಲ್ಲಿಗೆ ಬಂದು ನಮ್ಮ ಭೂಮಿಯನ್ನು ವಶಕ್ಕೆ ಪಡೆ ಯುತ್ತಾರೆ, ಮನೆಗಳನ್ನ ಧ್ವಂಸ ಮಾಡುತ್ತಾರೆ, ಸಂಪನ್ಮೂಲಗಳನ್ನು ಕದ್ದೊಯ್ಯುತ್ತಾರೆ. ಕೊನೆಗೆ ನರ ಮೇಧ ಮಾಡುತ್ತಾರೆ. ಈ ಸಂಪ ನ್ಮೂಲ ಇಲ್ಲಿನ ಜನರಿಗೆ ಸೇರಿದ್ದು. ಅದನ್ನು ಇಲ್ಲಿನ ಜನರ ಕ್ಷೇಮಾ ಭಿವೃದ್ಧಿಗಾಗಿಯೇ ಬಳಸಬೇಕು. ಇಲ್ಲಿಗೆ ಕಾಲಿಡುವ ಭಾರತೀಯ ಕಂಪೆನಿಗಳ ಮೇಲೆ ನಾವು ದಾಳಿ ಮಾಡಲಿದ್ದೇವೆ. ನಾವು ಯಾರು ಎಂದು ತಿಳಿದವರಿಗೆ ನಮ್ಮ ಉದ್ದೇಶ ಈಡೇರಿಸಿಕೊಳ್ಳುವ ನಾವು ಯಾವ ಹಂತಕ್ಕೆ ಹೋಗುತ್ತೇವೆ ಎಂಬುದೂ ಗೊತ್ತಿದೆ. ಆದರೆ ಅಂತಾರಾಷ್ಟ್ರೀಯ ಕಂಪೆನಿಗಳು ಜಮ್ಮು-ಕಾಶ್ಮೀರಕ್ಕೆ ಬಂದು ಸಂಪ ನ್ಮೂಲಗಳನ್ನು ಅಭಿವೃದ್ಧಿಪಡಿಸಲು ನಾವು ಸಮ್ಮತಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.