Kashmir operation; 55 ವಿದೇಶಿ ಉಗ್ರರು ಸೇರಿ 77 ಮಂದಿ ಫಿನಿಶ್ !
ಕಾಶ್ಮೀರ ಕಾರ್ಯಾಚರಣೆ ಬಗ್ಗೆ ಪೊಲೀಸರ ಸುದೀರ್ಘ ಮಾಹಿತಿ
Team Udayavani, Dec 31, 2023, 6:15 AM IST
ಶ್ರೀನಗರ: ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅನ್ವಯ 2023ರಲ್ಲಿ 76 ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ಹೊಡೆದು ರುಳಿಸಲಾಗಿದ್ದು, ಈ ಪೈಕಿ 55 ಮಂದಿ ವಿದೇಶಿ ಉಗ್ರರೂ ಸೇರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 2023 ರಲ್ಲಿ ಭಯೋತ್ಪಾದಕ ಕೃತ್ಯ ಗಳ ಸಂಖ್ಯೆ ಶೇ.63ರಷ್ಟು ಕಡಿಮೆಯಾಗಿದೆ.
2023ರ ಕಣಿವೆ ಕಾರ್ಯಾ ಚರಣೆ ಕುರಿತು ಡಿಜಿಪಿ ಆರ್.ಆರ್.ಸ್ವೆ„ನ್ ಶನಿವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಮಾಹಿತಿ ಪ್ರಕಾರ, ಭಯೋ ತ್ಪಾ ದಕ ಕೃತ್ಯಗಳಲ್ಲಿ ತೊಡಗಿದ್ದ 291 ಮಂದಿಯನ್ನು ಬಂಧಿಸ ಲಾಗಿದ್ದು, 201ಮಂದಿ ಉಗ್ರರ ಬೆಂಬಲಿಗರ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಅಲ್ಲದೇ, ಒಂದೇ ವರ್ಷದಲ್ಲಿ 76 ಉಗ್ರರನ್ನು ಎನ್‌ಕೌಂಟರ್ ಮಾಡ ಲಾಗಿದೆ, ಈ ಪೈಕಿ 55 ವಿದೇಶಿ ಉಗ್ರಸೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಕಣಿವೆಯಾದ್ಯಂತ 89 ಭಯೋತ್ಪಾದಕ ಘಟಕ ಗಳನ್ನು ಭೇದಿಸಲಾಗಿದ್ದು, 18 ಉಗ್ರ ಅಡಗುತಾಣಗಳನ್ನು ಪತ್ತೆ ಹಚ್ಚಲಾಗಿದೆ ಜತೆಗೆ 170 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ 99 ಆಸ್ತಿಯನ್ನು ಜಪ್ತಿ ಮಾಡಿ, 68 ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.