Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ
Team Udayavani, Nov 9, 2024, 1:04 AM IST
ಶ್ರೀನಗರ: ಸಂವಿಧಾನದ 370ನೇ ವಿಧಿ ಪುನಃಸ್ಥಾಪನೆ ನಿರ್ಣಯವು ಸತತ 3ನೇ ದಿನವೂ ಜಮ್ಮು ಕಾಶ್ಮೀರ ವಿಧಾನಸಭೆಯ ಕಲಾಪವನ್ನು ಕೊಚ್ಚಿಹೋಗುವಂತೆ ಮಾಡಿದೆ. ನಿರ್ಣಯ ಖಂಡಿಸಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಒಂದು ಹಂತದಲ್ಲಿ ಆಡಳಿತ ಹಾಗೂ ವಿಪಕ್ಷ ಶಾಸಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ಕೊನೆಗೆ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಆದೇಶದ ಅನ್ವಯ ವಿಪಕ್ಷದ 12 ಶಾಸಕರನ್ನು ಸದನದಿಂದ ಹೊರದಬ್ಬಲಾಯಿತು.
ಮಾರ್ಷಲ್‌ಗಳು ಶಾಸಕರನ್ನು ಹೊರಕ್ಕೆ ಹೊತ್ತೂಯ್ಯುತ್ತಿದ್ದಂತೆ, ಅದನ್ನು ಖಂಡಿಸಿ ಇತರ 11 ಶಾಸಕರು ಸಭಾತ್ಯಾಗ ಮಾಡಿದರು. ಶುಕ್ರವಾರ ಸದನ ಸಮಾವೇಶ ಗೊಳ್ಳುತ್ತಿದ್ದಂತೆಯೇ ವಿಪಕ್ಷ ಶಾಸಕರು ಸದನದ ಮುಂಗ ಟ್ಟೆಗೆ ಬಂದು “ಪಾಕಿಸ್ಥಾನ ಅಜೆಂಡಾಗೆ ಅವಕಾಶವಿಲ್ಲ’ ಎಂದು ಘೋಷಣೆ ಕೂಗಿದರು. ಸದನದಲ್ಲಿ ಪಿಡಿಪಿ ಶಾಸಕರು 370ನೇ ವಿಧಿ ಬೆಂಬಲಿಸಿ ಬ್ಯಾನರ್ ಪ್ರದರ್ಶಿ ಸಿದರು. ಇದರಿಂದ ಸಿಟ್ಟಾದ ಬಿಜೆಪಿ ಶಾಸಕರು ಪಿಡಿಪಿ ಶಾಸಕರ ಜತೆಗೆ ಗುದ್ದಾಟ ನಡೆಸಿದರು. ಈ ವೇಳೆ ವಿಪಕ್ಷ ಶಾಸಕರು “ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದರು. ಪರಸ್ಪರ ಜಗಳವಾಡುತ್ತಾ, ಟೇಬಲ್ ಮೇಲೆ ನೆಗೆದಾಡುತ್ತಾ ಜನಪ್ರತಿನಿಧಿಗಳು ಕೋಲಾಹಲ ಎಬ್ಬಿಸಿ ದರು. ಸ್ಪೀಕರ್ ಮಾರ್ಷಲ್‌ಗಳನ್ನು ಕರೆಸಿ ಬಿಜೆಪಿ ಶಾಸಕರನ್ನು ಎತ್ತಿ ಹೊರಹಾಕಲು ಆದೇಶ ನೀಡಿದರು.
370ನೇ ವಿಧಿ ಮರುಸ್ಥಾಪನೆ ಯಾರಿಗೂ ಸಾಧ್ಯವಿಲ್ಲ: ಮೋದಿ
ರದ್ದಾಗಿರುವ 370ನೇ ವಿಧಿಯನ್ನು ಜಮ್ಮು ಕಾಶ್ಮೀರದಲ್ಲಿ ಮತ್ತೆ ಜಾರಿಗೊಳಿಸಲು ಪ್ರಪಂಚದ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ ನಾಡಿದ ಮೋದಿ ಕಾಂಗ್ರೆಸ್, ಎನ್‌ಸಿ ಕಾಶ್ಮೀರದ ವಿರುದ್ಧ ಸಂಚು ಆರಂಭಿಸಿವೆ. ಸಂವಿಧಾನವನ್ನು ಕಿತ್ತುಹಾಕಲು ಬಯಸುತ್ತಿವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.