ಸೇನೆಗೆ ಸೇರಿಕೊಳ್ಳಲು ಕಾಶ್ಮೀರಿಗರ ಉತ್ಸಾಹ
ಉಗ್ರರ ಕರೆಯನ್ನೂ ನಿರ್ಲಕ್ಷಿಸಿದ ಯುವಕರು
Team Udayavani, Jul 11, 2019, 5:27 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯ ಕರೆಯನ್ನು ನಿರ್ಲಕ್ಷಿಸಿ ಕಾಶ್ಮೀರದ ಯುವಕರು ಭಾರತೀಯ ಸೇನೆಗೆ ಸೇರಲು ಉತ್ಸಾಹದಿಂದ ಮುಂದಾಗುತ್ತಿರುವುದು ಕಾಶ್ಮೀರದ ಒಟ್ಟು ಚಿತ್ರಣದಲ್ಲಿ ಉಂಟಾದ ಮಹತ್ವದ ಬದಲಾವಣೆಯ ಸೂಚಕವಾಗಿದೆ.
ಮಂಗಳವಾರ ಉಗ್ರ ಅಲ್ ಜವಾಹಿರಿ 14 ನಿಮಿಷದ ವೀಡಿಯೋ ಬಿಡುಗಡೆ ಮಾಡಿ ಭಾರತದ ವಿರುದ್ಧ ಜಿಹಾದ್ ಸಾರುವ ಬಗ್ಗೆ ಕರೆ ನೀಡಿದ್ದ. ಅದರ ಮರುದಿನವೇ, ಅಂದರೆ ಬುಧವಾರ ಕಾಶ್ಮೀರದಲ್ಲಿ ಸೇನೆ ಹಮ್ಮಿಕೊಂಡಿದ್ದ ನೇಮಕಾತಿ ಆಂದೋಲನದಲ್ಲಿ ಸಾವಿರಾರು ಕಾಶ್ಮೀರಿ ಯುವಕರು ಸೇನೆಗೆ ಸೇರಲು ಅತ್ಯುತ್ಸಾಹದಿಂದ ಮುಂದೆ ಬಂದಿದ್ದಾರೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಬುಧವಾರ ಆರಂಭವಾದ ನೇಮಕಾತಿ ಕ್ಯಾಂಪೇನ್ ಜು.16ರ ವರೆಗೂ ನಡೆಯಲಿದೆ.
5,500 ಯುವಕರು ಹಾಜರ್: ಬುಧವಾರ ಆರಂಭವಾದ ನೇಮಕಾತಿ ಕ್ಯಾಂಪೇನ್‌ಗೆ 5,500 ಕಾಶ್ಮೀರಿ ಯುವಕರು ಹಾಜರಾಗಿದ್ದಾರೆ. ಅಷ್ಟೇ ಅಲ್ಲ, ನೇಮಕಾತಿ ಕ್ಯಾಂಪೇನ್‌ಗೆ ಆಗಮಿಸಿದ ಯುವಕರು ಇತರ ಕಾಶ್ಮೀರಿಗರೂ ಸೇನೆಗೆ ಸೇರಲಿ ಎಂದು ಆಗ್ರಹಿಸಿದ್ದಾರೆ. ಭಾರತೀಯ ಸೇನೆಗೆ ಸೇರುವುದು ನನ್ನ ಕನಸು. ಸೇನೆಗೆ ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಈಗಾಗಲೇ ಮೊದಲ ಹಂತದಲ್ಲಿ ಪಾಸಾಗಿದ್ದೇನೆ ಎಂದು ಓರ್ವ ಯುವಕ ಹೇಳಿಕೊಂಡಿದ್ದಾನೆ. ಕಾಶ್ಮೀರದಲ್ಲಿ ತುಂಬಾ ನಿರುದ್ಯೋಗ ಇದೆ. ನಾನು ಸೇನೆಗೆ ಸೇರಿದರೆ ನನ್ನ ಕುಟುಂಬಕ್ಕೆ ಆಸರೆಯಾಗುತ್ತದೆ. ನೇಮಕಾತಿಯಲ್ಲಿ ತುಂಬಾ ಸ್ಪರ್ಧೆ ಇದೆ. ಆದರೂ ಎಲ್ಲ ಯುವಕರೂ ಅರ್ಜಿ ಹಾಕಲಿ ಎಂದು ನೇಮಕಾತಿ ಕ್ಯಾಂಪೇನ್‌ಗೆ ಆಗಮಿಸಿದ ಕೆಲವು ಯುವಕರು ಹೇಳಿಕೊಂಡಿದ್ದಾರೆ.
ಜುಲೈ 9ರಂದು 14 ನಿಮಿಷಗಳ ವೀಡಿಯೋ ಬಿಡುಗಡೆ ಮಾಡಿರುವ ಅಲ್ಖೈದಾ ಮುಖ್ಯಸ್ಥ ಅಲ್ ಜವಾಹಿರಿ, ಭಾರತದಲ್ಲಿ ಸೇನೆ ಮತ್ತು ಸರಕಾರದ ವಿರುದ್ಧ ದಾಳಿ ನಡೆಸುವಂತೆ ಕಾಶ್ಮೀರದ ಉಗ್ರ ಸಂಘಟನೆಗಳಿಗೆ ಸೂಚನೆ ನೀಡಿದ್ದ. ಈ ಸಂದರ್ಭದಲ್ಲಿ ಕಾಶ್ಮೀರ ಹೋರಾಟವು ಭಾರತದ ಸೇನೆ ಮತ್ತು ಸರಕಾರದ ಮೇಲೆ ದಾಳಿಯನ್ನೇ ಕೇಂದ್ರೀಕರಿಸಿರಬೇಕು. ಭಾರತದ ಆರ್ಥಿಕತೆ ಮತ್ತು ಮಾನವ ಸಂಪನ್ಮೂಲವನ್ನು ನಾಶ ಮಾಡಬೇಕು ಎಂದು ಜವಾಹಿರಿ ವಿಡಿಯೋದಲ್ಲಿ ಹೇಳಿದ್ದಾನೆ. ಪಾಕಿಸ್ಥಾನದ ಸರಕಾರ ಮತ್ತು ಸೇನೆಯನ್ನು ಅಮೆರಿಕದ ಬಾಲಬಡುಕರು ಎಂದು ಜರೆದಿರುವ ಜವಾಹಿರಿ, ಪಾಕಿಸ್ಥಾನದ ಕಾಶ್ಮೀರ ನೀತಿಯು ತಾಲಿಬಾನ್ ರೀತಿ ಇರಬೇಕು ಎಂದೂ ಹೇಳಿದ್ದಾನೆ. ಇನ್ನೊಂದೆಡೆ ಪಾಕಿಸ್ಥಾನ ಸೇನೆಯ ವಿರುದ್ಧ ಜವಾಹಿರಿ ಕಿಡಿ ಕಾರಿದ್ದಾನೆ. ಪಾಕಿಸ್ಥಾನವು ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ನಿರೀಕ್ಷಿತ ಕೆಲಸ ಮಾಡುತ್ತಿಲ್ಲ. ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಮಾತು ಕೇಳಿಕೊಂಡು ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದೆ. ಬಂಗಾಲವನ್ನೂ ಇದೇ ಸೇನೆ ಭಾರತಕ್ಕೆ ನೀಡಿತು. ಹೀಗಾಗಿ ಸೇನೆಯ ಮೇಲೆ ವಿಶ್ವಾಸ ಇಡಲಾಗದು ಎಂದು ಜವಾಹಿರಿ ಕಿಡಿಕಾರಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.