ಕಥುವಾ ಅತ್ಯಾಚಾರ ಪ್ರಕರಣ; ಹಿಂದೂಗಳ ವಿರುದ್ಧ ಪಿತೂರಿ: ಮಧು ಕಿಶ್ವರ್
Team Udayavani, Jun 19, 2023, 7:11 PM IST
ಪಣಜಿ: 2018 ರಲ್ಲಿ ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ಕಠುವಾ ಅತ್ಯಾಚಾರ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು ಎಂದು ದೆಹಲಿಯ ದಿ ಗರ್ಲ್ ಫ್ರಮ್ ಕಠುವಾ ಪುಸ್ತಕದ ಲೇಖಕಿ ಮತ್ತು ಮಾನುಷಿಯ ಸಂಪಾದಕಿ ಪ್ರಾ. ಮಧು ಕಿಶ್ವರ್ ಇವರು ಆರೋಪಿಸಿದ್ದಾರೆ.
ಗೋವಾದ ಫೋಂಡಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಕಠುವಾದಲ್ಲಿನ ಸತ್ಯ ಕುರಿತು ಮಾತನಾಡಿ, ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು. ಹಿಂದೂಗಳು ಸಂತ್ರಸ್ತೆಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಅವಳನ್ನು ಕೊಂದು ಹಾಕಿದರು ಎಂದು ಸುಳ್ಳು ಪುರಾವೆಗಳ ಆಧಾರದ ಮೇಲೆ ಕಥೆಯನ್ನು ಕಟ್ಟಿದರು ಮತ್ತು ಜಗತ್ತಿನಾದ್ಯಂತ ಅದನ್ನು ಪ್ರಚಾರ ಮಾಡಿದರು. ಇದರ ಹಿಂದೆ ಹಿಂದೂಗಳ ಮಾನಹಾನಿ ಮಾಡಿ ಅವರನ್ನು ಕಾಶ್ಮೀರದ ನಂತರ ಜಮ್ಮು ಪ್ರದೇಶದಿಂದ ಹೊರದಬ್ಬುವ ಯೋಜಿತ ಪಿತೂರಿಯಾಗಿತ್ತು ಎಂದರು.
ಹಿಂದೂಗಳ ಮೇಲೆ ಗ್ಯಾಂಗ್-ರೇಪ್ ಆರೋಪ ಮಾಡಲಾಗಿದೆ, ಆದರೆ ಶವಪರೀಕ್ಷೆ ವರದಿಯಲ್ಲಿ ಅತ್ಯಾಚಾರ ಆಗಿರುವುದನ್ನು ಒಪ್ಪಿಲ್ಲ. ಪೊಲೀಸ್ ತನಿಖೆಯಲ್ಲಿ ಬಾಲಕಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಹೇಳಿದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಬುರುಡೆಗೆ ಯಾವುದೇ ಆಘಾತ ಕಂಡುಬಂದಿಲ್ಲ. ಆ ವರದಿಯಲ್ಲಿ ಇಂತಹ ಹಲವು ಅಸಂಬದ್ಧತೆಗಳು ಕಂಡು ಬಂದಿವೆ. ಯಾವುದೇ ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಕಾಯಿದೆಯಡಿಯಲ್ಲಿ ಅಪರಾಧವಾಗಿದೆ, ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯ ಛಾಯಾಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಲಾಗಿದೆ. ಈ ಪ್ರಕರಣದಲ್ಲಿ ತನಿಖೆಯ ಹೆಸರಿನಲ್ಲಿ ಹಿಂದೂ ಯುವಕರಿಗೆ ಚಿತ್ರಹಿಂಸೆ ನೀಡಲಾಯಿತು. ಪರಿಣಾಮವಾಗಿ ಅನೇಕ ಹಿಂದೂ ಕುಟುಂಬಗಳು ಕಥುವಾದಿಂದ ವಲಸೆ ಹೋಗಬೇಕಾಯಿತು ಎಂದು ಪ್ರಾ.ಮಧು ಕಿಶ್ಚರ್ ನುಡಿದರು.
ಮತಾಂತರದ ಸಮಸ್ಯೆಯನ್ನುಕೊನೆಗೊಳಿಸುವೆವು ! – ಕುರು ತೈ
ಪ್ರಸ್ತುತ, ಅರುಣಾಚಲ ಪ್ರದೇಶದ ಪ್ರತಿ ಕುಟುಂಬದಲ್ಲಿ ಕನಿಷ್ಠ ಒಬ್ಬ ಸದಸ್ಯನಾದರೂ ಮತಾಂತರಗೊಂಡಿದ್ದಾನೆ, ಇಷ್ಟು ದೊಡ್ಡ ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನಾವು ಪರಿಹಾರವನ್ನು ಕಂಡುಕೊಂಡಿದ್ದೇವೆ. ಒಬ್ಬ ಹಿಂದೂ ವ್ಯಕ್ತಿ ಇತರ ಧರ್ಮದ ವ್ಯಕ್ತಿಯೊಂದಿಗೆ ವಿವಾಹವಾದರೇ ಅವನಿಗೆ ಹಿಂದೂ ಕುಟುಂಬದ ಆಸ್ತಿಯನ್ನು ಆನುವಂಶಿಕವಾಗಿ ಸಿಗುವುದಿಲ್ಲ ಮತ್ತು ತನ್ನ ಮಕ್ಕಳನ್ನು ತಾನೇ ನೋಡಿಕೊಳ್ಳಬೇಕು. ಇದು ಈ ಸಮಸ್ಯೆಯ ಮೇಲೆ ಸ್ವಲ್ಪ ಒತ್ತಡವನ್ನು ಉಂಟುಮಾಡಿದೆ. ಅರುಣಾಚಲ ಪ್ರದೇಶದಲ್ಲಿ ನಾವು ಹಿಂದೂಗಳು ಸಂಘಟಿತರಾಗಿದ್ದರಿಂದ ಮುಂದಿನ 5 ವರ್ಷಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತ ಮತಾಂತರದ ಸಮಸ್ಯೆಯನ್ನು ಕೊನೆಗೊಳಿಸುತ್ತೇವೆ, ಎಂದು ‘ಅರುಣಾಚಲ ಪ್ರದೇಶ ಬಾಂಬೂ ಸಂಸಾಧನ ಮತ್ತು ಅಭಿವೃದ್ಧಿ ಎಜೆನ್ಸಿ’ಯ ಉಪಾಧ್ಯಕ್ಷ ಕುರು ತೈ ಇವರು ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.