6,250 ಕೋಟಿ ರೂ. ವೆಚ್ಚದ ಹೈದರಾಬಾದ್ ಮೆಟ್ರೋ ಯೋಜನೆಗೆ ಅಡಿಗಲ್ಲು ಹಾಕಿದ ಕೆಸಿಆರ್
ಕೇಂದ್ರ ಸಹಕರಿಸಲಿ, ಇಲ್ಲದಿರಲಿ ಉತ್ತಮ ಸಂಪರ್ಕ ಕಲ್ಪಿಸುತ್ತೇವೆ ; ಟಾಂಗ್ ನೀಡಿದ ತೆಲಂಗಾಣ ಸಿಎಂ
Team Udayavani, Dec 9, 2022, 5:06 PM IST
ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಶುಕ್ರವಾರ 31 ಕಿಲೋ ಮೀಟರ್ ಉದ್ದದ ಹೈದರಾಬಾದ್ ಏರ್ಪೋರ್ಟ್ ಮೆಟ್ರೋ ರೈಲು ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ.
ಮೈಂಡ್ಸ್ಪೇಸ್ ಜಂಕ್ಷನ್ನಿಂದ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಈ ಯೋಜನೆಗೆ ಅಂದಾಜು 6,250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ರಾವ್ ಹೇಳಿದ್ದಾರೆ. ಯೋಜನೆಯು 27 ಕಿ.ಮೀ ಎತ್ತರದ ಮಾರ್ಗ ಮತ್ತು 2.5 ಕಿ.ಮೀ ಭೂಗತ ಮಾರ್ಗವನ್ನು ಒಳಗೊಳ್ಳುತ್ತದೆ ಎಂದು ಅವರು ಹೇಳಿದರು.
ಈ ಯೋಜನೆಯನ್ನು 100 ಪ್ರತಿಶತ ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ GMR ಗ್ರೂಪ್ ಮತ್ತು HMDA (ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ) ಅನುದಾನಿತ ಯೋಜನೆಯಾಗಿದೆ ಎಂದು ಕೆಸಿಆರ್ ಅಡಿಗಲ್ಲು ಹಾಕಿದ ನಂತರ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
“ಸಮೂಹ ಸಾರಿಗೆ ಮತ್ತು ಮೆಟ್ರೋ ರೈಲು ಪ್ರಪಂಚದ ಏಕೈಕ ಸಂಚಾರ ಮತ್ತು ಮಾಲಿನ್ಯ-ಮುಕ್ತ ವ್ಯವಸ್ಥೆಗಳಾಗಿವೆ. ಹೈದರಾಬಾದ್ನಲ್ಲೂ ಇದನ್ನು ವಿಸ್ತರಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಸಹಕರಿಸಲಿ, ಇಲ್ಲದಿರಲಿ ನಗರದಲ್ಲಿ ಉತ್ತಮ ಸಂಪರ್ಕ ಕಲ್ಪಿಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.