ಕೆಸಿಆರ್ ಮಹಾಸುದರ್ಶನ ಯಾಗ
100 ಎಕರೆ ಜಾಗದಲ್ಲಿ ನಡೆಯಲಿದೆ ಈ ಕಾರ್ಯಕ್ರಮ
Team Udayavani, Aug 1, 2019, 5:00 AM IST
ಹೈದರಾಬಾದ್: ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ದೈವಭಕ್ತಿ ಇಡೀ ದೇಶಕ್ಕೆ ಚಿರಪರಿಚಿತ. ಸಿಎಂ ಆದಾಗಿನಿಂದಲೂ ಅವರ ದೈವಭಕ್ತಿ ಸಾರ್ವಜನಿಕವಾಗಿ ಪ್ರದರ್ಶನವಾಗುತ್ತಲೇ ಇತ್ತು. ಈ ಬಾರಿ ಕೆಸಿಆರ್ ಎಲ್ಲ ಯಾಗಕ್ಕಿಂತಲೂ ಅತಿದೊಡ್ಡ ಹಾಗೂ ಶ್ರೇಷ್ಠ ಎಂದೇ ಕರೆಯಲಾದ ಮಹಾ ಸುದರ್ಶನ ಯಾಗವನ್ನು ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತ ಪೂರ್ವ ತಯಾರಿಯ ಬಗ್ಗೆ ತ್ರಿದಂಡಿ ಚಿನ್ನ ಜೀಯಾರ ಸ್ವಾಮೀಜಿ ಜೊತೆಗೆ ಇತ್ತೀಚೆಗೆ ಮಾತುಕತೆಯನ್ನೂ ಕೆಸಿಆರ್ ನಡೆಸಿದ್ದಾರೆ. ಆದರೆ ಈ ಯಾಗದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಯಡಾದ್ರಿಯಲ್ಲಿನ ಲಕ್ಷ್ಮೀ ನರಸಿಂಹ ದೇಗುಲದ ಸಮೀಪ ಯಾಗ ನಡೆಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ 1048 ಯಜ್ಞಕುಂಡಗಳನ್ನು ಸ್ಥಾಪಿಸಲಾಗುತ್ತದೆ. ಒಟ್ಟು 100 ಎಕರೆ ಜಾಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 1 ಸಾವಿರ ವೈದಿಕರು ಹಾಗೂ 3 ಸಾವಿರ ಸಹಾಯಕ ವೈದಿಕರು ಈ ಯಾಗ ನೆರವೇರಿಸಲಿದ್ದಾರೆ. ದೇಶದ ಎಲ್ಲೆಡೆ ಇರುವ ವೈಷ್ಣವ ಪೀಠಾಧಿಪತಿಗಳಿಗೆ ಆಹ್ವಾನ ನೀಡಲಿದ್ದಾರೆ. ಬದರಿನಾಥ, ಶ್ರೀರಂಗಮ್, ಜಗನ್ನಾಥ, ತಿರುಪತಿ ಮತ್ತು ಇತರ ಪವಿತ್ರ ಸ್ಥಳಗಳ ಪೀಠಾಧಿಪತಿಗಳು ಈ ಯಜ್ಞಕ್ಕೆ ಆಗಮಿಸಲಿದ್ದಾರೆ.
ಇದರ ಜೊತೆಗೇ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕೇಂದ್ರ ಸಚಿವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ದೇಶ ವಿದೇಶದ ಹಿಂದು ಧಾರ್ಮಿಕ ಮುಖಂಡರನ್ನೂ ಆಹ್ವಾನಿಸಲಿದ್ದಾರೆ. ಅವರೆಲ್ಲರ ಜತೆಗೆ ಸಾಮಾನ್ಯ ಜನರಿಗೂ ಯಾಗ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.