Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್-ಆತಿಷಿ ವಾಗ್ಯುದ್ಧ
Team Udayavani, May 18, 2024, 2:10 AM IST
ಹೊಸದಿಲ್ಲಿ: ದಿಲ್ಲಿ ಸಿಎಂ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಮೇಲೆ ಆಪ್ ರಾಜ್ಯಸಭಾ ಸದಸ್ಯ ಸ್ವಾತಿ ಮಲಿವಾಲ್ ಮಾಡಿರುವ ಹಲ್ಲೆ ಆರೋಪವು ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಇಡೀ ಪ್ರಕರಣದ ಹಿಂದೆ ಬಿಜೆಪಿ ಕೈವಾಡ ವಿದೆ ಎಂದು ಶುಕ್ರವಾರ ದಿಲ್ಲಿ ಸಚಿವೆ ಆತಿಷಿ ಮಲೇìನಾ ಆರೋಪಿಸಿದರೆ, ಇಡೀ ಆಮ್ ಆದ್ಮಿ ಪಕ್ಷ ಒಬ್ಬ ಗೂಂಡಾ ನನ್ನು (ಬಿಭವ್ ಕುಮಾರ್) ರಕ್ಷಿಸಲು ನನ್ನ ಚಾರಿತ್ರ್ಯ ಹರಣ ಮಾಡುತ್ತಿದೆ ಎಂದು ಸಂಸದೆ ಸ್ವಾತಿ ತಿರುಗೇಟು ನೀಡಿದ್ದಾರೆ.
ಕೇಜ್ರಿವಾಲ್ ಬಿಡುಗಡೆ ಆದಾಗಿನಿಂದ ಬಿಜೆಪಿ ಚಿಂತೆಗೀಡಾಗಿದೆ. ಸ್ವಾತಿ ಅವರನ್ನು ದಾಳವಾಗಿಸಿ, ಕೇಜ್ರಿವಾಲ್ ವಿರುದ್ಧ ಬಿಜೆಪಿ ಪಿತೂರಿ ನಡೆಸಿದೆ. ಬಿಜೆಪಿಯವರೇ ಸ್ವಾತಿಯನ್ನು ಮೇ 13ರಂದು ಸಿಎಂ ಮನೆಗೆ ಕಳಿಸಿದ್ದರು. ಈಗ ವೈರಲ್ ಆದ ವೀಡಿಯೋದಲ್ಲಿ ಬಿಭವ್ ಸ್ವಾತಿ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಗಳಿಲ್ಲ ಎಂದು ಸಚಿವೆ ಆತಿಷಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಸ್ವಾತಿ ಮಲಿ ವಾಲ್, 2 ದಿನಗಳ ಹಿಂದೆ ಪಕ್ಷ ಘಟನೆಯ ಸತ್ಯವೆಂದು ಒಪ್ಪಿಕೊಂಡಿತ್ತು ಆದರೆ ಈಗ ಮಾತು ಬದಲಿಸಿದೆ. ಬಿಭವ್ ಇಡೀ ಪಕ್ಷಕ್ಕೆ ಬೆದರಿಕೆ ಹಾಕಿದ್ದಾನೆ. ಅವನ ಬೆದರಿಕೆ ಯಿಂದ ಪಕ್ಷ ನನ್ನ ಚಾರಿತ್ರ್ಯದ ಕುರಿತು ಪ್ರಶ್ನಿಸುತ್ತಿದೆ. ಒಂದು ವೇಳೆ ಬಂಧಿತನಾದರೆ ಎಲ್ಲ ರಹಸ್ಯಗಳು ಹೊರಬರುವ ಕಾರಣ ಬಿಭವ್ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.
ವೀಡಿಯೋ ವೈರಲ್:
ಸಿಎಂ ನಿವಾಸದಲ್ಲಿ ನಡೆದ ಘಟನೆಯ ದೃಶ್ಯಾವಳಿ ಎನ್ನಲಾದ ವೀಡಿಯೋವೊಂದು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಸ್ವಾತಿ ಅವರು ಕೇಜ್ರಿ ವಾಲ್ ಭೇಟಿಗೆ ಕಾಯುತ್ತಿದ್ದಾಗ, ಭದ್ರತಾ ಸಿಬಂದಿ ಅವರನ್ನು ಅಲ್ಲಿಂದ ನಿರ್ಗಮಿಸು ವಂತೆ ಕೇಳುತ್ತಾರೆ. ಆದರೆ ತಾವು ಹೋಗಲ್ಲ ಎಂದು ಸ್ವಾತಿ ಪಟ್ಟುಹಿಡಿದಾಗ, ಮಾತಿನ ಚಕಮಕಿ ನಡೆಯುತ್ತದೆ. ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ, “ತಮ್ಮನ್ನು ಉಳಿಸಿಕೊಳ್ಳಲು ಪೊಲಿಟಿಕಲ್ ಹಿಟ್‌ಮ್ಯಾನ್ ಯತ್ನಿಸುತ್ತಿದ್ದಾರೆ’ ಎಂದು ಕೇಜ್ರಿವಾಲ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಅವರೇ ತಮ್ಮ ಜನರಿಂದ ಈ ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ಇದು ಪೂರ್ಣ ವೀಡಿಯೋವಲ್ಲ.ದೌರ್ಜ ನ್ಯವೆಸಗುವಾಗ ಯಾರು ವೀಡಿಯೋ ಮಾಡುತ್ತಾರೆ. ಮನೆಯ ಹಾಗೂ ರೂಮ್‌ನ ಸಿಸಿಟಿವಿ ದೃಶ್ಯಗಳಿಂದ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಮನೆಯಲ್ಲಿ ಪರಿಶೀಲನೆ
ಸ್ವಾತಿ ಅವರ ಮೇಲೆ ಹಲ್ಲೆಯಾದ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆದಿದ್ದು, ಅವರ ಮುಖ ಹಾಗೂ ಖಾಸಗಿ ಭಾಗದಲ್ಲಿ ಗಾಯಗೊಂಡಿರುವುದು ದೃಢಪಟ್ಟಿದೆ. ಶುಕ್ರ ವಾರ ದಿಲ್ಲಿ ಪೊಲೀಸರು ಘಟನೆಯ ಪುರಾವೆಗಾಗಿ ಕೇಜ್ರಿವಾಲ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.