Kerala ಬಿಜೆಪಿ ಗಾಳ; ಕ್ರಿಶ್ಚಿಯನ್ ಸಮುದಾಯವನ್ನು ಸೆಳೆಯಲು ಯತ್ನ
ಬಿಷಪ್ ಗಳ ಮನೆಗೆ ಬಿಜೆಪಿ ನಾಯಕರ ಭೇಟಿ;ಪ್ರತಿಪಕ್ಷ ಕಾಂಗ್ರೆಸ್‌ನಿಂದ ಟೀಕಾಪ್ರಹಾರ
Team Udayavani, Apr 10, 2023, 6:50 AM IST
ತಿರುವನಂತಪುರಂ: ನಾಗಾಲ್ಯಾಂಡ್, ಮೇಘಾಲಯದಂತಹ ಕ್ರಿಶ್ಚಿಯನ್ ಬಾಹುಳ್ಯದ ರಾಜ್ಯಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಈಗ “ದೇವರ ನಾಡು’ ಕೇರಳದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಸರತ್ತು ತೀವ್ರಗೊಳಿಸಿದೆ.
ಕಳೆದ ತಿಂಗಳ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೇರಳದ ಕನಸನ್ನು ಬಹಿರಂಗವಾಗಿಯೇ ಬಿಚ್ಚಿಟ್ಟಿದ್ದರು. ಅದಾದ ನಂತರ ಕೇರಳದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಯು ದೇವರ ನಾಡಲ್ಲಿ ಹೊಸ ಲೆಕ್ಕಾಚಾರ ಹಾಕಿಕೊಂಡು ಮುನ್ನಡೆಯುತ್ತಿರುವುದರ ಸುಳಿವು ನೀಡಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಈಸ್ಟರ್ ಹಬ್ಬದ ದಿನವಾದ ಭಾನುವಾರ ಕೇರಳದ ಪ್ರಮುಖ ಬಿಷಪ್‌ಗ್ಳ ಮನೆಗಳಿಗೆ ಬಿಜೆಪಿಯ ಹಿರಿಯ ನಾಯಕರು ಭೇಟಿ ನೀಡಿದ್ದಾರೆ.
ವಿದೇಶಾಂಗ ಇಲಾಖೆ ಸಹಾಯಕ ಸಚಿವ ವಿ.ಮುರಳೀಧರನ್ ಅವರು ಟ್ರಿವೇಂಡ್ರಂನಲ್ಲಿನ ಲ್ಯಾಟಿನ್ ಕ್ಯಾಥಲಿಕ್ ಆರ್ಚ್‌ಡಯೋಸಿಸ್‌ನ ಆರ್ಚ್‌ಬಿಷಪ್ ಥೋಮಸ್ ಜೆ.ನೆಟ್ಟೋ ಅವರ ಮನೆಗೆ ತೆರಳಿದರೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣ ದಾಸ್ ಅವರು ಕಣ್ಣೂರಿನಲ್ಲಿ ತಲಶೆÏàರಿ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪ್ಯಾಂಪ್ಲೆನಿ ಅವರನ್ನು ಭೇಟಿಯಾಗಿದ್ದಾರೆ. “ಈಸ್ಟರ್‌ನ ಶುಭ ಸಂದರ್ಭದಲ್ಲಿ ಇದೊಂದು ಫಲಪ್ರದ ಭೇಟಿ’ ಎಂದೂ ಮುರಳೀಧರನ್ ಟ್ವೀಟ್ ಮಾಡಿದ್ದಾರೆ. ಜತೆಗೆ, ತಮ್ಮ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಮೋದಿ ಚರ್ಚ್ ಭೇಟಿ:
ಇನ್ನೊಂದೆಡೆ, ಕರ್ನಾಟಕ, ತಮಿಳುನಾಡು ಪ್ರವಾಸ ಮುಗಿಸಿ ಭಾನುವಾರ ಸಂಜೆ ದೆಹಲಿಗೆ ವಾಪಸಾದ ಪ್ರಧಾನಿ ಮೋದಿ ಅವರು ದೆಹಲಿಯ ಕ್ಯಾಥಡ್ರಲ್‌ಗೆ ಭೇಟಿ ನೀಡಿದರು.
ಬಿಜೆಪಿ ಕಾರ್ಯತಂತ್ರವೇನು?
ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯವನ್ನು ತಮ್ಮತ್ತ ವಾಲುವಂತೆ ಮಾಡುವುದೇ ಬಿಜೆಪಿಯ ಕಾರ್ಯತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ. ಇದು ಕೂಡ ಕೇರಳ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಹೇಳಲಾಗಿದೆ. ಇನ್ನು, ಕಳೆದ ತಿಂಗಳಷ್ಟೇ ಆರ್ಚ್‌ಬಿಷಪ್ ಪ್ಯಾಂಪ್ಲೆನಿ ಅವರು, “ರಬ್ಬರ್ ಖರೀದಿ ದರವನ್ನು ಕೇಂದ್ರ ಸರ್ಕಾರವು ಕೆಜಿಗೆ 300ರೂ.ಗಳಿಗೆ ಏರಿಕೆ ಮಾಡಿದರೆ, ಕೇರಳದಿಂದ ಸಂಸದರನ್ನು ಹೊಂದುವ ಬಿಜೆಪಿಯ ಇಚ್ಛೆ ನೆರವೇರಲಿದೆ’ ಎಂದು ಹೇಳಿಕೆ ನೀಡಿ ಅಚ್ಚರಿ ಉಂಟುಮಾಡಿದ್ದರು. ಇದೆಲ್ಲವೂ ದೇವರ ನಾಡಿನಲ್ಲಿ ಬಿಜೆಪಿಯ ಹೆಜ್ಜೆ ಬಲವಾಗುತ್ತಿರುವುದಕ್ಕೆ ಪುಷ್ಟಿ ನೀಡಿವೆ.
ಸಚಿವ ಮುನಿರತ್ನ ಹೇಳಿಕೆ ಉಲ್ಲೇಖ
ಬಿಜೆಪಿ ನಾಯಕರ ಬಿಷಪ್ ಮನೆ ಭೇಟಿಗೆ ಪ್ರತಿಕ್ರಿಯಿಸಿರುವ ಕೇರಳ ಕಾಂಗ್ರೆಸ್, “ಬಿಜೆಪಿಯ ಕ್ರಿಶ್ಚಿಯನ್ ವಿರೋಧಿ ನಡೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯವನ್ನು ಮುಚ್ಚಿಡಲು ಈ ರೀತಿ ನಾಟಕವಾಡಲಾಗುತ್ತಿದೆ. ಕಳೆದ 4 ವರ್ಷಗಳಲ್ಲಿ ದೇಶದ 600ಕ್ಕೂ ಹೆಚ್ಚು ಚರ್ಚುಗಳ ಮೇಲೆ ದಾಳಿ ನಡೆದಿದೆ. ಕ್ರಿಸ್‌ಮಸ್ ಹಬ್ಬದ ಪ್ರಾರ್ಥನೆಗೂ ಬಿಜೆಪಿ ತೊಂದರೆ ಮಾಡಿದೆ’ ಎಂದು ಕಿಡಿಕಾರಿದೆ. ಕರ್ನಾಟಕದಲ್ಲಿ ಬಿಜೆಪಿ ಸಚಿವ ಮುನಿರತ್ನ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್, “ಕ್ರಿಶ್ಚಿಯನ್ನರು ಜನರನ್ನು ಮತಾಂತರ ಮಾಡುತ್ತಿದ್ದಾರೆ. ಮತಾಂತರ ಮಾಡಲು ಅವರು ಬಂದರೆ ಅವರನ್ನು ಒಧ್ದೋಡಿಸಿ. ಅವರು ಹಿಂದೆ ತಿರುಗಿ ನೋಡದಂತೆ ಹೊಡೆದು ಓಡಿಸಿ’ ಎಂದು ಬಿಜೆಪಿಯ ಸಚಿವ ಮುನಿರತ್ನ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಇದು ಬಿಜೆಪಿಯ ಬೂಟಾಟಿಕೆಗೆ ಸಾಕ್ಷಿ ಎಂದಿದ್ದಾರೆ. ಕ್ರಿಶ್ಚಿಯನ್ನರ ಮನೆಗೆ ಬಿಜೆಪಿ ನಾಯಕರ ಭೇಟಿಯನ್ನು ಕೇರಳ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಅವರು, “ಧೃತರಾಷ್ಟ್ರ ಆಲಿಂಗನ’ ಎಂದು ಕರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.