ಅತೀ ಹೆಚ್ಚು ಚಿನ್ನ ಧರಿಸೋ ವಧು ಕೇರಳದವರಂತೆ! ಗುಜರಾತ್ ಕನಿಷ್ಠವಂತೆ…
Team Udayavani, Jan 27, 2017, 11:06 AM IST
ಹೊಸದಿಲ್ಲಿ : ಭಾರತೀಯ ವಧುವಿಗೆ ಎಷ್ಟು ಪ್ರಮಾಣದ ಚಿನ್ನ ಅತಿ ಎಂದು ಅನ್ನಿಸಬಹುದು ? ಈ ಪ್ರಶ್ನೆಗೆ ಉತ್ತರ ಹೇಳಬೇಕಾದರೆ ಮೊದಲ ಆ ವಧುವು ಭಾರತದ ಯಾವ ಭಾಗಕ್ಕೆ ಸೇರಿದವಳು ಎಂಬುದನ್ನು ನೋಡಬೇಕಾಗುತ್ತದೆ !
ಈಚೆಗೆ ನಡೆಸಲಾದ ಹೊಸ ಸಮೀಕ್ಷೆಯ ಪ್ರಕಾರ ಕೇರಳದ ವಧು ದೇಶದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಚಿನ್ನವನ್ನು ಧರಿಸುತ್ತಾಳೆ. ಅಂತೆಯೇ ಕೇರಳ ರಾಜ್ಯ ದೇಶದಲ್ಲೇ ಅತ್ಯಧಿಕ ಪ್ರಮಾಣದ ಚಿನ್ನವನ್ನು ಬಳಸುವ ರಾಜ್ಯವೆಂದು ಪರಿಗಣಿತವಾಗಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಕಲೆ ಹಾಕಿರುವ ಮಾಹಿತಿಗಳ ಪ್ರಕಾರ ಕೇರಳದ ಮೇಲ್ ಮಧ್ಯಮ ವರ್ಗದ ವಧುವು ಬಳಸುವ ಸರಾಸರಿ ಚಿನ್ನದ ಪ್ರಮಾಣ 320 ಗ್ರಾಂ. ಎಂದರೆ ಈಗಿನ ದರದಲ್ಲಿ ಇದು 9 ಲಕ್ಷ ರೂ. ಮೌಲ್ಯದ್ದಾಗಿರುತ್ತದೆ.
ಕೇರಳಕ್ಕೆ ವ್ಯತಿರಿಕ್ತವಾಗಿ ಗುಜರಾತ್‌ನ ವಧು ಅತ್ಯಂತ ಕನಿಷ್ಠ ಪ್ರಮಾಣದ ಚಿನ್ನವನ್ನು ಬಳಸುತ್ತಾಳೆ. ಗುಜರಾತ್ ವಧುವಿನ ಸರಾಸರಿ ಚಿನ್ನದ ಬಳಕೆ ಕೇವಲ 180 ಗ್ರಾಂ.
ದಕ್ಷಿಣದ ಇತರ ರಾಜ್ಯಗಳಲ್ಲಿನ ವಧು ಬಳಸುವ ಚಿನ್ನದ ಪ್ರಮಾಣ ಸರಾಸರಿ 280 ಗ್ರಾಂ ಗಳಿಂದ 320 ಗ್ರಾಂ ಗಳ ವರೆಗಿದೆ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಒಟ್ಟಾರೆಯಾಗಿ ಬಳಸುವ ಶೇ.40ರ ಸರಾಸರಿ ಚಿನ್ನ ಬಳಕೆಯ ಪ್ರಮಾಣವು ದೇಶದ ಇತರ ಭಾಗಳಿಗೆ ಹೋಲಿಸಿದರೆ, ಎಷ್ಟೋ ಅಧಿಕವಿರುವುದು ಗಮನಾರ್ಹವಾಗಿದೆ.
ದೇಶದ ಇತರ ಭಾಗಗಳಲ್ಲಿನ ಚಿನ್ನದ ಬಳಕೆಯ ಅಂಕಿ ಅಂಶಗಳು ಈ ರೀತಿ ಇವೆ : ಪಶ್ಚಿಮ ಭಾರತ ಶೇ.25, ಉತ್ತರ ಭಾರತ ಶೇ.20, ಪೂರ್ವ ಭಾರತ ಶೇ.15 ಇದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಭಾರತೀಯ ಘಟಕದ ಆಡಳಿತ ನಿರ್ದೇಶಕರಾಗಿರುವ ಸೋಮ ಸುಂದರಂ ಪಿ ಆರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.