ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪಿಣರಾಯಿ ವಿಜಯನ್ ಆಕ್ರೋಶ
ಖಾನ್ ಆರ್‌ಎಸ್‌ಎಸ್‌ಗೆ ವಿಧೇಯತೆಯನ್ನು ತೋರಿಸುತ್ತಿದ್ದಾರೆ...
Team Udayavani, Sep 19, 2022, 9:21 PM IST
ತಿರುವನಂತಪುರಂ: ನಿರಂತರವಾಗಿ ಟೀಕಾ ಪ್ರಹಾರ ನಡೆಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಾಗ್ದಾಳಿ ನಡೆಸಿದ್ದು, ಕಮ್ಯುನಿಸ್ಟ್ ವಿರೋಧಿ ಪ್ರಚಾರಕ ಎಂದು ಕರೆದಿದ್ದಾರೆ.
‘ಎಡಪಕ್ಷಗಳನ್ನು ಗುರಿಯಾಗಿಸುವ ವಿರೋಧ ಪಕ್ಷದ ರಾಜಕಾರಣಿಗಳ ಮಟ್ಟಕ್ಕೆ ಇಳಿಯಬೇಡಿ’ ಎಂದು ಪಿಣರಾಯಿ ವಿಜಯನ್ ಒತ್ತಾಯಿಸಿದರು.
ಇದನ್ನೂ ಓದಿ: ಯುಕೆಯಲ್ಲಿ ದೇವಾಲಯದ ಮೇಲಿನ ದಾಳಿ ಖಂಡಿಸಿದ ಭಾರತ ಹೈ ಕಮಿಷನ್
ರಾಜಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ಖಾನ್ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಹಿರಿಯ ಸಿಪಿಐ(ಎಂ) ನಾಯಕ ವಿಜಯನ್, ‘ಆರಿಫ್ ಮೊಹಮ್ಮದ್ ಖಾನ್ ಆರ್‌ಎಸ್‌ಎಸ್‌ಗೆ ವಿಧೇಯತೆಯನ್ನು ತೋರಿಸುತ್ತಿದ್ದಾರೆ’ ಎಂದು ಆರೋಪಿಸಿ, ಕೇರಳ ಕಮ್ಯುನಿಸ್ಟ್ ಚಳವಳಿಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹೇಳಿದರು.
‘1957ರಲ್ಲಿ ಮತದಾನದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಮ್ಯುನಿಸ್ಟರು ದಮನಕ್ಕೆ ಒಳಗಾಗಿದ್ದರು ಎಂಬುದನ್ನು ಅಂದಿನ ಕಮ್ಯುನಿಸ್ಟ್ ವಿರೋಧಿ ಪ್ರಚಾರಕ ಖಾನ್ ಅರ್ಥ ಮಾಡಿಕೊಳ್ಳಬೇಕು’ ಎಂದು ಪಕ್ಷದ ಕಾರ್ಯಕ್ರಮದಲ್ಲಿ ವಿಜಯನ್ ಹೇಳಿದರು.
‘ರಾಜ್ಯಪಾಲರ ಹುದ್ದೆಯು ಸಾಂವಿಧಾನಿಕ ಜವಾಬ್ದಾರಿಯಾಗಿದ್ದು, ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ಥಾನವಲ್ಲ’ ಎಂದು ವಿಜಯನ್ ಹೇಳಿದರು.
‘ಇಟಲಿಯಲ್ಲಿ ಚಾಲ್ತಿಯಲ್ಲಿರುವ ಫ್ಯಾಸಿಸಂ ಮತ್ತು ಕಮ್ಯುನಿಸಂ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅಡಾಲ್ಫ್ ಹಿಟ್ಲರನ ದೃಷ್ಟಿಕೋನವನ್ನು ಆಧರಿಸಿ ಆರ್‌ಎಸ್‌ಎಸ್ ಸಿದ್ಧಾಂತ ಆಧರಿಸಿದೆ’ ಎಂದು ವಿಜಯನ್ ಆರೋಪಿಸಿದರು.
‘ಆಡಳಿತಾರೂಢ ಎಡರಂಗದ ಕಮ್ಯುನಿಸ್ಟ್ ಸಿದ್ಧಾಂತವನ್ನು ದೇಶದ ಹೊರಗಿನಿಂದ ಇಲ್ಲಿಗೆ ತರಲಾಗಿದೆ ಮತ್ತು ಇದು ಭಿನ್ನಾಭಿಪ್ರಾಯವನ್ನು ಮೌನಗೊಳಿಸಲು ಬಲಪ್ರಯೋಗಕ್ಕೆ ಅನುಮತಿ ನೀಡುತ್ತದೆ’ ಎಂದು ರಾಜ್ಯಪಾಲರು ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.