ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!
ಕೇರಳದ ನ್ಯಾಯಾಧೀಶರೊಬ್ಬರ ಮತ್ತೊಂದು ವಿವಾದಾತ್ಮಕ ತೀರ್ಪು, ಶುರುವಾಗಿದೆ ಚರ್ಚೆ
Team Udayavani, Aug 19, 2022, 7:09 PM IST
ಕಲ್ಲಿಕೋಟೆ: ಇತ್ತೀಚೆಗಷ್ಟೇ ಕೇರಳದ ಸಾಮಾಜಿಕ ಕಾರ್ಯಕರ್ತ, ಲೇಖಕ ಸಿವಿಕ್ ಚಂದ್ರನ್ ಪರವಾಗಿ ವಿವಾದಾತ್ಮಕ ತೀರ್ಪು ನೀಡಿದ್ದ; ಕಲ್ಲಿಕೋಟೆಯ ಸೆಷನ್ಸ್ ನ್ಯಾಯಾಧೀಶ ಎಸ್.ಕೃಷ್ಣಕುಮಾರ್ ಇನ್ನೊಂದು ವಿವಾದಾತ್ಮಕ ತೀರ್ಪು ನೀಡಿದ್ದು ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ, ಯುವ ಬರಹಗಾರ್ತಿಯೊಬ್ಬರು ಪ್ರಚೋದನಾತ್ಮಕ ಬಟ್ಟೆ ಧರಿಸಿದ್ದ ಕಾರಣ, ಲೈಂಗಿಕ ಕಿರುಕುಳದ ಆರೋಪ ಮಾಡಿರುವುದು ಸರಿಯಲ್ಲ ಎಂದು ನ್ಯಾ.ಕೃಷ್ಣಕುಮಾರ್ ತೀರ್ಪು ನೀಡಿದ್ದರು. ಜೊತೆಗೆ ಸಿವಿಕ್ ಚಂದ್ರನ್‌ಗೆ ಜಾಮೀನು ನೀಡಿದ್ದರು. ಇದೇ ರೀತಿಯ ಲೈಂಗಿಕ ಕಿರುಕುಳದ ದೂರನ್ನು ದಲಿತ ಲೇಖಕಿಯೊಬ್ಬರು ಹಿಂದೆಯೇ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಕೃಷ್ಣಕುಮಾರ್ ಅವರು, ಸಿವಿಕ್ ಚಂದ್ರನ್ ಜಾತಿವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ.
ಸಾಮಾಜಿಕ ಸುಧಾರಣೆ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರು ಎದುರಿಗಿರುವ ಮಹಿಳೆ ದಲಿತ ಸಮುದಾಯಕ್ಕೆ ಸೇರಿದ್ದವರು ಎಂದು ಗೊತ್ತಿದ್ದ ಮೇಲೂ, ಅವರ ಶರೀರವನ್ನು ಮುಟ್ಟಲು ಸಾಧ್ಯವೇ ಎಂದು ಹೇಳಿದ್ದರು!
ಈ ಎರಡೂ ತೀರ್ಪುಗಳು ಈಗ ಕೇರಳದಲ್ಲಿ ಬಹಳ ವಿವಾದ ಹುಟ್ಟಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.