ರಾಜ್ಯಕ್ಕೆ ವೈದ್ಯರು, ದಾದಿಯರು, ಸಿದ್ಧ ಆಹಾರದ ಅಗತ್ಯವಿದೆ: ಆಲ್ಫೋನ್ಸ್
Team Udayavani, Aug 22, 2018, 1:55 AM IST
ತಿರುವನಂತಪುರ: ಕೇರಳದಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದು ಪೀಡಿತ ಜನರಿಗೆ ಈಗ ಸಿದ್ಧ ಆಹಾರ, ವೈದ್ಯರು ಹಾಗೂ ದಾದಿಯರ ಅಗತ್ಯ ಎಲ್ಲಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫೋನ್ಸ್ ಹೇಳಿದ್ದಾರೆ. ಜನರು ತಮ್ಮ ಮನೆಗಳಿಗೆ ಮರಳಲಾರಂಭಿಸಿದ್ದಾರೆ ಎಂದು ತಿಳಿಸಿದ ಅವರು, ಮನೆಗಳನ್ನು ವಾಸಯೋಗ್ಯವನ್ನಾಗಿ ಮಾಡಲು ಮತು ರಾಜ್ಯ ಸಹಜ ಸ್ಥಿತಿಗೆ ಮರಳುವಂತಾಗಲು ನೆರವಾಗುವಂತೆ ಪ್ಲಂಬರ್‌ಗಳು, ಎಲೆಕ್ಟ್ರಿಶಿಯನ್‌ಗಳು ಹಾಗೂ ಬಡಗಿಗಳಂಥ ಕುಶಲಕರ್ಮಿಗಳಿಗೆ ಮನವಿ ಮಾಡಿದರು.
ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯುಂಟಾಗಿದೆ. ಆದ್ದರಿಂದ ಹಳ್ಳಿಗಳಿಗೆ ತೆರಳಬಲ್ಲಂಥ ವೈದ್ಯರು ಹಾಗೂ ದಾದಿಯರ ಅಗತ್ಯವಿದೆ. ಅಲ್ಲದೆ ಜನರಿಗೆ ಹೊಸ ಬಟ್ಟೆಬರೆಗಳು, ಒಣಹಣ್ಣುಗಳು, ಸಿದ್ಧ ಆಹಾರಗಳ ಅಗತ್ಯವಿದೆ ಎಂದರು. ಅಗಾಧ ಪ್ರಮಾಣದ ಟೆಟ್ರಾ ಪ್ಯಾಕ್ ಹಾಲು ಪೂರೈಸಿರುವ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಲಿಗೆ (ಎನ್‌ಡಿಡಿಬಿ) ಮತ್ತು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಕೋಟಿ ರೂ.ಗಳನ್ನು ಸಂಗ್ರಹಿಸಿ ನೀಡಿದ ಸಾರ್ವಜನಿಕ ರಂಗದ ತೈಲ ಸಂಸ್ಥೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.