ಸಿಪಿಎಂ ನಾಯಕರು ನನ್ನಿಂದ “ಲೈಂಗಿಕ ಸಹಕಾರ’ ಬಯಸಿದ್ದರು!

ಕೇರಳ ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‌ ಗಂಭೀರ ಆರೋಪ

Team Udayavani, Oct 24, 2022, 8:45 PM IST

ಸಿಪಿಎಂ ನಾಯಕರು ನನ್ನಿಂದ “ಲೈಂಗಿಕ ಸಹಕಾರ’ ಬಯಸಿದ್ದರು!

ತಿರುವನಂತಪುರಂ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಸಿಪಿಎಂನ ಹಲವು ಮಾಜಿ ಸಚಿವರು ನನ್ನಿಂದ “ಲೈಂಗಿಕ ಸಹಕಾರ’ ಕೋರಿದ್ದರು ಎಂದು ಸ್ವಪ್ನಾ ಸೋಮವಾರ ಆರೋಪಿಸಿದ್ದಾರೆ. ಇದು ಕೇರಳದಲ್ಲಿ ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಕೇರಳದ ಆಡಳಿತಾರೂಢ ಕಮ್ಯೂನಿಸ್ಟ್‌ ಪಕ್ಷದ ಮೂವರು ಪ್ರಮುಖ ನಾಯಕರ ವಿರುದ್ಧವೇ ಸ್ವಪ್ನಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌, ಕೇರಳ ಅಸೆಂಬ್ಲಿಯ ಮಾಜಿ ಸ್ಪೀಕರ್‌ ಪಿ. ಶ್ರೀರಾಮಕೃಷ್ಣನ್‌ ಮತ್ತು ಮಾಜಿ ಹಣಕಾಸು ಸಚಿವ ಡಾ.ಥಾಮಸ್‌ ಐಸಾಕ್‌ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದೂ ಸ್ವಪ್ನಾ ಆರೋಪಿಸಿದ್ದಾರೆ.

ನಾನು ತಿರುವನಂತಪುರಂನ ಯುಎಇ ಕಾನ್ಸುಲ್‌ ಜನರಲ್‌ನ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಮೂವರು ನಾಯಕರು ಪಿಣರಾಯಿ ವಿಜಯನ್‌ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಸಚಿವರಾಗಿದ್ದರು. ಆಗ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸುರೇಂದ್ರನ್‌ ಮತ್ತು ಶ್ರೀರಾಮಕೃಷ್ಣನ್‌ ನನ್ನ ಮೇಲೆ ಒತ್ತಡ ಹೇರಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಮತ್ತು ಮುಖಾಮುಖಿಯಾದಾಗಲೂ ನನ್ನೊಂದಿಗೆ ಆಕ್ಷೇಪಾರ್ಹವಾಗಿ ವರ್ತಿಸಿದ್ದರು. ಇನ್ನು, ಥಾಮಸ್‌ ಅವರು ಪರೋಕ್ಷವಾಗಿ ನನ್ನಿಂದ ಲೈಂಗಿಕ ಸಹಕಾರ ಕೋರಿದ್ದರು. ಇವರೆಲ್ಲರೂ ನೈತಿಕತೆ ಇಲ್ಲದ ವ್ಯಕ್ತಿಗಳು ಎಂದು ಸ್ವಪ್ನಾ ಕಿಡಿಕಾರಿದ್ದಾರೆ.

ಸ್ವಪ್ನಾರ ಈ ಆರೋಪವನ್ನು ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ತಿರಸ್ಕರಿಸಿದೆ. “ಎಡಪಕ್ಷವು ಯಾವತ್ತೂ ತನ್ನ ಸದಸ್ಯರನ್ನು ರಕ್ಷಿಸಲು ಯತ್ನಿಸುತ್ತದೆ’ ಎಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಆರೋಪಿಸಿದೆ.

ಟಾಪ್ ನ್ಯೂಸ್

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MVA-maha

Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್‌!

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Rain-TN

Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು

Nishkath-Dube

Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MVA-maha

Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್‌!

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Rain-TN

Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MVA-maha

Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್‌!

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.