Kerala government : ರಾಷ್ಟ್ರಪತಿ, ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋದ ಕೇರಳ
Team Udayavani, Mar 24, 2024, 9:54 AM IST
ಹೊಸದಿಲ್ಲಿ: ಕೇರಳ ವಿಧಾನಸಭೆಯಿಂದ ಅನುಮೋ ದನೆಗೊಂಡ 4 ಮಸೂದೆಗಳನ್ನು ಯಾವುದೇ ಕಾರಣ ನೀಡದೇ ರಾಷ್ಟ್ರಪತಿಗಳು ತಡೆಹಿಡಿದಿರುವುದಕ್ಕೆ ಹಾಗೂ 2 ವರ್ಷಗಳಿಂದ 7 ಮಸೂದೆಗಳನ್ನು ಕೇರಳ ರಾಜ್ಯಪಾಲರು ತಮ್ಮಲ್ಲೇ ಬಾಕಿ ಉಳಿಸಿಕೊಂಡು ಬಳಿಕ ರಾಷ್ಟ್ರಪತಿಗಳಿಗೆ ಕಳುಹಿಸಿರುವುದರ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ರಾಷ್ಟ್ರಪತಿ ಕ್ರಮವು “ಅಸಾಂವಿಧಾನಿಕ ಮತ್ತು ವಿಶ್ವಾಸದ ಕೊರತೆ’ ಎಂದು ಘೋಷಿಸುವಂತೆ ಕೇರಳ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಸಂಬಂಧ ಸಂವಿಧಾನದ 32ನೇ ವಿಧಿಯಡಿ ಕೇರಳ ರಿಟ್ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಕೇಂದ್ರ ಮತ್ತು ಕೇರಳ ನಡುವೆ ಸಂಘರ್ಷ ಮತ್ತೂಂದು ಹಂತಕ್ಕೆ ತಲುಪಿದೆ.
ಆರೋಪಗಳೇನು?:
7 ಮಸೂದೆಗಳ 4 ಮಸೂದೆ ತಡೆಹಿಡಿದಿದ್ದಕ್ಕೆ ರಾಷ್ಟ್ರಪತಿ ಯಾವುದೇ ಕಾರಣ ನೀಡಿಲ್ಲ.
ಇದು ಸಂವಿಧಾನದ 14ನೇ ವಿಧಿ, 200ನೇ ವಿಧಿ ಮತ್ತು 201ನೇ ವಿಧಿಯ ಉಲ್ಲಂಘನೆ
ರಾಜ್ಯಪಾಲರು 2 ವರ್ಷಗಳಿಂದ ಮಸೂದೆಗಳನ್ನು ಬಾಕಿ ಇರಿಸಿಕೊಂಡಿದ್ದಾರೆ.
ಇದು ರಾಜ್ಯ ಶಾಸಕಾಂಗದ ಕಾರ್ಯ
ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.