ನನ್ನ ಹತ್ಯೆಗೆ ಪ್ರಯತ್ನ ನಡೆದಿತ್ತು: ಕೇರಳ ರಾಜ್ಯಪಾಲ ಆರಿಫ್ ಖಾನ್ ಆಕ್ರೋಶ
ಕಮ್ಯುನಿಸ್ಟ್ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ ರಾಜ್ಯಪಾಲರು
Team Udayavani, Sep 17, 2022, 4:16 PM IST
ಕೊಚ್ಚಿ : ”ಕಣ್ಣೂರಿನಲ್ಲಿ ನನ್ನ ಮೇಲೆ ದೈಹಿಕ ದಾಳಿ ಮಾಡಲು ಯತ್ನಿಸಲಾಗಿತ್ತು, ಅದು ಪಿತೂರಿ.ಭಾರತದ ಹೊರಗೆ ಹುಟ್ಟಿಕೊಂಡ ಕೆಲವು ಸಿದ್ಧಾಂತಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಬಲವನ್ನು ಬಳಸಲಾಗುತ್ತಿದೆ” ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಕ್ರೋಶ ಹೊರ ಹಾಕಿದ್ದಾರೆ.
”3 ವರ್ಷಗಳ ಹಿಂದೆ ಕಣ್ಣೂರಿನಲ್ಲಿ ನನ್ನ ಕೊಲೆ ಪ್ರಯತ್ನ ನಡೆದಿತ್ತು. ಪೊಲೀಸರು ಪ್ರಕರಣ ದಾಖಲಿಸದಂತೆ ತಡೆದಿದ್ದು ಯಾರು? ಗೃಹ ಇಲಾಖೆಯನ್ನು ಹಿಡಿದವರು ಯಾರು? ನೀವು ರಾಜ್ಯಪಾಲರ ಕಚೇರಿಯನ್ನು ಕೀಳಾಗಿ ಕಾಣಲು ಪ್ರಯತ್ನಿಸುತ್ತಿದ್ದೀರಿ. ನನ್ನ ಮೇಲೆ ಒತ್ತಡ ಹೇರಲು, ನನ್ನನ್ನು ಹೆದರಿಸಲು ಪ್ರಯತ್ನಿಸಲು ನೀವು ಎಲ್ಲಾ ತಂತ್ರಗಳನ್ನು ಪ್ರಯತ್ನಿಸಿದ್ದೀರಿ” ಎಂದು ಎಡ ಪಕ್ಷಗಳ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಇಂಜಿನಿಯರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಚಿವ ಸೋಮಶೇಖರ್ ತರಾಟೆ
”ವಿಶ್ವವಿದ್ಯಾನಿಲಯ ಕಾನೂನು ತಿದ್ದುಪಡಿ ಮಸೂದೆ” ಕುರಿತು ಮಾತನಾಡಿ, ”ಎಲ್ಲವನ್ನೂ ಅರ್ಹತೆಯ ಮೇಲೆ ಪರಿಗಣಿಸಲಾಗುವುದು. ಉಪಕುಲಪತಿಗಳನ್ನು ನಿರ್ವಹಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗುವುದಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಇದು ಕಾರ್ಯನಿರ್ವಾಹಕ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ” ಎಂದು ರಾಜ್ಯಪಾಲರು ಹೇಳಿದರು.
”ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡಿ ಸಿಎಂ ನನಗೆ ಪತ್ರ ಬರೆದಿದ್ದಾರೆ ಮತ್ತು ಈಗ ಅವರು ಉಪಕುಲಪತಿಯನ್ನು ನೇಮಿಸುವುದಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದು ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯ ಅಧಃಪತನವನ್ನು ಅರ್ಥೈಸುತ್ತದೆ. ನಾನಿಲ್ಲಿ ಇರುವವರೆಗೂ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯ ಅಧಃಪತನಕ್ಕೆ ಅವಕಾಶ ನೀಡುವುದಿಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.