ಶತಮಾನದ ದುರಂತಕ್ಕೆ ನಲುಗಿದ ಕೇರಳದಲ್ಲಿ ಶಾಸಕರ ನಿವಾಸಕ್ಕೆ 80 ಕೋಟಿ !
Team Udayavani, Oct 24, 2018, 5:54 PM IST
ತಿರುವನಂತಪುರ : ಈಗಷ್ಟೇ ಮುಗಿದಿರುವ ಮಳೆಗಾಲದಲ್ಲಿ ಭೀಕರ ಪ್ರವಾಹ ಮತು ವ್ಯಾಪಕ ಗುಡ್ಡ ಕುಸಿತದ ಶತಮಾನದ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಅಪಾರ ಜೀವ ಹಾನಿ, ನಾಶ ನಷ್ಟಕ್ಕೆ ನಲುಗಿದ್ದ ಕೇರಳ ಸರಕಾರ ರಾಜ್ಯ ಪುನರ್ ನಿರ್ಮಾಣಕ್ಕೆ ಧನ ಸಹಾಯವನ್ನು ಕೋರುತ್ತಿರುವ ನಡುವೆಯೇ ಇದೀಗ ತನ್ನ ಶಾಸಕರಿಗಾಗಿ 80 ಕೋಟಿ ರೂ. ವೆಚ್ಚದ ಅಪಾರ್ಟ್‌ಮೆಂಟ್ ಸಂಕೀರ್ಣ ನಿರ್ಮಿಸಲು ಮುಂದಾಗಿರುವುದು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ.
ರಾಜ್ಯ ರಾಜಧಾನಿಯ ಹೃದಯ ಭಾಗದಲ್ಲಿರುವ ಶಾಸಕರ ನಿವಾಸದ ಹಳೇ ಕಟ್ಟಡ ಸಂಕೀರ್ಣವನ್ನು ಒಡೆದು ತೆಗೆದು ಅಲ್ಲಿ 80 ಕೋಟಿ ರೂ. ಹೊಸ ಅಪಾರ್ಟ್‌ಮೆಂಟ್ ಸಂಕೀರ್ಣ ನಿರ್ಮಿಸುವುದು ಕೇರಳ ಸರಕಾರದ ಮುಂದಿರುವ ಯೋಜನೆಯಾಗಿದೆ.
ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇರಳ ಸ್ಪೀಕರ್ ವಿ ಎಂ ಸುಧೀರನ್ ಮಾತನಾಡಿ, “ಶಾಸಕರಿಗೆ ಹೊಸ ವಸತಿ ಸೌಕರ್ಯ ಬೇಕು ಎನ್ನುವುದರಲ್ಲಿ ಸಂದೇಹವೇ ಇಲ್ಲ; ಆದರೆ ಶತಮಾನದ ನೈಸರ್ಗಿಕ ಪ್ರಕೋಪದಿಂದ ನಲುಗಿರುವ ಈ ವಿಷಮ ಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯನ್ನು ಅನುಷ್ಠಾನಿಸಲು ಸರಕಾರ ಮುಂದಾಗಿರುವುದು ಆಘಾತಕಾರಿಯಾಗಿದೆ’ ಎಂದು ಹೇಳಿದರು.
ರಾಜ್ಯದಲ್ಲಿ ಶತಮಾನದ ನೈಸರ್ಗಿಕ ಪ್ರಕೋಪಕ್ಕೆ ತುತ್ತಾಗಿ ಮನೆ ಮಾರು ಕಳೆದುಕೊಂಡಿರುವ ಅಸಂಖ್ಯಾತ ಜನರಿಗೆ ಪುನರ್ ವಸತಿ ಕಲ್ಪಿಸಲು ಆಗಾಧ ಮೊತ್ತದ ಹಣ ಬೇಕಿರುವ ಈ ಸಂದರ್ಭದಲ್ಲಿ ಶಾಸಕರ ಅಪಾರ್ಟ್‌ಮೆಂಟ್‌ನ ಒಂದೇ ಯೋಜನೆಗೆ 80 ಕೋಟಿ ರೂ. ವ್ಯಯಿಸುವುದು ನ್ಯಾಯೋಚಿತವಲ್ಲ ಎಂದು ಸುಧೀರನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.